/newsfirstlive-kannada/media/media_files/2025/11/10/polygamy-2-2025-11-10-11-36-47.jpg)
ಸೀಮಿತ ವಿನಾಯತಿಗಳೊಂದಿಗೆ ರಾಜ್ಯದಲ್ಲಿ ಬಹುಪತ್ನಿತ್ವ (polygamy) ನಿಷೇಧಿಸಲು ಅಸ್ಸಾಂ ಸರ್ಕಾರ ಮುಂದಾಗಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಬಹುಪತ್ನಿತ್ವ ಪದ್ದತಿಗೆ ಅಂತ್ಯ ಹಾಡುವ ಉದ್ದೇಶದಿಂದ ಅಸ್ಸಾಂ ಸರ್ಕಾರ ಹೊಸ ಕಾನೂನು ತರೋದಕ್ಕೆ ಮುಂದಿಗಿದೆ. ನವೆಂಬರ್ 25 ರಿಂದ ವಿಧಾನಸಭೆ ಕಲಾಪ ಆರಂಭವಾಗಲಿದೆ. ಅಲ್ಲಿ ಮಸೂದೆ ಮಂಡನೆಯಾಗಿ, ಹೊಸ ಕಾನೂನು ಬಗ್ಗೆ ಚರ್ಚೆ ನಡೆಯಲಿದೆ.
/filters:format(webp)/newsfirstlive-kannada/media/media_files/2025/11/10/polygamy-3-2025-11-10-11-40-32.jpg)
ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಬಹು ಪತ್ನಿತ್ವ ವಿವಾಹ ಉಲ್ಲಂಘನೆ ಮಾಡಿದ್ರೆ 7 ವರ್ಷ ಜೈಲು ಶಿಕ್ಷೆ ಹಾಗೂ ಬಹುಪತ್ನಿತ್ವದಿಂದ ತೊಂದರೆ ಅನುಭವಿಸಿದ್ದವರಿಗೆ ವಿಶೇಷ ಪರಿಹಾರ ನೀಡಲು ಕಾನೂನು ಅನುವು ಮಾಡಿಕೊಡಲಿದೆ.
ಒಬ್ಬ ವ್ಯಕ್ತಿ ಈಗಾಗಲೇ ಸಂಗಾತಿಯನ್ನು ಹೊಂದಿದ್ದರೆ ಅಥವಾ ಕಾನೂನು ಪ್ರಕಾರ ತನ್ನ ಮೊದಲ ಸಂಗಾತಿಗೆ ವಿಚ್ಛೇದನ ನೀಡಿ ದೂರವಾಗಿರದಿದ್ದರೆ ಅಂತವರಿಗೆ ಇನ್ನೊಂದು ಮದುವೆ ಮಾಡಿಕೊಳ್ಳಲು ಕಾನೂನು ಅವಕಾಶ ಮಾಡಿಕೊಡೋದಿಲ್ಲ. ಬಹುಪತ್ನಿತ್ವ ವಿವಾಹದಿಂದಾಗಿ ಬಲಿಪಶು ಆಗಿರುವ ಮಹಿಳೆ ಅಪಾರ ನೋವು ಮತ್ತು ಕಷ್ಟಗಳನ್ನು ಅನುಭವಿಸಿದ್ರೆ ಪರಿಹಾರ ಒದಗಿಸಲು ಹೊಸ ಕಾನೂನು ಪ್ರಯತ್ನ ಮಾಡಲಿದೆ ಎಂದು ಅಸ್ಸಾಂ ಸಿಎಂ ತಿಳಿಸಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ರಾಜಾತಿಥ್ಯ ವಿಡಿಯೋ ವೈರಲ್.. ನಟ ದರ್ಶನ್ ಆಪ್ತ ಧನ್ವಿರ್ ಪೊಲೀಸ್ ವಶಕ್ಕೆ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us