/newsfirstlive-kannada/media/media_files/2025/10/01/tn_police_arrest-2025-10-01-10-41-42.jpg)
ಚೆನ್ನೈ: ಆಂಧ್ರಪ್ರದೇಶ ಮೂಲದ ಯುವತಿ ಮೇಲೆ ಲೈ*ಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ತಮಿಳುನಾಡಿನ ತಿರುವಣ್ಣಾಮಲೈನ ಇಬ್ಬರು ಕಾನ್​​ಸ್ಟೆಬಲ್​ಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸದ್ಯ ಇವರನ್ನು ಸರ್ಕಾರಿ ಹುದ್ದೆಯಿಂದ ಅಮಾನತು ಮಾಡಲಾಗಿದೆ.
ತಿರುವಣ್ಣಾಮಲೈನ ಕಾನ್​ಸ್ಟೆಬಲ್​ಗಳಾದ ಡಿ ಸುರೇಶ್​ ರಾಜ್ ಮತ್ತು ಪಿ ಸುಂದರ್​ನನ್ನ ಬಂಧಿಸಲಾಗಿದೆ. ತಾಯಿ ಹಾಗೂ 25 ವರ್ಷದ ಮಗಳು ಸೇರಿ ಹಣ್ಣು ಮಾರುವ ಸಲುವಾಗಿ ತಡರಾತ್ರಿ ತಿರುವಣ್ಣಾಮಲೈಗೆ ತೆರಳುತ್ತಿದ್ದರು. ಈ ವೇಳೆ ಹೈವೇಯಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಇಬ್ಬರು ಕಾನ್​ಸ್ಟೆಬಲ್​ಗಳು ಹಣ್ಣು ಮಾರುವ ಮಹಿಳೆಯ ವಾಹನವನ್ನು ಅಡ್ಡಗಟ್ಟಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಆಂಟಿನ ಮದುವೆಯಾದ 75ರ ವೃದ್ಧ.. ಹನಿಮೂನ್​ಗೂ ಮೊದಲೇ ಜೀವ ಬಿಟ್ಟ!
ಮಗಳನ್ನು ಒತ್ತಾಯ ಪೂರ್ವಕವಾಗಿ ತಮ್ಮ ಜೊತೆ ಕರೆದುಕೊಂಡು ಹೋಗಿ ಏಕಾಂತ ಸ್ಥಳದಲ್ಲಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಅಂತ ತಾಯಿ ಆರೋಪಿಸಿದ್ದಾರೆ. ಇದಕ್ಕಾಗಿ ಇಬ್ಬರನ್ನು ಬಂಧಿಸಲಾಗಿದ್ದು ಹುದ್ದೆಯಿಂದ ಅಮಾನತು ಮಾಡಲಾಗಿದೆ. ಸದ್ಯ ತನಿಖೆ ನಡೆಯುತ್ತಿದ್ದು ದೃಢವಾದರೆ ಗರಿಷ್ಠ ಶಿಕ್ಷೆಯಾಗುತ್ತದೆ ಎಂದು ಪೊಲೀಸರು ಮಾಹಿತಿ ಹೇಳಿದ್ದಾರೆ ಎನ್ನಲಾಗಿದೆ.
ಈ ಪ್ರಕರಣವೂ ತಮಿಳುನಾಡಿನಲ್ಲಿ ತೀವ್ರ ಸಂಚಲನ ಮೂಡಿಸಿದ್ದು ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಎಐಎಡಿಎಂಕೆ ಪಕ್ಷದ ಅಧ್ಯಕ್ಷ ಎಡಪ್ಪಾಡಿ ಪಳನಿಸ್ವಾಮಿ ಈ ಕೃತ್ಯವನ್ನ ತೀವ್ರವಾಗಿ ಖಂಡಿಸಿದ್ದು, ಮಹಿಳೆಯರಿಗೆ ರಕ್ಷಣೆ ನೀಡಬೇಕಾದರೆ ಹೀಗೆ ಮಾಡಿದ್ದಾರೆ. ಇದು ಡಿಎಂಕೆ ಸರ್ಕಾರಕ್ಕೆ ನಾಚಿಕೆಗೇಡು. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕೆಟ್ಟು ಹೋಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ