/newsfirstlive-kannada/media/media_files/2025/11/09/jadeja_sanju_samson_ipl_2026_csk-2025-11-09-14-22-29.jpg)
ಐಪಿಎಲ್​ ರಿಟೆನ್ಶನ್​ ಜಸ್ಟ್​​ 5 ದಿನ ಮಾತ್ರ ಬಾಕಿ ಉಳಿದಿದೆ. ಸಂಜು ಸ್ಯಾಮ್ಸನ್​ ಮುಂದಿನ ನಿಲ್ದಾಣ ಅನ್ನೋದು ಉತ್ತರವಿಲ್ಲದ ಪ್ರಶ್ನೆಯಾಗೇ ಉಳಿದಿದೆ. ಸಂಜುನ ಕರೆತರೋಕೆ ಚೆನ್ನೈ ಶತಪ್ರಯತ್ನ ನಡೆಸ್ತಿದೆ. ಹೊಸ ಹೊಸ ಬೇಡಿಕೆ ಇಟ್ಟು ರಾಜಸ್ಥಾನ ರಾಯಲ್ಸ್​ ಫ್ರಾಂಚೈಸಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಕೊಡ್ತಿದೆ.
ಮುಗಿಯದ ಸಿಎಸ್​ಕೆ-ರಾಜಸ್ಥಾನ್​ ಟ್ರೇಡಿಂಗ್​​​ ಹಗ್ಗಜಗ್ಗಾಟ
ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ರಾಜಸ್ಥಾನ್​ ರಾಯಲ್ಸ್​ ನಡುವಿನ ಟ್ರೇಡಿಂಗ್​ ಹಗ್ಗಜಗ್ಗಾಟ ಸದ್ಯಕ್ಕೆ ಮುಗಿಯುವಂತೆ ಕಾಣ್ತಿಲ್ಲ. ದೋನಿಗೆ ಬ್ಯಾಕ್​​ಅಪ್​ ವಿಕೆಟ್​ ಕೀಪರ್​ ಬ್ಯಾಟರ್​ ಹುಡುಕಾಟದಲ್ಲಿರೋ ಚೆನ್ನೈ ಫ್ರಾಂಚೈಸಿಗೆ ಸಂಜು ಸ್ಯಾಮ್ಸನ್ ಬೇಕೆಬೇಕು. ಅತ್ತ ತಂಡದಲ್ಲಿ ನಾನು ಇರಲ್ಲ ಅಂತ ಸ್ವತಃ ಸಂಜುನೇ ಹೇಳಿರೋದ್ರಿಂದ ರಾಜಸ್ಥಾನ ತಂಡ ಸ್ಯಾಮ್ಸನ್​ನ ಬಿಡಲೇಬೇಕು. ಇಬ್ಬರ ನಡುವಿನ ಮಾತುಕತೆ ಮಾತ್ರ ಆರಕ್ಕೆ ಏರ್ತಾ ಇಲ್ಲ. ಮೂರಕ್ಕೆ ಇಳಿತಾ ಇಲ್ಲ. ಎರಡೂ ಫ್ರಾಂಚೈಸಿಗಳ ನಡುವಿನ ಚೌಕಾಶಿ ಹಗ್ಗಜಗ್ಗಾಟ ಮುಂದುವರೆದಿದ್ದು, ನಿರ್ಧಾರ ಇನ್ನೂ ಫೈನಲ್ ಆಗಿಲ್ಲ.
ಇದನ್ನೂ ಓದಿ: ರುಕ್ಮಿಣಿ ವಸಂತ್ ಬಳಿಕ ಅನುಪಮಾಗೆ ‘ಜಾಲತಾಣ’ದ ಟೆನ್ಶನ್..! ಅಸಲಿಗೆ ಆಗಿದ್ದೇನು?
ರಾಜಸ್ಥಾನದ ‘ರಾಯಲ್’​ ಬೇಡಿಕೆ..!
ಟ್ರೇಡಿಂಗ್ ಹಗ್ಗಜಗ್ಗಾಟದ ಹೊಸ ಅಪ್​ಡೇಟ್​ ಏನಪ್ಪಾ ಅಂದ್ರೆ ರಾಜಸ್ಥಾನ್​ ರಾಯಲ್ಸ್​ನ ಹೊಸ ಕಂಡಿಷನ್. ಸಂಜುನ ಟ್ರೇಡಿಂಗ್​ ಮಾಡಲು ರಾಜಸ್ಥಾನ ರಾಯಲ್ಸ್​ ಚೆನ್ನೈಗೆ ಇದೀಗ ಹೊಸ ಬೇಡಿಕೆಯನ್ನ ಇಟ್ಟಿದೆ. ಸಂಜುಗಾಗಿ ಶಿವಂ ದುಬೆಯನ್ನ ಟ್ರೇಡ್​ ಮಾಡಲು ಹೊರಟಿದ್ದ ಚೆನ್ನೈಗೆ ಆಲ್​​ರೌಂಡರ್​ ರವೀಂದ್ರ ಜಡೇಜಾನ​ ಬಿಟ್ಟುಕೊಡಿ ಎಂದು ರಾಜಸ್ಥಾನ ರಾಯಲ್ಸ್​ ಹೊಸ ಬೇಡಿಕೆ ಇಟ್ಟಿದೆ. ಪಿಂಕ್​ ಆರ್ಮಿಯ ಹೊಸ ಬೇಡಿಕೆ ಯೆಲ್ಲೋ ಆರ್ಮಿಯಲ್ಲಿ ಸಂಚಲನ ಸೃಷ್ಟಿಸಿದೆ.
ನೋ ಎಂದ ರವೀಂದ್ರ ಜಡೇಜಾ
ಸಂಜು ಸ್ಯಾಮ್ಸನ್​ ಹಾಗೂ ರವೀಂದ್ರ ಜಡೇಜಾ ಇಬ್ಬರ ಪ್ರೈಸ್​ 18 ಕೋಟಿಯಾಗಿದೆ. ಇಬ್ಬರ ಬ್ರ್ಯಾಂಡ್​ವ್ಯಾಲ್ಯೂ, ಜನಪ್ರೀಯತೆ ಎಲ್ಲವೂ ಬಹುತೇಕ ಮ್ಯಾಚ್​ ಆಗುತ್ತೆ. ಇದೇ ಕಾರಣಕ್ಕೆ ರಾಜಸ್ಥಾನ್​​ ಜಡೇಜಾಗೆ ಬೇಡಿಕೆ ಇಟ್ಟಿದೆ. ಆದ್ರೆ, ಜಡೇಜಾಗೆ ಸಿಎಸ್​ಕೆ ಬಿಟ್ಟು ಹೋಗೋಕೆ ಇಷ್ಟವಿಲ್ಲ. ಈಗಾಗಲೇ ಜಡೇಜಾ ತಮ್ಮ ನಿರ್ಧಾರವನ್ನ ಫ್ರಾಂಚೈಸಿಗೆ ತಿಳಿಸಿದ್ದಾರೆ. ಜಡೇಜಾ ನೋ ಅಂದಿರೋ ಟ್ರೇಡಿಂಗ್ ವ್ಯವಹಾರಕ್ಕೆ ಮತ್ತಷ್ಟು ಟ್ವಿಸ್ಟ್​ ನೀಡಿದೆ.
ಜಡೇಜಾ ನೋ ಎಂದ ಬಳಿಕ ಸಂಜು ಸ್ಯಾಮ್ಸನ್​​ ಟ್ರೇಡಿಂಗ್​​ಗೆ ಇಂಗ್ಲೆಂಡ್​ ಆಲ್​​ರೌಂಡರ್​ ಸ್ಯಾಮ್​​ ಕರನ್​ ಬಿಟ್ಟುಕೊಡಲು ಸಿಎಸ್​ಕೆ ಮುಂದಾಗಿದೆ. ರಾಜಸ್ಥಾನಕ್ಕೆ ಸ್ಯಾಮ್ ಕರನ್​ ಮೇಲೆ ಒಲವಿಲ್ಲ. ಬದಲಾಗಿ ಯುವ ಆಟಗಾರ ಡೆವಾಲ್ಡ್​ ಬ್ರೆವಿಸ್​ ಮೇಲೆ ರಾಜಸ್ಥಾನ್​​​ ತಂಡದ ಕಣ್ಣು ಬಿದ್ದಿದೆ. ಕಳೆದ ಸೀಸನ್​ನಲ್ಲಿ ಪ್ರಾಮಿಸಿಂಗ್​ ಪರ್ಫಾಮೆನ್ಸ್​ ನೀಡಿರೋ ಬ್ರೆವಿಸ್​​ನ ಸಿಎಸ್​ಕೆ ಬಿಟ್ಟುಕೊಡೋದು ಅನುಮಾನವೇ ಆಗಿದೆ.
ಇದನ್ನೂ ಓದಿ: ಕೈದಿಗಳಿಗೆ ರಾಜಾತಿಥ್ಯ ವಿರುದ್ಧ ಕೇಸ್​ ದಾಖಲು.. ಬಿಜೆಪಿಯಿಂದ ಇವತ್ತು CM ನಿವಾಸಕ್ಕೆ ಮುತ್ತಿಗೆ
ಸಂಜು ಸ್ಯಾಮ್ಸನ್​ ಟ್ರೇಡಿಂಗ್​ ನೀ ಕೊಡೆ.. ನಾ ಬಿಡೆ ಎಂಬಂತಾಗಿದೆ. ರಾಜಸ್ಥಾನ ಕೇಳಿದ ಆಟಗಾರನನ್ನ ಕೊಡೋಕೆ ಚೆನ್ನೈಗೆ ಇಷ್ಟವಿಲ್ಲ. ಚೆನ್ನೈನ ಆಫರ್​​ ರಾಜಸ್ಥಾನಕ್ಕೆ ಹಿಡಿಸ್ತಿಲ್ಲ. ಇದಕ್ಕೆ ಸದ್ಯಕ್ಕಿರೋ ಪರಿಹಾರ ಅಂದ್ರೆ ಅದು ಫುಲ್​ ಕ್ಯಾಶ್​ ಡೀಲ್​. ಬೇಡದ ಆಟಗಾರರನ್ನ ರಿಟೈನ್ಶನ್​ ವೇಳೆ ರಿಲೀಸ್​ ಮಾಡಿ ಉಳಿಯೋ ಹಣದಲ್ಲಿ ಸಂಜುವನ್ನ ಟ್ರೇಡ್​ ಮಾಡಬೇಕು.
ಹಾಗಾಗಬೇಕಂದ್ರೆ ರಿಟೈನ್ಶನ್​ ವೇಳೆ ರಾಜಸ್ಥಾನ ಸಂಜುನ ರಿಟೈನ್​ ಮಾಡಿಕೊಳ್ಳಬೇಕು. 2024ರ ಐಪಿಎಲ್​ಗೂ ಮುನ್ನ ಹಾರ್ದಿಕ್​ನ ಗುಜರಾತ್​ ರಿಟೈನ್​ ಮಾಡಿ ಬಳಿಕ ಮುಂಬೈಗೆ ಟ್ರೇಡ್​ ಮಾಡಿತ್ತಲ್ವಾ.? ಆ ಸೂತ್ರ ಫಾಲೋ ಮಾಡಬೇಕು. ಈ ಟ್ರೇಡಿಂಗ್​ ಲೆಕ್ಕಾಚಾರದ ನಡುವೆ ಸಂಜು ಸ್ಯಾಮ್ಸನ್​ ಪರಿಸ್ಥಿತಿ ದಿಕ್ಕೇ ತೋಚದಂತಾಗಿದೆ. ರಾಜಸ್ಥಾನದಲ್ಲಂತೂ ಇರಲ್ಲ. ಮುಂದಿನ ನಿಲ್ದಾಣ ಯಾವುದು ಅನ್ನೋದು ಗೊತ್ತಾಗ್ತಿಲ್ಲ. ಕ್ರಿಕೆಟ್​ ಲೋಕಕ್ಕೆ ಸಂಜು ಭವಿಷ್ಯ ಏನಾಗುತ್ತೆ ಅಂತಾ ಎಷ್ಟು ಕುತೂಹಲವಿದ್ಯೂ.? ಅಷ್ಟೇ ಕುತೂಹಲ ಸ್ವತಃ ಸಂಜುಗೂ ಇದೆ.
ಇದನ್ನೂ ಓದಿ: ಇಟ್ಕೊಂಡವಳಿಗಾಗಿ ಕಟ್ಕೊಂಡವಳ ಜೀವ ತೆಗೆದ! ಕುಲುಮೆಯಲ್ಲಿ ಭಸ್ಮವಾದ ಟೀಚರಮ್ಮ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us