/newsfirstlive-kannada/media/media_files/2025/09/06/smriti_mandhana_world_cup-2025-09-06-12-48-11.jpg)
ಇವರು ಯಾವುದರಲ್ಲೂ ಕಡಿಮೆ ಇಲ್ಲ. ಆಟದ ಬಗ್ಗೆ ನಾವು ಏನು ಹೇಳೋದೆ ಬೇಡ. ಇವ್ರು ಬ್ಯಾಟ್ ಹಿಡಿದು ಅಂಗಳಕ್ಕಿಳಿದರೆ ಸಾಕು ಇವ್ರ ಹೆಸರು ಮೈದಾನದುದ್ದಕ್ಕೂ ಗುನುಗುತ್ತೆ. ಇವರ ಆಟಕ್ಕೆ ಮಾತ್ರವಲ್ಲ, ಇವ್ರ ಸೌಂದರ್ಯಕ್ಕೂ ಸಪರೇಟ್ ಫ್ಯಾನ್ ಬೇಸ್ ಇದೆ. ಯಾವ ಬಾಲಿವುಡ್ ಹಾಲಿವುಡ್ ನಟಿಯರಿಗೂ ಇವ್ರನು ಕಡಿಮೆ ಇಲ್ಲ ಬಿಡಿ.. ಇವರ ಸೌಂದರ್ಯ ಲಹರಿಗೆ ಎಂಥವರೂ ಮನಸೋಲಬೇಕು..
ಭಾರತದ ಆತಿಥ್ಯದಲ್ಲಿ ನಡೆಯೋ ಮಹಿಳಾ ಏಕದಿನ ವಿಶ್ವಕಪ್ ಸಮರಕ್ಕೆ ಕೌಂಟ್ಡೌನ್ ಶುರುವಾಗಿದೆ. ಈ ತಿಂಗಳ ಅಂತ್ಯದಿಂದ ಆರಂಭವಾಗೋ ಪ್ರತಿಷ್ಟೆಯ ಟೂರ್ನಿಯನ್ನ ಕಣ್ತುಂಬಿಕೊಳ್ಳೋಕೆ ಫ್ಯಾನ್ಸ್ ರೆಡಿಯಾಗಿದ್ದಾರೆ.
ಅಭಿಮಾನಿಗಳಲ್ಲಿ ವಲಯದಲ್ಲಿ ಕ್ರೇಜ್ ಹೆಚ್ಚಾಗೋಕೆ ಎರಡು ಕಾರಣಗಳಿವೆ. ಕ್ರಿಕೆಟ್ ಮೇಲಿನ ಪ್ರೀತಿ ಒಂದು ಕಡೆಯಾದರೆ, ವಿಶ್ವ ಕ್ರಿಕೆಟ್ ಲೋಕ ಮೋಸ್ಟ್ ಬ್ಯೂಟಿಫುಲ್ ಆಟಗಾರ್ತಿಯರ ಕಣ್ತುಂಬಿಕೊಳ್ಳೋ ಕಾತರ ಇನ್ನೊಂದೆಡೆ. ಅದರಲ್ಲೂ ಈ ಐವರು ಮೋಸ್ಟ್ ಬ್ಯೂಟಿಫುಲ್ ವುಮೆನ್ ಕ್ರಿಕೆಟರ್ಸ್ ಟೂರ್ನಿಗೂ ಮುನ್ನ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚಿಸಿದ್ದಾರೆ.
ಸೌಂದರ್ಯದ ರಾಣಿ ಸ್ಮೃತಿ ಮಂದಾನ.!
ಸ್ಮೃತಿ ಮಂದಾನ.. ಆರ್ಸಿಬಿ ನಾಯಕಿ, ಟೀಮ್ ಇಂಡಿಯಾ ಉಪನಾಯಕಿ ಸದ್ಯ ಕ್ರಿಕೆಟ್ ಲೋಕದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಮಹಿಳಾ ಕ್ರಿಕೆಟರ್. ವಿದೇಶಗಳಲ್ಲೇ ಮಂದಾನ ಅಂದರೆ ವಿಶೇಷವಾದ ಕ್ರೇಜ್ ಇದೆ. ಇನ್ನು, ಭಾರತದಲ್ಲಿ ಕೇಳಬೇಕಾ.? ಈಕೆಯನ್ನ ನೊಡೋಕೆ ಅಂತಲೇ ಮೈದಾನಕ್ಕೆ ಬರೋ ಫ್ಯಾನ್ಸ್ ಇದ್ದಾರೆ. ಸುಂದರಿ ಬ್ಯಾಟ್ನಿಂದ ಸಿಡಿದೋ ಸೊಗಸಾದ ಸಿಕ್ಸರ್-ಬೌಂಡ್ರಿಗಳನ್ನ ಎಂಜಾಯ್ ಮಾಡ್ತಾರೆ.
ಹಾಲ್ಬೆಳಕಿನ ಚೆಂದನದ ಗೊಂಬೆ ಎಲ್ಲಿಸ್ ಪೆರ್ರಿ.!
ಎಲ್ಲಿಸ್ ಪೆರ್ರಿ ಆಸ್ಟ್ರೇಲಿಯಾದ ಕ್ರಿಕೆಟರ್ ಆದರೂ ಭಾರತದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಇದೆ. ಆರ್ಸಿಬಿ ಫ್ರಾಂಚೈಸಿಗೆ ಆಡಿದ ಮೇಲೆ ಪೆರ್ರಿ ಅಭಿಮಾನಿಗಳಿಗೆ ಇನ್ನೂ ಹತ್ತಿರವಾಗಿದ್ದಾರೆ. ಬ್ಯಾಟಿಂಗ್-ಬೌಲಿಂಗ್ನಲ್ಲಿ ಮೋಡಿ ಮಾಡುವ ಪೆರ್ರಿ, ತನ್ನ ಸೌಂದರ್ಯದಿಂದಲೂ ಹಲವು ಅಭಿಮಾನಿಗಳನ್ನ ಕ್ಲೀನ್ ಬೋಲ್ಡ್ ಮಾಡಿದ್ದಾರೆ. WPL ಸಮಯದಲ್ಲಿ ಇನ್ಸ್ಸ್ಟಾಗ್ರಾಂನಲ್ಲಿ ಹಲ್ಚಲ್ ಎಬ್ಬಿರೋ ರೀಲ್ಸ್ಗಳೇ ಪೆರ್ರಿಗೆ ಮನಸೋತ ಅದೆಷ್ಟೋ ಮನಸುಗಳ ಕತೆಯನ್ನ ಹೇಳುತ್ತವೆ.
ಅಮೆಲಿಯಾ ಕೆರ್ ಸೌಂದರ್ಯಕ್ಕೆ ಮನ ಸೋಲದವಱರು.?
ನ್ಯೂಜಿಲೆಂಡ್ ತಂಡದ ಆಲ್ರೌಂಡರ್ ಅಮೆಲಿಯಾ ಕೆರ್ಗೂ ಮನಸೋತ ಅದೆಷ್ಟೋ ಮನಸ್ಸುಗಳಿವೆ. ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡೋ ಅಮೆಲಿಯಾಗೂ ಸಖತ್ ಕ್ರೇಜ್ ಇದೆ. ಈಕೆ ಆನ್ ಫೀಲ್ಡ್ನಲ್ಲಿ ಮಾಡುವ ಜಾದೂ ಎಲ್ಲರಿಗೂ ಗೊತ್ತೆ ಇದೆ. ಅಂತಹದೇ ಮ್ಯಾಜಿಕ್ ಈಕೆಯ ಲುಕ್ನಲ್ಲೂ ಇದೆ. ಕೆರ್ ಚೆಂಡಿಡಿದು ದಾಳಿಗಿದರೆ ಸಿಳ್ಳೆ ಚಪ್ಪಾಳೆಗಳು ಮೇಳೈಸುತ್ತೆ.
ಹಾರ್ಟ್ಬೀಟ್ ಹೆಚ್ಚಿಸೋ ಚೆಲುವೆ ಲಾರೆನ್ ಬೆಲ್.!
ಯಾವ ನಟಿಗೂ ಕಡಿಮೆ ಇಲ್ಲ ಈ ಇಂಗ್ಲೆಂಡ್ನ ಬೌಲರ್ ಲಾರೆನ್ ಬೆಲ್. ಈಕೆಯ ಆಟಕ್ಕಿಂತ ಈಕೆಯ ಸೌಂದರ್ಯಕ್ಕೇ ಕ್ರಿಕೆಟ್ ಲೋಕದಲ್ಲಿ ಅಭಿಮಾನಿಗಳಿದ್ದಾರೆ. ಆಡಿರೋದು 24 ಏಕದಿನ ಪಂದ್ಯಗಳು ಮಾತ್ರವಾದ್ರೂ Fan Following ಮಾತ್ರ ಜೋರಾಗಿದೆ.
ಇದನ್ನೂ ಓದಿ: 2026 IPL ಮ್ಯಾಚ್ ನೋಡುವವರಿಗೆ ಬಿಗ್ ಶಾಕ್.. ಟಿಕೆಟ್ಗಳ ಮೇಲೆ ಭಾರೀ ಜಿಎಸ್ಟಿ!
ಚಾರ್ಲಿ ಡೀನ್ ಚೆಂದಕ್ಕೆ ಸಾಟಿ ಯಾರು..?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮತ್ತೊಬ್ಬ ಆಟಗಾರ್ತಿ ಚಾರ್ಲಿಡೀನ್ ಇಂಗ್ಲೆಂಡ್ ವಲ್ಡ್ ಕಪ್ ಟೀಮ್ನಲ್ಲಿದ್ದಾರೆ. ಕಳೆದ ಸೀಸನ್ WPL ವೇಳೆ ಆರ್ಸಿಬಿ ಆಡಿದ ಏಕೈಕ ಪಂದ್ಯದಲ್ಲಿ ದುಬಾರಿ ಸ್ಪೆಲ್ ಹಾಕಿದ್ರೂ ಕೂಡ ಈಕೆಗೆ ಅಭಿಮಾನಿಗಳ ಬಳಗ ಸೃಷ್ಟಿಯಾಯ್ತು. ಆಟಕ್ಕಿಂತ ಈಕೆಯ ಸೌಂದರ್ಯಕ್ಕೆ ಫ್ಯಾನ್ಸ್ ಮಾರು ಹೋದರು.
ಇವರಿಷ್ಟೇ ಅಲ್ಲ, ಸ್ಕಾಟ್ಲೆಂಡ್ನ ಬ್ಯೂಟಿ ಕ್ವೀನ್ ಹನ್ನಾ ರೇನಿ ಏನೂ ಕಡಿಮೆಯಿಲ್ಲ. ಮೈದಾನಕ್ಕೆ ಇಳಿದ್ರೆ ಈಕೆ ಆಟಗಾರ್ತಿಯೋ.? ಮಾಡೆಲ್ಲೋ ಅಂತಾ confuse ಆಗಬೇಕು ಹಂಗಿದಾಳೆ. ಈ ಸೌಂದರ್ಯವತಿಯರಿಂದಾಗಿ ಈ ಬಾರಿಯ ವಿಶ್ವಕಪ್ ಟೂರ್ನಿಯ ಕ್ರೇಜ್ ಇನ್ನಷ್ಟು ಹೆಚ್ಚೋದ್ರಲ್ಲಿ ಅನುಮಾನವೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ