/newsfirstlive-kannada/media/media_files/2025/11/10/pune-man-2025-11-10-08-57-03.jpg)
ಅನೈತಿಕ ಸಂಬಂಧ.. ಸಂಸಾರದ ಅನ್ಯೋನ್ಯತೆಯನ್ನ ಹಾಳು ಮಾಡಿ ಬಿಡುತ್ತೆ.. ಆಸೆಯು ದಂಪತಿ ಮಧ್ಯೆ ಅಸೂಹೆ ತರುತ್ತೆ.. ವ್ಯಾಮೋಹ ವೈಯಕ್ತಿಕ ದಾಳಿಗೆ ದಾರಿ ಮಾಡಿಕೊಡುತ್ತೆ.. ಬೆಸ್ಟ್​ ಕಪಲ್​ ಅಂತಿದ್ದವರು ಕೊ*ಲೆಯಲ್ಲಿ ಅಂತ್ಯವಾದ ಅದೆಷ್ಟೋ ಪ್ರಕರಣವನ್ನ ನೀವು ನೋಡಿರ್ತೀರಿ. ಈ ಲಿಸ್ಟ್​ಗೆ ಪುಣೆಯಲ್ಲಿ ನಡೆದ ಈ ಒಂದು ಘಟನೆ ಕೂಡ ಸೇರ್ಕೊಂಡಿದೆ.. ಅದರಲ್ಲೂ ಕೊ*ಗೆ ದೃಶ್ಯಂ ಸಿನಿಮಾ ಪ್ರೇರಣೆ ಆಗಿದೆ..
ಕುಲುಮೆಯಲ್ಲಿ ಪತ್ನಿ ಭಸ್ಮ!
ಮಹಾರಾಷ್ಟ್ರ.. ಪುಣೆ.. ಶಿವಾನೆ ಏರಿಯಾ.. ಗಂಡ ಸಮೀರ್ ಜಾಧವ್.. ಹೆಂಡ್ತಿ ಅಂಜಲಿ ಜಾಧವ್.. ಇಬ್ಬರು ಮಕ್ಕಳು.. ಖಾಸಗಿ ಶಾಲೆಯಲ್ಲಿ ಟೀಚರ್ ಆಗಿದ್ದ ಅಂಜಲಿಗೆ ಗಂಡ ಅಂದ್ರೆ ಪ್ರಾಣ.. ಈ ಸಮೀರ್ ಜಾಧವ್ ಸ್ವಂತ ಗ್ಯಾರೇಜ್ ನಡೆಸುತ್ತಿದ್ದ.. ಈ ಸುಂದರ ಕುಟುಂಬಕ್ಕೆ ಹುಳಿ ಹಿಂಡಿದ್ದು ಸಮೀರ್​ಗಿದ್ದ ಅಫೇರ್​.. ಇದಕ್ಕಾಗಿ ತಿಂಗಳುಗಳಿಂದ ಸಮೀರ್ ಪ್ಲಾನ್ ಮಾಡಿದ್ದ.. ಈ ಪೈಕಿ ಅವನು ಮಾಡಿದ ಮೊದಲ ಕೆಲಸ ದೃಶ್ಯಂ ಸಿನಿಮಾ ನೋಡಿರೋದು.. ಈ ಸಿನಿಮಾವನ್ನ ನಾಲ್ಕು ಬಾರಿ ನೋಡಿದ್ದ.. ಹ* ಬಳಿಕ ಎಸ್ಕೇಪ್ ಆಗೋದು ಹೇಗೆ ಅಂತ ಪ್ಲಾನ್ ಮಾಡ್ಕೊಂಡಿದ್ದ. ಅದನ್ನ ಎಕ್ಸಿಕ್ಯೂಟ್ ಕೂಡ ಮಾಡಿದ್ದ..
ಇದನ್ನೂ ಓದಿ: ನಂಬಿಕೆ ಗಳಿಸಿ ಪಕ್ಕದ ಮನೆಯ ಅಜ್ಜಿಯ ಕತ್ತು ಕೊಯ್ದ ಲೇಡಿ.. ಕಜ್ಜಾಯ ಕೊಡೋದಾಗಿ ಮನೆಗೆ ಕರೆದು ಕೃತ್ಯ
ದೃಶ್ಯ ಸಿನಿಮಾ ರೀತಿಯಲ್ಲಿ ತಾನೇ ಒಂದು ಕತೆ ಹೆಣೆದಿದ್ದ.. ಕತೆಯ ಪ್ರಕಾರ ತನ್ನ ಹೊಸ ಗ್ಯಾರೇಜ್​ ಪಕ್ಕದಲ್ಲಿ ದೊಡ್ಡ ಗೋಡೌನ್ ಬಾಡಿಗೆಗೆ ಪಡೆದಿದ್ದ. ಬಳಿಕ ಅಲ್ಲಿ ಸೀಸ, ಕಬ್ಬಿಣ ಕರಗಿಸುವ ಬಾಯ್ಲರ್ ರೆಡಿ ಮಾಡಿದ್ದ. ಇದು ತನ್ನ ಗ್ಯಾರೇಜ್ ಹಾಗೂ ಕೆಲಸಕ್ಕೂ ಬಳಕೆಯಾಗುವ ರೀತಿಯಲ್ಲಿ ರೆಡಿ ಮಾಡಿಟ್ಟಿದ್ದ. ಬಳಿಕ ಪತ್ನಿಯನ್ನ ತನ್ನ ಹೊಸ ಗೋಡೌನ್ ನೋಡಲು ಬಾ ಎಂದು ಕರೆದುಕೊಂಡು ಹೋಗಿದ್ದಾನೆ.
ದೀಪಾವಳಿ ರಜೆ ಕಾರಣದಿಂದ ಮಕ್ಕಳು ಊರಿಗೆ ತೆರಳಿದ್ರು. ಗಂಡ ಉದ್ಯಮದಲ್ಲಿ ಬೆಳೆಯುತ್ತಿದ್ದಾನೆ ಎಂದು ಖುಷಿಯಲ್ಲಿದ್ದ ಅಂಜಲಿ, ಗೋಡೌನ್ ನೋಡಲು ಹೋಗಿದ್ದಾಳೆ. ಗೋಡೌನ್ ಒಳಗೆ ಬಂದ ಬಳಿಕ ಈತ ಆಕೆಯನ್ನ ಹ* ಮಾಡಿದ್ದಾನೆ. ಬಳಿಕ ಈಕೆಯ ಮೃತದೇಹವನ್ನ ಸೀಸ, ಕಬ್ಬಿಣ ಕರಗಿಸುವ ಬ್ರಾಯ್ಲರ್‌ನಲ್ಲಿ ಸುಟ್ಟು ಭಸ್ಮಮಾಡಿದ್ದಾನೆ.. ಈಕೆಯ ಭಸ್ಮವನ್ನ ಹತ್ತಿರದ ನದಿಗೆ ಚೆಲ್ಲಿದ್ದಾನೆ.
ಇದನ್ನೂ ಓದಿ: ಕೈದಿಗಳಿಗೆ ರಾಜಾತಿಥ್ಯ ವಿರುದ್ಧ ಕೇಸ್​ ದಾಖಲು.. ಬಿಜೆಪಿಯಿಂದ ಇವತ್ತು CM ನಿವಾಸಕ್ಕೆ ಮುತ್ತಿಗೆ
ಸಮೀರ್ ಜಾಧವ್ ದೃಶ್ಯಂ ಸಿನಿಮಾ ಸ್ಪೂರ್ತಿಯಾಗಿಟ್ಟುಕೊಂಡು ಹೆಣೆದ ಕತೆಯಲ್ಲಿ ಕೆಲ ಟ್ವಿಸ್ಟ್ ಕೂಡ ನೀಡಿದ್ದಾನೆ. ಪತ್ನಿಯ ಹ* ಮಾಡಿದ ಬಳಿಕ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿದ್ದ. ಇತ್ತ ಅಂಜಲಿ ಫೋನ್‌ನಿಂದ ಹ*ಗೂ ಮೊದಲು ಪತ್ನಿಗೆ ಗೊತ್ತಿಲ್ಲದ ರೀತಿ ತನ್ನ ಗೆಳೆಯನಿಗೆ ಐ ಲವ್ ಯೂ ಎಂದು ಮೆಸೇಜ್ ಕಳುಹಿಸಿದ್ದ.. ಇದರ ನಡುವೆ ಸಮೀರ್ ಜಾದವ್ ಪೊಲೀಸ್ ಠಾಣೆಗೆ ತೆರಳಿ ಪತ್ನಿಯನ್ನ ಪತ್ತೆ ಹಚ್ಚುವಂತೆ ಮನವಿ ಮಾಡುತ್ತಲೇ ಇದ್ದ. ಸಮೀರ್ ಪದೇ ಪದೇ ಪೊಲೀಸ್ ಠಾಣೆಗೆ ಭೇಟಿ ಪೊಲೀಸರ ಅನುಮಾನಕ್ಕೆ ದಾರಿ ಮಾಡಿಕೊಟ್ಟಿತ್ತು.. ಪೊಲೀಸ್​​​ ಭಾಷೆಯಲ್ಲಿ ರುಬ್ಬಿದಾಗ ಗೋಡೌನ್​​​ ಮ*ರ್​​​​​​ ಸತ್ಯ ಹೊರಬಂದಿದೆ..
ಸಮೀರ್​ ಜಾಧವ್‌ಗೆ ಯುವತಿಯೊಬ್ಬಳ ಜೊತೆ ಅಕ್ರಮ ಸಂಬಂಧ ಇತ್ತು. ಪತ್ನಿಯನ್ನ ದೂರ ಮಾಡಿ ಆಕೆಯ ಜೊತೆ ಸಂಸಾರ ನಡೆಸಲು ನಿರ್ಧರಿಸಿದ್ದ. ಆದ್ರೆ ಪತ್ನಿಯನ್ನ ದೂರ ಮಾಡೋದು ಕಷ್ಟ. ಹೀಗಾಗಿ ಮುಗಿಸಿ ಬಿಡಲು ಪ್ಲಾನ್ ಮಾಡಿದ್ದ. ಪದೇ ಪದೇ ಠಾಣೆಗೆ ಭೇಟಿಕೊಟ್ಟ ಸಮೀರ್ ಌಕ್ಟಿಂಗ್​ ಪ್ರಕರಣ ಬಯಲಿಗೆಳೆದಿದೆ.. ಇನ್ನೊಂದ್ಕಡೆ ದೃಶ್ಯ ಸಿನಿಮಾ ಹಂತಕರಿಗೆ ಪ್ರೇರಣೆ ಆಗ್ತಿರೋದು ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us