Advertisment

IPL 2026; ಚೆನ್ನೈ, ಆರ್​ಆರ್​ ಮಧ್ಯೆ 18 ಕೋಟಿ ರೂ ಬ್ಯುಸಿನೆಸ್​.. ಜೂ ABDಗಾಗಿ ವ್ಯಾಪಾರ ಮುರಿಯಿತಾ?

ಈ ವ್ಯಾಪಾರದಲ್ಲಿ ಆರ್​ಆರ್ ಟೀಮ್ ನಾವು ಒಳ್ಳೆಯ ಪ್ಲೇಯರ್​ ಅನ್ನೇ ಬಿಟ್ಟುಕೊಡುತ್ತಿರುವ ಕಾರಣ ನಮಗೆ ಸಿಎಸ್​ಕೆ ಇಂದ ಇನ್ನೊಬ್ಬ ಯುವ ಆಟಗಾರ ಬೇಕು ಎಂದು ಬೇಡಿಕೆ ಮುಂದಿಟ್ಟಿದೆ. ಯಂಗ್ ಆ್ಯಂಡ್ ಎನರ್ಜಿಟಿಕ್ ಪ್ಲೇಯರ್​ ಯಾರು?.

author-image
Bhimappa
Dewald_Brevis_ipl_2026_csk
Advertisment

ಐಪಿಎಲ್ 2026ರ ವ್ಯಾಪಾರ ವ್ಯವಹಾರ ದೊಡ್ಡ ಮಟ್ಟದಲ್ಲೇ ಫ್ರಾಂಚೈಸಿಗಳು ತೆರೆಮರೆಯಲ್ಲಿ ನಡೆಸಿವೆ. ತಮ್ಮ ತಂಡಕ್ಕೆ ಯಾವ್ಯಾವ ಆಟಗಾರ ಬೇಕೆಂದು ಸರಿಯಾಗಿ ಅಳೆದುತೂಗಿ ಮಣೆ ಹಾಕುತ್ತಿವೆ. ಸದ್ಯ ಚೆನ್ನೈ ಸೂಪರ್ ಕಿಂಗ್ಸ್​ (ಸಿಎಸ್​ಕೆ) ಹಾಗೂ ರಾಜಸ್ತಾನ ರಾಯಲ್ಸ್ (ಆರ್​ಆರ್) ನಡುವೆ ಬಿಗ್ ಡೀಲ್ ನಡೆದಿದೆ. ಆದರೆ ಈ ಯಂಗ್ ಪ್ಲೇಯರ್​ನಿಂದ ಅಡಚಣೆ ಉಂಟಾಗಿದೆ. 

Advertisment

ಟೀಮ್​ನ ನಾಯಕನಾಗಿದ್ದ ಸಂಜು ಸ್ಯಾಮ್ಸನ್ ಅವರನ್ನೇ ಬಿಟ್ಟು ಕೊಡಲು ರಾಜಸ್ತಾನ ರಾಯಲ್ಸ್ ಮುಂದಾಗಿದೆ. ಅತ್ತ ಚೆನ್ನೈ ಫ್ರಾಂಚೈಸಿ ಕೂಡ ತಮ್ಮ ತಂಡದ ಬಹುದಿನಗಳ ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾರನ್ನ ತ್ಯಾಗ ಮಾಡೋಕೆ ಸಿದ್ಧವಾಗಿದೆ. ಈ ಇಬ್ಬರು ಆ..ಆ.. ತಂಡಗಳಲ್ಲಿ 18 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ. ಹೀಗಾಗಿ ನಾವು ಜಡೇಜಾನ ಕೊಟ್ಟರೇ ನಮಗೆ ಸಂಜುನ ಕೊಡಿ ಎಂದು ಸಿಎಸ್​ಕೆ ಹಾಗೂ ಆರ್​ಆರ್​ ನಡುವೆ ವ್ಯಾಪಾರ ಆರಂಭವಾಗಿದೆ. 

ಆದರೆ ಈ ವ್ಯಾಪಾರದಲ್ಲಿ ಆರ್​ಆರ್ ಟೀಮ್ ನಾವು ಒಳ್ಳೆಯ ಪ್ಲೇಯರ್​ ಅನ್ನೇ ಬಿಟ್ಟುಕೊಡುತ್ತಿರುವ ಕಾರಣ ನಮಗೆ ಸಿಎಸ್​ಕೆ ಇಂದ ಇನ್ನೊಬ್ಬ ಯುವ ಆಟಗಾರ ಬೇಕು ಎಂದು ಬೇಡಿಕೆ ಮುಂದಿಟ್ಟಿದೆ. ಯಂಗ್ ಆ್ಯಂಡ್ ಎನರ್ಜಿಟಿಕ್ ಪ್ಲೇಯರ್​, ಜೂನಿಯರ್​ ಎಬಿಡಿ ಎಂದು ಕರೆಸಿಕೊಳ್ಳುವ ಡೆವಾಲ್ಡ್​​ ಬ್ರೆವಿಸ್​ ಮೇಲೆ ರಾಜಾಸ್ತಾನ ಫ್ರಾಂಚೈಸಿ ಕಣ್ಣು ಹಾಕಿದೆ. ಆದರೆ ಇದಕ್ಕೆ ಚೆನ್ನೈ ತಂಡ ಸುತರಾಂ ಒಪ್ಪುತ್ತಿಲ್ಲ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ:ವಿಶ್ವಕಪ್ ವಿಜೇತರಿಗೆ ಡಿಮ್ಯಾಂಡೋ..ಡಿಮ್ಯಾಂಡ್​.. ಸ್ಮೃತಿ ಮಂದಾನ, ರಿಚಾ, ಹರ್ಮನ್ ಈಗ ಫುಲ್ ರಿಚ್!

Advertisment

Jadeja_Sanju_Samson_ipl_2026_csk

ಏಕೆಂದರೆ ಕಳೆದ ಸೀಸನ್​ ಮಧ್ಯದಲ್ಲಿ ಸಿಎಸ್​ಕೆಗೆ ಬಂದಿದ್ದ ಸೌತ್​ ಆಫ್ರಿಕಾದ ಹಿಟ್ಟರ್ ಡೆವಾಲ್ಡ್​​ ಬ್ರೆವಿಸ್ ಸನ್ಷೆಷನ್ ಕ್ರಿಯೇಟ್ ಮಾಡಿದ್ದರು. ಹೀಗಾಗಿ ಇಡೀ ಫ್ರಾಂಚೈಸಿಯೇ ಬ್ರೆವಿಸ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಫೀಯರ್​ಲೆಸ್ ಬ್ಯಾಟಿಂಗ್ ಎದುರಾಳಿಗಳ ಎದೆ ನಡುಗಿಸುವಂತೆ ಇರುತ್ತದೆ. ಯಾವುದೇ ಕ್ಷಣದಲ್ಲಿ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯುವ ಚಾಣಕ್ಷನಾಗಿದ್ದಾನೆ. ಅಲ್ಲದೇ ಇದೇ ವರ್ಷ ನಡೆದ ಎಸ್​ಎ20 ಆಕ್ಷನ್​ನಲ್ಲಿ ಭಾರೀ ಮೊತ್ತಕ್ಕೆ ಬ್ರೆವಿಸ್, ಪ್ರಿಟೋರಿಯಾ ಕ್ಯಾಪಿಟಲ್ಸ್ ಪಾಲಾದರು. 

ಅದ್ರೆ ಅಂತಿಮವರೆಗೆ ಬಿಡ್ ಮಾಡಿದ್ದ ಸಿಎಸ್​ಕೆ ಫ್ರಾಂಚೈಸಿಯ ಭಾಗವಾದ ಜೋ'ಬರ್ಗ್ ಸೂಪರ್ ಕಿಂಗ್ಸ್ ಹಿಂದೆ ಸರಿಯಿತು. ಈಗಾಗಲೇ ಎಸ್​ಎ20 ಆಕ್ಷನ್​ನಲ್ಲಿ ಬಿಟ್ಟುಕೊಟ್ಟು ಕೈಸುಟ್ಟುಕೊಂಡಿದೆ. ಈಗ ಮತ್ತೆ ಬ್ರೆವಿಸ್​ ಅವರನ್ನೇ ಆರ್​ಆರ್ ಕೇಳುತ್ತಿರುವುದರಿಂದ ಸಿಎಸ್​ಕೆ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಸಂಜು ಸ್ಯಾಮ್ಸನ್​ ಹಾಗೂ ರವೀಂದ್ರ ಜಡೇಜಾ ಇಬ್ಬರನ್ನು ಹೇಗೆ ಫ್ರಾಂಚೈಸಿಗಳು ವಿನಿಯಮ ಮಾಡಿಕೊಳ್ಳುತ್ತವೆ ಎನ್ನುವುದು ಕುತೂಹಲ ಮೂಡಿಸಿದೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
IPL 2026 auction ipl retention
Advertisment
Advertisment
Advertisment