/newsfirstlive-kannada/media/media_files/2025/10/28/montha_cyclone-2-2025-10-28-09-06-20.jpg)
ಮೊಂಥಾ ಎಂಬ ಹೆಸರಲ್ಲಿ ಹೊಸ ರೂಪ ತಾಳಿ ಲಗ್ಗೆ ಇಟ್ಟಿರೋ ಚಂಡಮಾರುತ ಸದ್ಯ ಆಂಧ್ರಪ್ರದೇಶದಲ್ಲಿ ಹಲ್ ಚಲ್​ ಎಬ್ಬಿಸಿದೆ. ಬೆಳ್ಳಂಬೆಳಗ್ಗೆ ಆಂಧ್ರಪ್ರದೇಶ ಕರಾವಳಿಗೆ ಆಗಮಿಸಿರೋ ಚಂಡಮಾರುತ ಅವಾಂತರಗಳನ್ನ ಸೃಷ್ಟಿಸಲು ಸಜ್ಜಾಗಿದೆ. ಚಂಡಮಾರುತವನ್ನ ಎದುರಿಸಲು ಆಂಧ್ರ ಸರ್ಕಾರ ರೆಡಿಯಾಗಿದೆ.
ಬಂಗಾಳಕೊಲ್ಲಿಯಲ್ಲಿ ಪಾರುಪತ್ಯ ಸಾಧಿಸಿರೋ ಮೊಂಥಾ ಚಂಡಮಾರುತ ಸದ್ಯ ಆಂಧ್ರದ ಕರಾವಳಿ ತೀರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲು ಸಜ್ಜಾಗಿದೆ. ಹೊಂಚು ಹಾಕಿ ಆಂಧ್ರದ ಕರವಾಳಿಯನ್ನ ಕಬ್ಜ ಮಾಡಿರೋ ರಣಚಂಡಿ ಚಂಡಮಾರುತ ಜನರ ಎದೆಯನ್ನ ಗಢ ಗಢ ಎನ್ನಿಸುತ್ತಿದೆ.
/filters:format(webp)/newsfirstlive-kannada/media/post_attachments/wp-content/uploads/2024/12/fengal_Cyclone_1.jpg)
ಇಂದು ಆಂಧ್ರ ಕರಾವಳಿಗೆ ಅಪ್ಪಳಿಸಿದ ‘ಮೊಂಥಾ’ ಚಂಡಮಾರುತ!
ಪೂರ್ವ ಕರಾವಳಿ ಭಾಗದ ಜನರ ಎದೆಯಲ್ಲಿ ನಡುಕ ಹುಟ್ಟಿಸಿರುವ ಮೊಂಥಾ ಚಂಡಮಾರುತ ಇಂದು ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ. ಇಂದು ಸಂಜೆ ಅಥವಾ ರಾತ್ರಿ ವೇಳೆಗೆ ಕಾಕಿನಾಡು ಬಳಿ ಲ್ಯಾಂಡ್​ಫಾಲ್​ ಆಗಲಿದೆ. ಆರಂಭದಲ್ಲಿ ನಿಧಾನಗತಿಯಲ್ಲಿದ್ದ ಚಂಡಮಾರುತ ಭೂಮಿಗೆ ಹತ್ತಿರವಾಗ್ತಿದ್ದಂತೆ. ಕ್ಷಣಕ್ಷಣಕ್ಕೂ ವೇಗವನ್ನು ಹೆಚ್ಚಿಸಿಕೊಳ್ತಿದೆ. ಥಾಯ್​ ಭಾಷೆಯಲ್ಲಿ ಮೊಂಥಾ ಅಂದ್ರೆ, ಪರಿಮಳ, ಸುಂದರವಾದ ಹೂವು. ಆದ್ರೆ ಈ ಸುಂದರವಾದ ಮೊಂಥಾ ಗಂಟೆಗೆ 110 ಕಿಲೋ ಮೀಟರ್​ ವೇಗದಲ್ಲಿ ಹಾದು ಹೋಗಲಿದೆ. ಹೀಗಾಗಿ ಶುಕ್ರವಾರದವರೆಗೆ ಆಂಧ್ರಪ್ರದೇಶದ ಕರಾವಳಿ ತೀರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ತೀರದ ನಿವಾಸಿಗಳ ಸ್ಥಳಾಂತರಿಸಲು ಸಿಎಂ ಸೂಚನೆ
ಮೊಂಥಾ ಚಂಡಮಾರುತ ಕ್ಷಣಕ್ಷಣಕ್ಕೂ ತನ್ನ ಸ್ವರೂಪವನ್ನು ತೀವ್ರಗೊಳಿಸುತ್ತಿದ್ದು, ಯಾವುದೇ ಅನಾಹುತ ಸಂಭವಿಸಿದ್ಧಂತೆ ಆಂಧ್ರ ಸರ್ಕಾರ ಫುಲ್​ ಅಲರ್ಟ್​ ಆಗಿದೆ. ಅಂಧ್ರ ಸಿಎಂ ಮತ್ತು ಡಿಸಿಎಂ ಅಧಿಕಾರಿಗಳ ಜೊತೆ ಸಭೆ ನಡೆಸಿ, ಮೊಂಥಾ ಮೇಲೆ ಒಂದು ಕಣ್ಣಿಟ್ಟಿದ್ದಾರೆ. ಹಾಗೂ ಕರಾವಳಿ ತೀರದ ನಿವಾಸಿಗಳನ್ನು ಕೂಡಲೇ ಸುರಕ್ಷಿತ ಸ್ಥಳಕ್ಕೆ ಶಿಫ್ಟ್​ ಮಾಡವಂತೆ ಆದೇಶ ನೀಡಿದ್ದಾರೆ. ಅದರಂತೆ ಸುಮಾರು 50 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್​ ಮಾಡಿದ್ದಾರೆ.
ಆಂಧ್ರಪ್ರದೇಶದ ಕರಾವಳಿ ತೀರದಲ್ಲಿ ಹೈಅಲರ್ಟ್​
ಇನ್ನು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಸಹ ಅಧಿಕಾರಿಗಳೊಂದಿಗೆ ಮೊಂಥಾ ಚಂಡಮಾರುತವನ್ನ ಎದುರಿಸಲು ಬೇಕಾದ ಸಕಲ ಸಿದ್ದತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆಂಧ್ರದ ಕರಾವಳಿಯ ತೀರ ಪ್ರದೇಶಗಳಾದ ನೆಲ್ಲೂರಿನಿಂದ ಶ್ರೀಕಾಕುಳಂವರೆಗೆ ಭಾರೀ ಅಲೆಗಳು ಅಪ್ಪಳಿಸೋ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮೀನುಗಾರರು ಮತ್ತು ಕರಾವಳಿ ತೀರದ ನಿವಾಸಿಗಳು ಸಮುದ್ರಕ್ಕೆ ಇಳಿಯದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ತಮಿಳುನಾಡಿನ ಕೆಲವೆಡೆ ಶಾಲಾ-ಕಾಲೇಜುಗಳಿಗೆ ರಜೆ
ಮೊಂಥಾ ಚಂಡಮಾರುತದ ಎಫೆಕ್ಟ್​ನಿಂದ ತಮಿಳುನಾಡಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆ ಜಿಲ್ಲಾಡಳಿತಗಳು ಇಂದು ಕೆಲ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ. ಚೆಂಗಲ್ಪಟ್ಟು ಮತ್ತು ಕಡಲೂರು ಜಿಲ್ಲೆಗಳಲ್ಲಿ ನಿರಂತರ ಮಳೆಯಾಗ್ತಿರೋದ್ರಿಂದ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮೊಂಥಾ ಎಫೆಕ್ಟ್​.. ವಿಮಾನ ಹಾರಾಟ.. ರೈಲು ಸಂಚಾರದಲ್ಲಿ ವ್ಯತ್ಯಯ
ಮೊಂಥಾ ಚಂಡಮಾರುತದ ಪರಿಣಾಮ ವಿಮಾನಗಳ ಹಾರಾಟ ಮತ್ತು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಈ ಬಗ್ಗೆ ಇಂಡಿಗೋ ಸಂಸ್ಥೆ ಮಾಹಿತಿ ನೀಡಿದ್ದು, ವಿಜಯವಾಡ, ವಿಶಾಖಪಟ್ಟಣಂ ಮತ್ತು ರಾಜಮಂಡ್ರಿಗೆ ಹಾರುವ ಇಂಡಿಗೋ ಏರ್‌ಲೈನ್ಸ್ ವಿಮಾನಗಳು ವ್ಯತ್ಯಯವಾಗಲಿವೆ ಅಂತ ತಿಳಿಸಿದೆ. ಇನ್ನೂ ಮುನ್ನೆಚ್ಚರಿಕೆಯಾಗಿ ವಿಶಾಖಪಟ್ಟಣಂ ಮತ್ತು ಚೆನ್ನೈ ರೈಲನ್ನು ರದ್ದುಗೊಳಿಸಲಾಗಿದೆ. ಕರ್ನಾಟಕದಿಂದ ತೆರಳಬೇಕಿದ್ದ ಹಲವು ರೈಲುಗಳ ಸಂಚಾರದಲ್ಲೂ ವ್ಯತ್ಯಯವಾಗಿದೆ. ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಸಿಪಿಆರ್‌ಒ ತಿಳಿಸಿದ್ದಾರೆ..
ಇದನ್ನೂ ಓದಿ:BBK12; ರಾಶಿಕಾ-ರಘು ನಡುವೆ ಗಲಾಟೆ.. ಜಾಹ್ನವಿ, ರಿಷಾ, ಧನುಷ್ ಕಣ್ಣೀರು.. ಕಾರಣವೇನು?
/filters:format(webp)/newsfirstlive-kannada/media/media_files/2025/10/28/montha_cyclone-1-2025-10-28-08-56-39.jpg)
ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಮೊಂಥಾ ಚಂಡಮಾರುತದ ಎಫೆಕ್ಟ್​ ಈಗಾಗಲೇ ಶುರುವಾಗಿದೆ. ಮುಂಜಾನೆಯಿಂದಲೇ ಆಂಧ್ರ, ಒಡಿಶಾ, ತಮಿಳುನಾಡಿನಲ್ಲಿ ಮಳೆಯಾಗ್ತಿದ್ದು, ಚಂಡಮಾರುತದ ಅನುಭವವಾಗ್ತಿದೆ. ಇನ್ನು ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ. ಗಂಟೆಗೆ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಜೊತೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಸಿದೆ.
ಕಾಶಿಗೆ ಹೋದ್ರೂ ಶನೇಶ್ವರನ ಕಾಟ ತಪ್ಪಲಿಲ್ಲ ಅನ್ನೋ ಹಾಗೆ ಮೊಂಥಾ ಚಂಡಮಾರುತದ ಎಫೆಕ್ಟ್​ನಿಂದ ಮಳೆಗಾಲ ಮುಗಿದರೂ ಮಳೆ ಕಾಟ ತಪ್ಪದಾಗಿದೆ. ಚಂಡಮಾರುತದ ಹೊಡೆತಕ್ಕೆ ಯಾವುದೇ ಅವಾಂತರಗಳು ಸೃಷ್ಟಿಯಾಗದೇ ಇರಲಿ ಅಂತ ದೇಶವಾಸಿಗಳ ಪ್ರಾರ್ಥನೆ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us