ಬಿಸಿಸಿಐನಲ್ಲಿ ‘ದಾದಾ’ಗಿರಿ ಮತ್ತೆ ಆರಂಭವಾಗುತ್ತಾ.. ಇಂಡಿಯನ್ ಕ್ರಿಕೆಟ್​ಗೆ ಅಧ್ಯಕ್ಷರು ಯಾರು?

ಶ್ರೀಮಂತ ಕ್ರಿಕೆಟ್​ ಸಂಸ್ಥೆ ಬಿಸಿಸಿಐ ವಲಯದಲ್ಲಿ ಬದಲಾವಣೆಯ ಬಿರುಗಾಳಿ ಜೋರಾಗಿ ಬೀಸ್ತಾಯಿದೆ. ರೋಜರ್​ ಬಿನ್ನಿ ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿದ್ದು, ನೂತನ ಬಾಸ್​ ನೇಮಕಕ್ಕೆ ಕಸರತ್ತು ಶುರುವಾಗಿದೆ.

author-image
Bhimappa
TEAM_INDIA (5)
Advertisment

ವಿಶ್ವದ ಶ್ರೀಮಂತ ಕ್ರಿಕೆಟ್​ ಸಂಸ್ಥೆ ಬಿಸಿಸಿಐ ವಲಯದಲ್ಲಿ ಬದಲಾವಣೆಯ ಬಿರುಗಾಳಿ ಜೋರಾಗಿ ಬೀಸ್ತಾಯಿದೆ. ರೋಜರ್​ ಬಿನ್ನಿ ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿದ್ದು, ನೂತನ ಬಾಸ್​ ನೇಮಕಕ್ಕೆ ಕಸರತ್ತು ಶುರುವಾಗಿದೆ. ಅಧ್ಯಕ್ಷ ಪಟ್ಟದ ರೇಸ್​​ಗೆ ಬೆಂಗಾಲ್​ ಪ್ರಿನ್ಸ್​ ಎಂಟ್ರಿಯಾಗಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಭಾರತೀಯ ಕ್ರಿಕೆಟ್​​ನಲ್ಲಿ ಮತ್ತೆ ದಾದಾಗಿರಿ ಶುರುವಾಗಲಿದೆ. 

ಟೀಮ್​ ಇಂಡಿಯಾ ಆಯ್ತು.. ಇದೀಗ ಬಿಸಿಸಿಐನಲ್ಲಿ ಬದಲಾವಣೆಯ ಗಾಳಿ ಜೋರಾಗಿ ಬೀಸ್ತಿದೆ. 70 ವರ್ಷ ಮೇಲ್ಪಟ್ಟವರು ಪದಾಧಿಕಾರಿಯಾಗಿ ಮುಂದುವರೆಯಬಾರದು ಅನ್ನೋದು ಬಿಸಿಸಿಐ ನಿಯಮ. ಹೀಗಾಗಿ ಇತ್ತೀಚೆಗಷ್ಟೇ 70ನೇ ವರ್ಷಕ್ಕೆ ಕಾಲಿಟ್ಟ ರೋಜರ್​ ಬಿನ್ನಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇದೀಗ ಭಾರತೀಯ ಕ್ರಿಕೆಟ್​​ನ ಮುಂದಿನ ಬಿಗ್​ಬಾಸ್​ ಯಾರಾಗ್ತಾರೆ.? ಅನ್ನೋ ಕುತೂಹಲ ಕ್ರಿಕೆಟ್​ ವಲಯದಲ್ಲಿ ಮನೆ ಮಾಡಿದೆ. 

sourav_ganguly_NEW

ಬಿಸಿಸಿಐನಲ್ಲಿ ಮತ್ತೆ ‘ದಾದಾಗಿರಿ’ ಆರಂಭಕ್ಕೆ ಕೌಂಟ್​ಡೌನ್​.!

ರೋಜರ್​​ ಬಿನ್ನಿ ಪಟ್ಟದಿಂದ ಕೆಳಗಿಳಿದ ಬಳಿಕ ನಡೆದ ಹಂಗಾಮಿ ಅಧ್ಯಕ್ಷರಾಗಿ ರಾಜೀವ್​ ಶುಕ್ಲಾ ಆಯ್ಕೆ ಆಗಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ವಾರ್ಷಿಕ ಸಾಮಾನ್ಯ ಸಭೆ ಇದೇ ರಾಜೀವ್​ ಶುಕ್ಲಾ ನೇತೃತ್ವದಲ್ಲಿ ನಡೆದಿತ್ತು. ಆಗ ಬಿಸಿಸಿಐ ಪಡಸಾಲೆಯಲ್ಲಿ ರಾಜೀವ್​ ಶುಕ್ಲಾನೇ ಮುಂದಿನ ಅಧ್ಯಕ್ಷ ಎಂಬ ಸುದ್ದಿ ಓಡಾಡಿತ್ತು. ಆದ್ರೆ, ಇದೀಗ ಅಧ್ಯಕ್ಷಗಾದಿಯ ರೇಸ್​​ಗೆ ಸರ್​​ಪ್ರೈಸ್​ ಹೆಸರಿನ ಎಂಟ್ರಿಯಾಗಿದೆ. ಬಿಸಿಸಿಐನಲ್ಲಿ ಮತ್ತೆ ದಾದಾಗಿರಿ ಶುರುವಾಗುತ್ತೆ ಎಂಬ ಟಾಕ್​​ ಬಲವಾಗಿ ಕೇಳಿ ಬರ್ತಾ ಇದೆ. 

ಇಂಡಿಯನ್​ ಕ್ರಿಕೆಟ್​​ಗೆ ಮತ್ತೆ ಗಂಗೂಲಿ ‘ಬಿಗ್​ಬಾಸ್​​​’.?

ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ ಇದೀಗ ಮತ್ತೆ ಅಧ್ಯಕ್ಷ ಹುದ್ದೆಯ ರೇಸ್​​ಗಿಳಿದಿದ್ದಾರೆ. 2019ರಿಂದ 2022ರವರೆಗೆ ಅಧ್ಯಕ್ಷರಾಗಿ ದಾದಾ ಗಂಗೂಲಿ ಸೇವೆ ಸಲ್ಲಿಸಿದ್ರು. ಅದಾದ ಬಳಿಕ ಕ್ರಿಕೆಟ್​ ಆಡಳಿತದಿಂದ ದೂರ ಉಳಿದಿದ್ದ ಬೆಂಗಾಲ್​ ಪ್ರಿನ್ಸ್​, ಇದೀಗ ಇನ್ನೊಂದು ಅವಧಿಗೆ ಬಿಸಿಸಿಐ ಬಾಸ್​​ಗಳು ಆಸಕ್ತಿ ತೋರಿಸಿದ್ದಾರೆ. ಈ ವಿಚಾರವನ್ನ ಗಂಗೂಲಿ ಆಪ್ತಮೂಲಗಳು ರಿವೀಲ್​ ಮಾಡಿವೆ. 

ಕ್ರಿಕೆಟಿಗರಿಗೆ ಮಣೆ ಹಾಕಲು ಬಿಸಿಸಿಐನಲ್ಲಿ ಒಲವು.! 

ಬಿಸಿಸಿಐ, ಕ್ರಿಕೆಟ್​​ ನಿಯಂತ್ರಣ ಮಂಡಳಿಯಾಗಿರೋದ್ರಿಂದ ಕ್ರಿಕೆಟಿಗರೇ ಮತ್ತೆ ಅಧ್ಯಕ್ಷರಾಗಬೇಕು ಎಂಬ ನಿಲುವು ಬಿಸಿಸಿಐನಲ್ಲಿದೆ. 2019ರಿಂದ ಅದೇ ಪರಿಪಾಠ ಪಾಲಿಸಿಕೊಂಡು ಬರಲಾಗಿದೆ. ಗಂಗೂಲಿ ಆ ಬಳಿಕ ಬಿನ್ನಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈಗಲೂ ಮತ್ತೆ ಮಾಜಿ ಕ್ರಿಕೆಟಿಗರಿಗೇ ಪಟ್ಟ ಕಟ್ಟ ಬೇಕು ಅನ್ನೋ ಕೂಗು ಬಿಸಿಸಿಐ ವಲಯದಲ್ಲಿ ಬಲವಾಗಿದೆ. ಹೀಗಾಗಿ ಗಂಗೂಲಿ ಮತ್ತೆ ಅಧ್ಯಕ್ಷರಾಗೋ ಸಾಧ್ಯತೆ ದಟ್ಟವಾಗಿದೆ. 

ಮತ್ತೊಂದು ಅವಧಿಗೆ ಅಧಿಕಾರ ಬಯಸಿದ್ದ ಗಂಗೂಲಿ.!

2019ರಲ್ಲಿ ಸೌರವ್​ ಗಂಗೂಲಿ ಬಿಸಿಸಿಐ ಅಧ್ಯಕ್ಷ ಪಟ್ಟಕ್ಕೇರಿದ್ದೇ, ಅಚ್ಚರಿಯ ಬೆಳವಣಿಗೆ. ಎಲೆಕ್ಷನ್​ ಹಿಂದಿನ ದಿನದವರೆಗೂ ಬ್ರಿಜೇಶ್​ ಪಟೇಲ್​ ಹೆಸರೇ ಬಿಸಿಸಿಐ ಅಧ್ಯಕ್ಷ​ ಸ್ಥಾನಕ್ಕೆ ಪ್ರಬಲವಾಗಿ ಕೇಳಿ ಬಂದಿತ್ತು. ಬಹುತೇಕ ಎಲ್ಲರೂ ಇದೇ ಫೈನಲ್​ ಎಂದೇ ಫಿಕ್ಸ್​ ಆಗಿದ್ರು. ಆದ್ರೆ, ಆ ಬಳಿಕ ನಡೆದ ದಿಢೀರ್​ ಬೆಳವಣಿಗೆಯಲ್ಲಿ ಬೆಂಗಾಲ್​ ಕ್ರಿಕೆಟ್​ನ ಪ್ರತಿನಿಧಿಯಾಗಿದ್ದ ಗಂಗೂಲಿ ಪಟ್ಟಕ್ಕೇರಿದ್ರು. ಸಮರ್ಥವಾಗಿ 4 ವರ್ಷಗಳ ಕಾಲ ಆಡಳಿತ ನಿರ್ವಹಿಸಿದ ಗಂಗೂಲಿ ಮತ್ತೊಂದು ಅವಧಿಗೆ ಅಧಿಕಾರ ಬಯಸಿದ್ರು. ಆದ್ರೆ, ಆಗ ನಡೆದ ರಾಜಕೀಯದಾಟದಲ್ಲಿ ಗಂಗೂಲಿ ಪಟ್ಟ ಮಿಸ್ ಆಗಿತ್ತು. 

ಇದನ್ನೂ ಓದಿ: ವರ್ಲ್ಡ್​​ಕಪ್​ನಲ್ಲಿ ಸೌಂದರ್ಯ ಗಣಿ.. ಸ್ಮೃತಿ ಮಂದಾನ, ಪೆರ್ರಿ, ಕೆರ್, ಲಾರೆನ್​ ಬೆಲ್ ಸೇರಿ ಬ್ಯೂಟೀಸ್..!

sourav_ganguly (1)

AGM ಮೀಟಿಂಗ್​ನಲ್ಲಿ ಹೊಸ ಅಧ್ಯಕ್ಷರ ಆಯ್ಕೆ.!

ಇದೇ ತಿಂಗಳ ಅಂತ್ಯದಲ್ಲಿ ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯ ಕ್ರಿಕೆಟ್​ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಬಿಸಿಸಿಯ ಪದಾದಿಕಾರಿಗಳು ಭಾಗಿಯಾಗಲಿದ್ದು ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಸದ್ಯಕ್ಕಂತೂ ಗಂಗೂಲಿ ಹಾಗೂ ರಾಜೀವ್​ ಶುಕ್ಲಾ ಇಬ್ಬರೇ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳಾಗಿದ್ದಾರೆ.

ಆಡಳಿತ ಮಂಡಳಿಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ರಾಜೀವ್​ ಶುಕ್ಲಾ, ಗಂಗೂಲಿ ಇಬ್ಬರಿಗೂ ಇದೆ. ಆದ್ರೆ, ಕ್ರಿಕೆಟಿಗರಿಗೇ ಪಟ್ಟ ಕಟ್ಟಬೇಕು ಅನ್ನೋ ನಿಲುವು ಬಿಸಿಸಿಐನಲ್ಲಿ ಇರೋದ್ರಿಂದ ಗಂಗೂಲಿಗೆ ಮತ್ತೆ ಬಿಸಿಸಿಐ ಬಾಸ್​ ಆಗೋ ಸಾಧ್ಯತೆ ದಟ್ಟವಾಗಿದೆ. ಈ ತಿಂಗಳ ಅಂತ್ಯದಲ್ಲಿ ಈ ಕುತೂಹಲಕ್ಕೆ ಬ್ರೇಕ್​ ಬೀಳಲಿದೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Indian cricket team news cricketers love cricket players Sourav Ganguly
Advertisment