/newsfirstlive-kannada/media/media_files/2025/09/06/shreyas-iyer-captain-2025-09-06-19-56-29.jpg)
ಭಾರತ A ತಂಡವು ಸದ್ಯದಲ್ಲೇ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ. ಅದಕ್ಕಾಗಿ ತಂಡ ಪ್ರಕಟವಾಗಿದ್ದು, ಶ್ರೇಯಸ್ ಅಯ್ಯರ್ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ.
ತಂಡದಲ್ಲಿ ಯಾರಿಗೆಲ್ಲ ಚಾನ್ಸ್..?
ಶ್ರೇಯಸ್ ಅಯ್ಯರ್ (ಕ್ಯಾಪ್ಟನ್), ಅಭಿಮನ್ಯು ಈಶ್ವರನ್, ಎನ್. ಜಗದೀಶನ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಧ್ರುವ್ ಜುರೇಲ್ (ಉಪನಾಯಕ ಮತ್ತು ವಿಕೆಟ್ ಕೀಪರ್), ದೇವದತ್ತ ಪಡಿಕ್ಕಲ್, ಹರ್ಷ ದುಬೆ, ಆಯುಷ್ ಬದೋನಿ, ನಿತೀಶ್ ಕುಮಾರ್ ರೆಡ್ಡಿ, ತುನುಷ್ ಕೊಟಿಯಾನ್ ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಖಲೀಲ್ ಅಹ್ಮದ್, ಯಶ್ ಟಾಕೂರ್ ಸದ್ಯ ತಂಡದಲ್ಲಿದ್ದಾರೆ.
ಬಿಸಿಸಿಐ ನೀಡಿದ ಮಾಹಿತಿ ಪ್ರಕಾರ, ಕೆ.ಎಲ್.ರಾಹುಲ್ ಮತ್ತು ಮೊಹ್ಮದ್ ಸಿರಾಜ್ ಕೂಡ ಕೊನೆಯಲ್ಲಿ ತಂಡಕ್ಕೆ ಸೇರ್ಪಡೆ ಆಗಲಿದ್ದಾರೆ. ಸೆಪ್ಟೆಂಬರ್ 16 ರಿಂದ ಆಸ್ಟ್ರೇಲಿಯಾ ವಿರುದ್ಧ ಮಲ್ಟಿ ಡೇ ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್ 16 ರಿಂದ ಶುರುವಾಗಿ ಸೆಪ್ಟೆಂಬರ್ 19ಕ್ಕೆ ಅಂತ್ಯಗೊಳ್ಳಲಿದೆ. ಎರಡನೇ ಮಲ್ಟಿ ಡೇ ಮ್ಯಾಚ್ ಸೆಪ್ಟೆಂಬರ್ 23 ರಿಂದ ಶುರುವಾಗಿ ಸೆಪ್ಟೆಂಬರ್ 26ಕ್ಕೆ ಕೊನೆಗಳ್ಳಲಿದೆ. ಲಕ್ನೋ ಮೈದಾನದಲ್ಲಿ ಪಂದ್ಯಗಳು ಆಯೋಜನೆಗೊಂಡಿವೆ.
ಇದನ್ನೂ ಓದಿ:ಬಿಸಿಸಿಐನಲ್ಲಿ ‘ದಾದಾ’ಗಿರಿ ಮತ್ತೆ ಆರಂಭವಾಗುತ್ತಾ.. ಇಂಡಿಯನ್ ಕ್ರಿಕೆಟ್ಗೆ ಅಧ್ಯಕ್ಷರು ಯಾರು?