/newsfirstlive-kannada/media/media_files/2025/11/09/akash_kumar_choudhary_meghalaya_cricketer_yuvi-2025-11-09-17-43-50.jpg)
ಫಸ್ಟ್ ಕ್ಲಾಸ್ ಕ್ರಿಕೆಟ್​ನಲ್ಲಿ ಮೇಘಾಲಯದ ಯುವ ಬ್ಯಾಟರ್ ಕೇವಲ 11 ಬಾಲ್​ಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ಟೀಮ್ ಇಂಡಿಯಾದ ಮಾಜಿ ಸ್ಟಾರ್​ ಆಲ್​ರೌಂಡರ್​ ಯುವರಾಜ್ ಸಿಂಗ್ ಅವರು ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕೇವಲ 14 ಬಾಲ್​ಗಳಲ್ಲಿ ಹಾಫ್​ ಸೆಂಚುರಿ ಬಾರಿಸಿದ್ದರು. ಆದರೆ ಇದು ಫಸ್ಟ್ ಕ್ಲಾಸ್ ಕ್ರಿಕೆಟ್​ನಲ್ಲಿ ಯುವ ಬ್ಯಾಟರ್ ಆಕಾಶ್ ಕುಮಾರ್ ಚೌದ್ರಿ ಮಹತ್ತರವಾದ ವಿಶ್ವ ದಾಖಲೆ ಮಾಡಿದ್ದಾರೆ.
ಗುಜರಾತ್​ನ ಸೂರತ್​ನ ಸಿಕೆ ಪಿಠವಾಲಾ ಮೈದಾನದಲ್ಲಿ ರಣಜಿ ಟ್ರೋಫಿ ಪ್ಲೇಟ್​ ಗ್ರೂಪ್​ನಲ್ಲಿ ಮೇಘಾಲಯ ಹಾಗೂ ಅರುಣಾಚಲ ಪ್ರದೇಶ ಅಖಾಡಕ್ಕೆ ಇಳಿದಿದ್ದವು. ಈ ಪಂದ್ಯದಲ್ಲಿ ಮೇಘಾಲಯ ತಂಡದ ಪರ ಬ್ಯಾಟ್​ ಬೀಸಿದ ಆಕಾಶ್ ಕುಮಾರ್ ಚೌದ್ರಿ ಅವರು ಐತಿಹಾಸಿಕ ದಾಖಲೆ ಬರೆದಿದ್ದಾರೆ. ಈ ಹಿಂದಿನ ಎಲ್ಲ ದಾಖಲೆಗಳನ್ನು ಹಿಂದಿಕ್ಕಿ ಅತಿ ವೇಗದ ಅರ್ಧಶತಕ ಸಿಡಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರಿದ್ದಾರೆ.
ಪಂದ್ಯದಲ್ಲಿ ಆಕಾಶ್ ಕುಮಾರ್ ಚೌದ್ರಿ ಅವರು ಸತತ 8 ಸಿಕ್ಸರ್​ಗಳನ್ನು ಬಾರಿಸಿರುವುದು ದಾಖಲೆ ಆಗಿದೆ. ಅಲ್ಲದೇ ಲಿಮಾರ್ ದಾಬಿ ಎನ್ನುವ ಬೌಲರ್​ನ ಒಂದೇ ಓವರ್​ನಲ್ಲಿ 6 ಬಾಲ್​ಗೆ 6 ಸಿಕ್ಸರ್​ಗಳನ್ನು ಬಾರಿಸಿದ್ದಾರೆ. ಈ ಮೂಲಕ ಕೇವಲ 11 ಎಸೆತಗಳಲ್ಲಿ ಹಾಫ್​ ಸೆಂಚುರಿ ಬಾರಿಸಿ ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದ್ದಾರೆ. ಅತಿ ವೇಗವಾಗಿ ಅರ್ಧಶತಕ ಸಿಡಿಸಿದವರಲ್ಲಿ ಆಕಾಶ್ ಕುಮಾರ್ ಚೌದ್ರಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
/filters:format(webp)/newsfirstlive-kannada/media/media_files/2025/11/09/akash_kumar_choudhary_meghalaya_cricketer-2025-11-09-17-44-01.jpg)
ಇನ್ನು ಆಕಾಶ್ ಕುಮಾರ್ ಚೌದ್ರಿ ಫೀಯರ್​ಲೆಸ್​ ಬ್ಯಾಟಿಂಗ್​​ನಿಂದ ಮೇಘಾಲಯ ಟೀಮ್ ಅದ್ಭುತವಾದ ಗೆಲುವು ಕಂಡಿದೆ. ಕೇವಲ 14 ಬಾಲ್​ಗಳಿಗೆ 50 ರನ್​ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಆಕಾಶ್ ಕುಮಾರ್ ಚೌದ್ರಿಗೆ ಈಗ 25 ವರ್ಷಗಳು ಎಂದು ಹೇಳಲಾಗುತ್ತಿದೆ. 13 ವರ್ಷಗಳ ಹಿಂದಿನ ರೆಕಾರ್ಡ್​ ಅನ್ನು ಆಕಾಶ್ ಕುಮಾರ್ ಬ್ರೇಕ್ ಮಾಡಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಫಸ್ಟ್​ಕ್ಲಾಸ್ ಕ್ರಿಕೆಟ್​ನಲ್ಲಿ ಕಡಿಮೆ ಬಾಲ್​ಗೆ 50 ಬಾರಿಸಿದ ಬ್ಯಾಟರ್ಸ್​
- 11 ಎಸೆತ- ಆಕಾಶ್ ಕುಮಾರ್ ಚೌದ್ರಿ, 2025
- 12 ಬಾಲ್​ಗಳು- ವೇಯ್ನ್ ವೈಟ್- 2012
- 13 ಎಸೆತ- ಮೈಕೆಲ್ ವ್ಯಾನ್ ವುರೆನ್- 1984/85
- 14 ಬಾಲ್​ಗಳು- ನೆಡ್ ಎಕರ್ಸ್ಲಿ- 2012
- 15 ಎಸೆತ- ಬಂದೀಪ್ ಸಿಂಗ್- 2015/16
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us