/newsfirstlive-kannada/media/media_files/2025/09/05/rcb-38-2025-09-05-14-22-38.jpg)
2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೂ ಮೊದಲೇ ಅಭಿಮಾನಿಗಳಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಮೈದಾನಕ್ಕೆ ಹೋಗಿ ಲೈವ್ನಲ್ಲಿ ಕ್ರಿಕೆಟ್ ನೋಡಬೇಕು ಎನ್ನುವ ಫ್ಯಾನ್ಸ್ ಜೇಬಿಗೆ ದೊಡ್ಡ ಮಟ್ಟದಲ್ಲೇ ಕತ್ತರಿ ಹಾಕಲಾಗಿದೆ. ಐಪಿಎಲ್ ಟಿಕೆಟ್ಗಳಿಗೆ ಜಿಎಸ್ಟಿ ಹಾಕಲಾಗಿದ್ದು ಇದರಿಂದ ಅಭಿಮಾನಿಗಳು ದೊಡ್ಡ ಮೊತ್ತವನ್ನೇ ಪಾವತಿಸಿ ಇನ್ಮುಂದೆ ಕ್ರಿಕೆಟ್ ನೋಡಬೇಕಿದೆ.
ಐಪಿಎಲ್ ಟಿಕೆಟ್ಗಳಿಗೆ ಈವರೆಗೆ ಶೇಕಡಾ 28 ಜಿಎಸ್ಟಿ ಮಾತ್ರ ವಿಧಿಸಲಾಗುತ್ತಿತ್ತು. ಆದರೆ ಈಗ ಶೇಕಡಾ 40 ರಷ್ಟು ಜಿಎಸ್ಟಿ ಹಾಕಲಾಗುತ್ತದೆ. ಈ ನಿಯಮವು ಇದೇ ಸೆಪ್ಟೆಂಬರ್ 22 ರಿಂದಲೇ ಜಾರಿಯಲ್ಲಿರುತ್ತದೆ. ಈ ಮೊದಲು 1000 ರೂಪಾಯಿ ಐಪಿಎಲ್ ಟಿಕೆಟ್ ಇದ್ರೆ ಇದಕ್ಕೆ ಶೇ.28 ರಷ್ಟು ಜಿಎಸ್ಟಿ ಸೇರಿಸಿ 1280 ರೂಪಾಯಿ ಪಾವತಿ ಮಾಡಬೇಕಿತ್ತು. ಅದರಂತೆ ಈಗ ಶೇ.40 ರಷ್ಟು ಜಿಎಸ್ಟಿ ಹಾಕಿದ್ದರಿಂದ 120 ರೂಪಾಯಿ ಅಧಿಕವಾಗಿದ್ದು 1400 ರೂಪಾಯಿ ಕೊಡಬೇಕು. ಅಂದರೆ ಪ್ರತಿ 1000 ರೂಪಾಯಿಗೆ ಶೇಕಡ 12 ರಷ್ಟು ದರ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.
ಜಿಎಸ್ಟಿ ವಿವಿಧ ಟಿಕೆಟ್ಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
- 500 ರೂಪಾಯಿ ಟಿಕೆಟ್ ಈಗ 700 ರೂಪಾಯಿ (ಈ ಮೊದಲು 640 ರೂ.)- 60 ರೂ ಹೆಚ್ಚಳ
- 1000 ರೂಪಾಯಿ ಟಿಕೆಟ್ ಈಗ 1400 ರೂಪಾಯಿ (ಈ ಮೊದಲು 1,280 ರೂ.)- 120 ರೂ ಹೆಚ್ಚಳ
- 2000 ರೂಪಾಯಿ ಟಿಕೆಟ್ ಈಗ 2,800 ರೂಪಾಯಿ (ಈ ಮೊದಲು 2,560 ರೂ.)- 240 ರೂಪಾಯಿ ಹೆಚ್ಚಳ
ಇದನ್ನೂ ಓದಿ:ಕಾಂತಾರ ಪ್ರೀಕ್ವೆಲ್ ರಿಲೀಸ್ಗೆ ಕೇವಲ 27 ದಿನಗಳು ಬಾಕಿ.. ಹೊಂಬಾಳೆ ಹೊಸ ಅಪ್ಡೇಟ್?
ಟೀಮ್ ಇಂಡಿಯಾದ ಅಂತರಾಷ್ಟ್ರೀಯ ಪಂದ್ಯಗಳ ಟಿಕೆಟ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಶುಲ್ಕವು ಕೇವಲ ಐಪಿಎಲ್ಗೆ ಮಾತ್ರ ಅನ್ವಯ ಆಗಲಿದೆ. ಭಾರತದ ಅಂತರಾಷ್ಟ್ರೀಯ ಪಂದ್ಯಗಳ ಟಿಕೆಟ್ಗಳಿಗೆ ಈ ಮೊದಲಿನಂತೆ ಶೇಕಡ 18 ರಷ್ಟು ಜಿಎಸ್ಟಿ ಇರುತ್ತದೆ. ಏರಿಕೆ ಮಾಡಿಲ್ಲ. 500 ರೂಪಾಯಿಗಿಂತ ಕಡಿಮೆ ಇರುವ ಡಿಕೆಟ್ಗೆ ಮಾನ್ಯತೆ ಮುಂದುವರೆಯುತ್ತದೆ ಎಂದು ತಿಳಿಸಲಾಗಿದೆ.
ಐಪಿಎಲ್ ಟಿಕೆಟ್ ದರ ನಿಗದಿ ಪಡಿಸುವುದು ಬಿಸಿಸಿಐಗೆ ಬರುವುದಿಲ್ಲ, ಫ್ರಾಂಚೈಸಿಗಳು ಆಗಿರುತ್ತವೆ. ಹೀಗಾಗಿ 2026ರ ಐಪಿಎಲ್ನಲ್ಲಿ ಎಲ್ಲ ಫ್ರಾಂಚೈಸಿಗಳು ಟಿಕೆಟ್ ದರ ಅಧಿಕ ಮಾಡುವ ಸಾಧ್ಯತೆ ಇದೆ. 2024ರಲ್ಲಿ ಆರ್ಸಿಬಿ ಟಿಕೆಟ್ 55,000 ರೂಪಾಯಿ ಇದ್ದಿದ್ದು ಈ ಬಾರಿ 60,000 ರೂಪಾಯಿಗೆ ಏರಿಕೆ ಆಗಬಹುದು ಎನ್ನಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ