/newsfirstlive-kannada/media/media_files/2025/11/09/bengaluru-ajji-2025-11-09-19-03-19.jpg)
ಅಕ್ಕಪಕ್ಕದ ಮನೆಯವರು ಅಂದ್ರೆ ಒಂದು ಒಡನಾಟ ಇರುತ್ತೆ. ಆಗಾಗ ಒಗ್ಗರಣೆಗೆ ಮಸಾಲೆ ಕಮ್ಮಿಯಾಯ್ತು ಅಂತಾನೋ ಅಥವಾ ಟೀಗೆ ಸಕ್ಕರೆ ಇಲ್ಲ ಅಂತಾನೋ ಪರಸ್ಪರ ಕೊಡು-ಕೊಳ್ಳುವಿಕೆ ಮೂಲಕ ಆಪ್ತರಾಗಿರ್ತಾರೆ. ಆದ್ರೆ ಇದೇ ಅತಿಯಾದ ನಂಬಿಕೆಯಿಂದ ಅಜ್ಜಿ ಪ್ರಾಣ ಕಳೆದುಕೊಂಡಿದ್ದಾರೆ.
ಮೇಲಿನ ಫೋಟೋದಲ್ಲಿರೋ ವೃದ್ಧೆಯ ಹೆಸರು ಭದ್ರಮ್ಮ. 68 ವರ್ಷ ವಯಸ್ಸು. ಬೆಂಗಳೂರಿನ ಸರ್ಜಾಪುರ ಠಾಣಾ ವ್ಯಾಪ್ತಿಯ ಕೂಗೂರಿನ ನಿವಾಸಿ. ಪಾಪ ಬೆಣ್ಣೆಯಂತೆ ಮಾತಾಡಿದ್ದನ್ನೇ ನಂಬಿ ಹೋದ ಅಜ್ಜಿ ದುರಂತ ಅಂತ್ಯ ಕಂಡಿದ್ದಾಳೆ.
ಕಜ್ಜಾಯ ಕೊಡೋದಾಗಿ ಮನೆಗೆ ಕರೆದೊಯ್ದು ಕೊ*!
ಕೂಗೂರಿನ ಭದ್ರಮ್ಮ ಜೊತೆ ಇದೇ ಗ್ರಾಮದ ನಿವಾಸಿಯಾದ ದೀಪಾ ಆತ್ಮೀಯಳಾಗಿದ್ಲು. ಆದರೆ ಅದಾಗಲೇ ವೃದ್ಧೆಯ ಮೇಲೆ ದೀಪಾಳ ಕೆಟ್ಟ ಕಣ್ಣು ಬಿದ್ದಿತ್ತು. ಅಂದಾಗೆ ಅಕ್ಟೋಬರ್ 30ರ ಮಧ್ಯಾಹ್ನದಿಂದ ವೃದ್ಧೆ ಭದ್ರಮ್ಮ ಕಾಣೆಯಾಗಿದ್ರು. ಎಲ್ಲೆಡೆ ಹುಡುಕಿದ್ರೂ ಪತ್ತೆಯಾಗಿರಲಿಲ್ಲ. ಹಾಗಾಗಿ ವೃದ್ಧೆಯ ಕುಟುಂಬಸ್ಥರು ಮರುದಿನ ಸರ್ಜಾಪುರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ರು. ಪೊಲೀಸರು, ಕರಪತ್ರಗಳನ್ನ ಹಂಚಿ ವೃದ್ಧೆಯನ್ನ ಹುಡುಕಾಡಿದಾಗ ನವೆಂಬರ್ 6ರಂದು ಸುಳಿವೊಂದು ಸಿಕ್ಕಿತ್ತು.
ಕಜ್ಜಾಯ ಕೊಡೋದಾಗಿ ಕರೆದೊಯ್ದು ಕೊ*
ಕಜ್ಜಾಯ ಕೊಡೋ ನೆಪದಲ್ಲಿ ಮನೆಗೆ ಕರೆದುಕೊಂಡು ಹೋಗಿ ವೃದ್ಧೆಯನ್ನ ದೀಪಾ ಕೊ* ಮಾಡಿದ್ಲು. ವೃದ್ಧೆ ಬಳಿ ಇದ್ದ ಚಿನ್ನದ ಸರಕ್ಕಾಗಿ ಕೊ* ಮಾಡಿರೋದು ಗೊತ್ತಾಗಿದೆ. ಕೊ* ಮಾಡಿದ ಬಳಿಕ ವೃದ್ಧೆ ಭದ್ರಮ್ಮಳ ಶವವನ್ನು ಮೂಟೆ ಕಟ್ಟಿ ಮನೆಯಲ್ಲಿಟ್ಟುಕೊಂಡಿದ್ಲು. ಎರಡು ದಿನಗಳ ಕಾಲ ಮನೆಯಲ್ಲಿಯೇ ಇದ್ದ ವೃದ್ಧೆಯ ಮೃತದೇಹದ ವಾಸನೆ ಹೆಚ್ಚಾದಾಗ ಮತ್ತೊಂದು ಚೀಲಕ್ಕೆ ಹಾಕಿದ್ಲು.
ಕಸ ಇದೆ ಎಸೆದು ಬರೋಣ ಅಂತ ಮಗನನ್ನ ಕರೆಸಿ ದೊಡ್ಡತಿಮ್ಮಸಂದ್ರ ಕೆರೆಯ ಪೊದೆಯಲ್ಲಿ ಮೂಟೆಯನ್ನ ಎಸೆದು ಹೋಗಿದ್ಲು. ಮನೆಗೆ ಹೋಗಿ ಏನು ತಿಳಿಯದಂತೆ ಡ್ರಾಮಾ ಮಾಡಿದ್ದ ದೀಪಾ, ವೃದ್ಧೆ ಮನೆಯವರು ಕೇಳಿದಾಗ ನನ್ನ ಮನೆಗೆ ಬಂದು ವಾಪಸ್ ಹೋದ್ರು ಅಂಥ ಕಥೆ ಕಟ್ಟಿದ್ಲು. ಇತ್ತ ಪೊಲೀಸರ ವಿಚಾರಣೆ ವೇಳೆ ಕೊನೆಯದಾಗಿ ದೀಪಾ ಮನೆಗೆ ವೃದ್ಧೆ ಹೋಗಿದ್ದು ಕನ್ಫರ್ಮ್ ಆಗಿತ್ತು. ದೀಪಾಳನ್ನ ಕರೆತಂದು ಪೊಲೀಸರು ತಮ್ಮದೇ ಸ್ಟೈಲಿನಲ್ಲಿ ವಿಚಾರ ಮಾಡಿದಾಗ ಹಂತಕಿ ಕೊ* ರಹಸ್ಯ ಬಾಯ್ಬಿಟ್ಟಿದ್ದಾಳೆ.
ಒಟ್ಟಾರೆ ಚಿನ್ನಕ್ಕಾಗಿ ಅಜ್ಜಿಯ ಜೀವ ತೆಗೆದ ಕಿರಾತಕಿಯನ್ನ ಪೊಲೀಸ್ರು ಹೆಡೆಮುರಿಕಟ್ಟಿದ್ದು ಆರೋಪಿ ಬಳಿ ಮತ್ತಷ್ಟು ಮಾಹಿತಿ ಕಲೆಹಾಕ್ತಿದ್ದಾರೆ.
ಇದನ್ನೂ ಓದಿ: ಉಗ್ರಂ ಮಂಜು, ಸಂಧ್ಯಾ ಎಂಗೇಜ್ಮೆಂಟ್​.. ವಿಶೇಷವಾದ ಟಾಪ್​- 10 ಫೋಟೋಸ್​.!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us