/newsfirstlive-kannada/media/media_files/2025/11/09/india_women_team_world_cup_win-2025-11-09-13-12-06.jpg)
ಚೊಚ್ಚಲ ಮಹಿಳಾ ಏಕದಿನ ವಿಶ್ವಕಪ್​​ ಗೆದ್ದ ಟೀಮ್ ಇಂಡಿಯಾಕ್ಕೆ ವಿಶ್ವವೇ ಫಿದಾ ಆಗಿದೆ. ನಾಯಕಿ ಹರ್ಮನ್​ ಪ್ರೀತ್​ ಕೌರ್​, ಸ್ಮೃತಿ ಮಂದಾನ, ಶೆಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್​​.. ವಿಶ್ವ ಗೆದ್ದ ವನಿತೆಯರು ಈಗ ಎಲ್ಲರ ಫೇವರಿಟ್​ ಸ್ಟಾರ್ಸ್​​. ಕ್ರಿಕೆಟ್​ ಲೋಕದಲ್ಲಂತೂ ಚಾಂಪಿಯನ್ ಆಟಗಾರ್ತಿಯರ ಹೆಸರು ಸಖತ್​ ಸೌಂಡ್​ ಮಾಡ್ತಿದೆ. ಅಭಿಮಾನಿಗಳ ವಲಯದಲ್ಲಿ ವೀರ ವನಿತೆಯ ಆರಾಧನೆಯೇ ನಡೀತಿದೆ. ವಿಶ್ವಕಪ್ ವಿಜೇತರಿಗೆ ಫುಲ್​ ಡಿಮ್ಯಾಂಡ್​ ಕ್ರಿಯೇಟ್​ ಆಗಿದೆ.
ಒಂದೇ ಒಂದು ಅದ್ಭುತ ಇನ್ನಿಂಗ್ಸ್,​ ಕ್ರಿಕೆಟಿಗರ ಹಣೆಬರವನ್ನೇ ಬದಲಾಯಿಸಿ ಬಿಡುತ್ತೆ. ಆಟಗಾರರು ರಾತ್ರೋ ರಾತ್ರಿ ಸೂಪರ್ ಹೀರೋ ಆಗ್ಬಿಡ್ತಾರೆ. ಫ್ಯಾನ್ಸ್ ಫೇವರಿಟ್ ಆನಿಸಿಬಿಡ್ತಾರೆ. ಅಂತಾದ್ರಲ್ಲಿ ಸುದೀರ್ಘ 47 ವರ್ಷಗಳ ಕೊರಗು ನೀಗಿ ಕೋಟ್ಯಂತರ ಅಭಿಮಾನಿಗಳ ಕನಸು ನನಸಾದ್ರೆ ಏನ್​​ಆಗಬೇಡ ಹೇಳಿ. ಇಡೀ ದೇಶವೇ ಸಾಧಕರ ಹಿಂದೆ ಬೀಳುತ್ತೆ. ಚೊಚ್ಚಲ ಮಹಿಳಾ ವಿಶ್ವಕಪ್​ ಗೆದ್ದ ಭಾರತದ ಹೆಮ್ಮೆಯ ಆಟಗಾರ್ತಿಯರ ವಿಚಾರದಲ್ಲೂ ಆಗಿರೋದು ಇದೆ.
/filters:format(webp)/newsfirstlive-kannada/media/media_files/2025/11/02/smriti_mandhana_new-2025-11-02-10-15-16.jpg)
ವಿಶ್ವಕಪ್ ವಿಜೇತರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು.!
ನಿರ್ಲ್ಯಕ್ಷ.. ಕಡೆಗಣನೆ.. ತಿರಸ್ಕಾರ.. ಭಾರತೀಯ ಮಹಿಳಾ ಕ್ರಿಕೆಟರ್ಸ್​ ಅನುಭವಿಸಿದ್ದು ಒಂದಾ, ಎರಡಾ. ಆದ್ರೀಗ, ಅದ್ದೂರಿ ಸ್ವಾಗತ, ಸನ್ಮಾನ, ಸಂಭ್ರಮ, ಹೊಗಳಿಕೆಗಳ ಸುರಿಮಳೆಯೇ ಸುರಿತಿದೆ. ಒಂದೇ ಒಂದು ವಿಶ್ವಕಪ್​​ ಗೆಲುವು ಎಲ್ಲವನ್ನೂ ಬದಲಾಯಿಸಿದೆ. ಲಕ್ಷ ಲಕ್ಷ ಕ್ರಿಕೆಟ್ ಅಭಿಮಾನಿಗಳು, ಟೀಮ್ ಇಂಡಿಯಾ ಆಟಗಾರ್ತಿಯರ ಹಿಂದೆ ಬಿದ್ದಿದ್ದಾರೆ. ಬಹುಮಾನಗಳ ಮೇಲೆ ಬಹುಮಾನಗಳು ಘೋಷಣೆಯಾಗ್ತಿವೆ. ಎಲ್ಲರ ಬಾಯಲ್ಲೂ ವಿಶ್ವ ಗೆದ್ದ ವನಿತೆಯರ ಬಗ್ಗೆ ಚರ್ಚೆ ಆಗ್ತಿದೆ. ಜೊತೆಗೆ ಆಟಗಾರ್ತಿಯರ ಮಾರ್ಕೆಟ್​ ವ್ಯಾಲ್ಯೂ ಕೂಡ ಗಗನಕ್ಕೇರಿದೆ.
25% ಏರಿಕೆ ಕಂಡ ಸ್ಮೃತಿ ಮಂದಾನ ಬ್ರ್ಯಾಂಡ್​ ವ್ಯಾಲ್ಯೂ.!
ವಿಶ್ವಕಪ್​ ಗೆಲುವಿನ ಬೆನ್ನಲ್ಲೇ ಟೀಮ್​ ಇಂಡಿಯಾ ವೈಸ್​ ಕ್ಯಾಪ್ಟನ್​ ಸ್ಮೃತಿ ಮಂದಾನ ಬ್ರ್ಯಾಂಡ್​ ವ್ಯಾಲ್ಯೂ ಏರಿಕೆ ಕಂಡಿದೆ. ಗ್ಲಾಮರ್​ ಗರ್ಲ್​ ಮಂದಾನ ಮಾರ್ಕೆಟ್​ ವ್ಯಾಲ್ಯೂ ಬರೋಬ್ಬರಿ 25% ಜಾಸ್ತಿಯಾಗಿದೆ. 1.75 ಕೋಟಿ ಇದ್ದ ಮಂದಾನ ವ್ಯಾಲ್ಯೂ ಈಗ 2 ಕೋಟಿಯ ಗಡಿ ದಾಟಿದ್ಯಂತೆ. ಅಂದ್ರೆ, ಇನ್ಮುಂದೆ ಒಂದು ಕಮರ್ಷಿಯಲ್​ಗೆ ಮಂದಾನ 2 ಕೋಟಿಗೂ ಅಧಿಕ ಚಾರ್ಜ್​ ಮಾಡಲಿದ್ದಾರೆ.
1.5 ಕೋಟಿ ಗಡಿ ದಾಡಿದ ಹರ್ಮನ್​ ಮಾರ್ಕೆಟ್ ವ್ಯಾಲ್ಯೂ.!
ಸ್ಮೃತಿ ಮಂದಾನಗೆ ಹೋಲಿಸಿದ್ರೆ ನಾಯಕಿ ಹರ್ಮನ್​ ಪ್ರೀತ್​ ಕೌರ್​ ಜನಪ್ರೀಯತೆ ಅಷ್ಟಾಗಿರಲಿಲ್ಲ. ಹೀಗಾಗಿ ಮಾರ್ಕೆಟ್​ ವ್ಯಾಲ್ಯೂ ಕಡಿಮೆಯಿತ್ತು. ಆದ್ರೆ, ವಿಶ್ವಕಪ್​ ಗೆದ್ದ ಬೆನ್ನಲ್ಲೇ ಟೀಮ್​ ಇಂಡಿಯಾ ನಾಯಕಿಗೂ ಬೇಡಿಕೆ ಹೆಚ್ಚಾಗಿದೆ. ಮಾರ್ಕೆಟ್​ ವ್ಯಾಲ್ಯೂ ಬಂಪರ್​ ಏರಿಕೆ ಕಂಡಿದ್ದು, 45ರಿಂದ 50 ಪರ್ಸೆಂಟ್​ ಹೆಚ್ಚಾಗಿದೆ. 1 ಕೋಟಿಯಿದ್ದ ಹರ್ಮನ್​ ಬ್ಯಾಂಡ್​ವ್ಯಾಲ್ಯೂ 1.5 ಕೋಟಿಗೆ ಏರಿದೆ.
ಜೆಮಿಮಾ ರೋಡ್ರಿಗಸ್​ಗೆ ಹೆಚ್ಚಾಯ್ತು ಬೇಡಿಕೆ.!
ಸೆಮಿಫೈನಲ್​ ಪಂದ್ಯದ ಗೆಲುವಿನ ರೂವಾರಿ ಜೆಮಿಮಾ ರೋಡ್ರಿಗಸ್​ಗೂ ಬೇಡಿಕೆ ಹೆಚ್ಚಾಗಿದೆ. ಆಫ್​ ಫೀಲ್ಡ್​ನಲ್ಲಿ ಸದಾ ಆ್ಯಕ್ಟಿವ್​ ಆಗಿರೋ ಜೆಮಿಮಾ, ವಿಶ್ವಕಪ್​ನಲ್ಲಿ ಮಿಂಚಿದ ಬೆನ್ನಲ್ಲೇ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಇದು ಜಾಹೀರಾತುದಾರರ ಕಣ್ಣನ್ನೂ ಅರಳಿಸಿದೆ. ಪರಿಣಾಮ ಜೆಮಿಮಾ ಬ್ರ್ಯಾಂಡ್​ ವ್ಯಾಲ್ಯೂ ಹತ್ತಿರ ಹತ್ತಿರ 100% ಪರ್ಸೆಂಟ್​ ಏರಿಕೆ ಕಂಡಿದೆ. ಅಂದ್ರೆ, 50ರಿಂದ 60 ಲಕ್ಷ ಇದ್ದ ಜೆಮಿಮಾ ಎಂಡ್ರೋಸ್​ಮೆಂಟ್​ ಫೀ ಇದೀಗ 1.5 ಕೋಟಿ ಹತ್ತಿರ ಬಂದಿದೆ.
ಫೈನಲ್​​​ ಸೆನ್ಸೇಷನ್​ ಶೆಫಾಲಿಗೆ ಬ್ರ್ಯಾಂಡ್​ಗಳು​ ಫಿದಾ.!
ಶೆಫಾಲಿ ವರ್ಮಾ ನಿಜಕ್ಕೂ ಅದೃಷ್ಟವಂತೆ. ವಿಶ್ವಕಪ್​ ತಂಡದಿಂದಲೇ ಡ್ರಾಪ್​ ಆಗಿದ್ದ ಶೆಫಾಲಿಗೆ ಪ್ರತಿಕಾ ರಾವಲ್​ ಇಂಜುರಿಯಿಂದ ಅವಕಾಶ ಸಿಗ್ತು. ಅದೃಷ್ಟದ ಅವಕಾಶ ಪಡೆದ ಶೆಫಾಲಿ ಫೈನಲ್​ನಲ್ಲಿ ಶೈನ್ ಆದ್ರು. ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಶೆಫಾಲಿ ಸೆನ್ಸೇಷನ್​ ಸೃಷ್ಟಿಸಿದ್ರು. ಇದ್ರೊಂದಿಗೆ ಮಾರ್ಕೆಟ್​ ವ್ಯಾಲ್ಯೂ ಸರ್​ ಏರಿದೆ. ಹತ್ತಿರ ಹತ್ತಿರ 35% ಬ್ರ್ಯಾಂಡ್​ ವ್ಯಾಲ್ಯೂ ಏರಿದ್ದು, 40 ಲಕ್ಷ ಇದ್ದ ಎಂಡ್ರೋಸ್​ಮೆಂಟ್​ ಫೀ, ಈಗ ಒಂದು ಕೋಟಿಯಾಗಿದೆ.
/filters:format(webp)/newsfirstlive-kannada/media/post_attachments/wp-content/uploads/2023/07/SMRITI_MANDAN_HARMAN_PREET_KOUR.jpg)
‘ರಿಚ್​ ಕಿಡ್’ ಆಗ್ತಿದ್ದಾರೆ​ ರಿಚಾ ಘೋಷ್​.!
ಟೀಮ್​ ಇಂಡಿಯಾ ಯಂಗ್ & ಡೇರ್​ ಡೆವಿಲ್​ ವಿಕೆಟ್​ ಕೀಪರ್​​ ರಿಚಾ ಘೋಷ್​ ವಿಶ್ವಕಪ್ ಗೆದ್ದ ಬಳಿಕ ರಿಚ್​ ಕಿಡ್​ ಆಗ್ತಿದ್ದಾರೆ. ರಿಚಾ ಘೋಷ್​ ಬ್ರ್ಯಾಂಡ್​ ವ್ಯಾಲ್ಯೂ ಕೂಡ ಗಣನೀಯ ಏರಿಕೆ ಕಂಡಿದೆ. 30ರಿಂದ 40 ಲಕ್ಷ ಇದ್ದ ಬ್ರ್ಯಾಂಡ್​ ವ್ಯಾಲ್ಯೂ ಈಗ 70ರಿಂದ 80 ಲಕ್ಷಕ್ಕೆ ಏರಿಕೆ ಕಂಡಿದೆ.
ಪ್ರತಿಕಾ ರಾವಲ್​, ರಾಧಾ ಯಾದವ್​, ಹರ್ಲಿನ್​ ಡಿಯೋಲ್​ ವ್ಯಾಲ್ಯೂ ಕೂಡ ಗಣನೀಯವಾಗಿ ಏರಿಕ ಕಂಡಿದೆ. ಒಂದೇ ಒಂದು ಟ್ರೋಫಿ ಗೆಲುವು ಆಟಗಾರ್ತಿಯರ ಜೀವನವನ್ನೇ ಬದಲಿಸಿದೆ ಅಂದ್ರೆ ತಪ್ಪಾಗಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us