/newsfirstlive-kannada/media/media_files/2025/11/09/dhoni_sanju-2025-11-09-10-53-36.jpg)
ಐಪಿಎಲ್​ ರಿಟೈನ್ಶನ್​​ ಅನೌನ್ಸ್​ಮೆಂಟ್​ಗೆ ಜಸ್ಟ್​ 6 ದಿನ ಮಾತ್ರ ಬಾಕಿ. ಫ್ರಾಂಚೈಸಿಗಳಲ್ಲಿ ಚುಟುವಟಿಗಳು ಸಿಕ್ಕಾಪಟ್ಟೆ ಜೋರಾಗಿ ನಡೀತಿವೆ. ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿಯಂತೂ ಈ ವಿಚಾರದಲ್ಲಿ ಎಲ್ಲರಿಗಿಂತ ಒಂದೆಜ್ಜೆ ಮುಂದಿದೆ. ಬಿಗ್​ ಅನೌನ್ಸ್​ಮೆಂಟ್​ ಮಾಡಿ ಫ್ಯಾನ್ಸ್​ಗೆ ಗುಡ್​ ನ್ಯೂಸ್​ ಕೊಟ್ಟಿದೆ. ಇದೇ ವೇಳೆ ರಾಜಸ್ಥಾನ ರಾಯಲ್ಸ್​ ಜೊತೆಗೆ ಡೀಲ್​ ಕುದುರಿಸೋಕೆ ಮತ್ತೊಮ್ಮೆ ಮಾತುಕತೆಗೆ ಮುಂದಾಗಿದೆ.
ಮಹಿಳಾ ಪ್ರೀಮಿಯರ್​ ಲೀಗ್​ ರಿಟೈನ್ಶನ್​ ಮುಗೀತು. ಇದೀಗ ಇಂಡಿಯನ್​ ಪ್ರೀಮಿಯರ್​ ಲೀಗ್​ನ ರಿಟೈನ್ಶನ್​ಗೆ ಕೌಂಟ್​​ಡೌನ್​ ಆರಂಭವಾಗಿದೆ. ಆಟಗಾರರ ರಿಟೈನ್​, ರಿಲೀಸ್​, ಟ್ರೇಡಿಂಗ್​ ಟಾಕ್​ಗಳು ಐಪಿಎಲ್​ ವಲಯದಲ್ಲಿ ಜೋರಾಗಿ ನಡೀತಿವೆ. 5 ಬಾರಿ ಕಪ್​ ಗೆದ್ದ ಚಾಂಪಿಯನ್​ ಟೀಮ್​ ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿಯಲ್ಲಂತೂ ಭರದ ಚಟುವಟಿಕೆಗಳು ನಡೀತಿವೆ.
/filters:format(webp)/newsfirstlive-kannada/media/media_files/2025/10/11/dhoni_csk_auction-2025-10-11-09-28-03.jpg)
ಸೀಸನ್-19ರ ಐಪಿಎಲ್​ ಆಡಲಿದ್ದಾರೆ​ ತಲಾ ಧೋನಿ.!
ಐಪಿಎಲ್​ನ ರಿಟೈನ್​, ರಿಲೀಸ್​​ ಪ್ರಕ್ರಿಯೆಗಳ ನಡುವೆ ಸಿಎಸ್​ಕೆ ಫ್ರಾಂಚೈಸಿ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದೆ. ಫ್ಯಾನ್ಸ್​ ವಲಯದ ಮಿಲಿಯನ್​ ಡಾಲರ್​ ಪ್ರಶ್ನೆಗೆ ಕ್ಲೀಯರ್​ ಕಟ್​​ ಆನ್ಸರ್​ ಸಿಕ್ಕಿದೆ. ಧೋನಿ ಐಪಿಎಲ್​ ನೆಕ್ಸ್ಟ್​ ಸೀಸನ್​ ಐಪಿಎಲ್​ ಆಡ್ತಾರಾ.? ಇಲ್ವಾ.? ಅನ್ನೋ ಗೊಂದಲವನ್ನ ಸಿಎಸ್​ಕೆ ಸಿಇಒ ಕಾಶಿ ವಿಶ್ವನಾಥನ್​ ಬಗೆಹರಿಸಿದ್ದಾರೆ. ಧೋನಿ ಮುಂದಿನ ಐಪಿಎಲ್ ಆಡೋದು ಕನ್​ಫರ್ಮ್​ ಎಂಬ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ​ನೆಕ್ಸ್ಟ್​ ಸೀಸನ್​ ಆಡೋಕೆ ನಾನು ರೆಡಿ ಎಂದು ಧೋನಿ ನಮಗೆ ತಿಳಿಸಿದ್ದಾರೆ ಎಂದು ಕಾಶಿ ವಿಶ್ವನಾಥನ್​ ಹೇಳಿದ್ದಾರೆ.
ಸಂಜು ಸ್ಯಾಮ್ಸನ್​ ಮೇಲೆ ಮತ್ತೆ ಚೆನ್ನೈಗೆ ಆಸಕ್ತಿ.!
2025ರ ಐಪಿಎಲ್​ ಅಂತ್ಯ ಬೆನ್ನಲ್ಲೇ ರಾಜಸ್ಥಾನ್​ ರಾಯಲ್ಸ್​ನಿಂದ ಸಂಜು ಸ್ಯಾಮ್ಸನ್​ ಹೊರಬರ್ತಾರೆ ಅನ್ನೋ ಸುದ್ದಿ ಬಂದಾಗ ಮೊದಲು ಅಪ್ರೋಚ್​ ಮಾಡಿದ್ದೇ ಚೆನ್ನೈ ಸೂಪರ್​ ಕಿಂಗ್ಸ್​. ಸಿಎಸ್​ಕೆ ಫ್ರಾಂಚೈಸಿ ಸಂಜು ಸ್ಯಾಮ್ಸನ್​ ಟ್ರೇಡಿಂಗ್​ಗೆ ಹಲವು ಆಫರ್​ಗಳನ್ನ ರಾಜಸ್ಥಾನ್​ ರಾಯಲ್ಸ್​ ಫ್ರಾಂಚೈಸಿಗೆ ಕೊಟ್ಟಿತ್ತು. ಆದ್ರೆ, ಡೀಲ್​ ಕುದಿರಿರಲಿಲ್ಲ. ಇದೀಗ ಮತ್ತೆ ಸಂಜುನ ಕರೆ ತರೋ ಪ್ರಯತ್ನ ಸಿಎಸ್​ಕೆ ಫ್ರಾಂಚೈಸಿಯಲ್ಲಿ ಆರಂಭವಾಗಿದೆ. ಒಬ್ಬ ಬಿಗ್​ ಪ್ಲೇಯರ್​​ನ ರಾಜಸ್ಥಾನ್​ ರಾಯಲ್ಸ್​ ತಂಡಕ್ಕೆ ಬಿಟ್ಟು ಕೊಡೋ ಆಫರ್​ ನೀಡಿದೆ ಅನ್ನೋದು ಲೇಟೆಸ್ಟ್​ ಸುದ್ದಿಯಾಗಿದೆ.
ರಾಜಸ್ಥಾನಕ್ಕೆ ಟ್ರೇಡ್​ ಆಗೋ ಪ್ಲೇಯರ್​​ ಯಾರು.?
ಸಂಜು ಕರೆ ತರೋಕೆ ರೆಡಿಯಾಗಿರೋ ಸೂಪರ್​ ಕಿಂಗ್ಸ್​ ಫ್ರಾಂಚೈಸಿ ಯಾರನ್ನ ಟ್ರೇಡ್​​ ಮಾಡುತ್ತೆ ಅನ್ನೋದು ಸದ್ಯ ಕುತೂಹಲ ಹುಟ್ಟಿಸಿದೆ. ರವೀಂದ್ರ ಜಡೇಜಾ, ಶಿವಂ ದುಬೆಯ ಹೆಸರು ಸದ್ಯ ಓಡಾಡ್ತಿದೆ. ಆದ್ರೆ, ಬಹುಕಾಲದಿಂದ ಸಿಎಸ್​ಕೆ ಜೊತೆಗಿರೋ ರವೀಂದ್ರ ಜಡೇಜಾನ ಬಿಟ್ಟು ಕೊಡಲು ಫ್ರಾಂಚೈಸಿಯಲ್ಲಿ ಒಲವಿಲ್ಲ. ಬಹುತೇಕ ಶಿವಂ ದುಬೆಯೇ ಆರ್​ಆರ್​ಗೆ ಟ್ರೇಡ್​ ಆಗ್ತಾರೆ ಅನ್ನೋ ಬಲ್ಲ ಮೂಲಗಳ ಮಾಹಿತಿಯಾಗಿದೆ.
CSKನಲ್ಲಿ ಸಂಜು ಸ್ಯಾಮ್ಸನ್​ ರೋಲ್​ ಏನು.?
ಸಂಜು ಸ್ಯಾಮ್ಸನ್​ ಟ್ರೇಡಿಂಗ್​ ವಿಚಾರದಲ್ಲಿ ಹುಟ್ಟಿರೋ ಮೊದಲ ಪ್ರಶ್ನೆಯೇ ಇದು. ಒಂದು ವೇಳೆ ರಾಜಸ್ಥಾನ ತೊರೆದು ಚೆನ್ನೈಗೆ ಬಂದ್ರೆ ಸಂಜು ಸ್ಯಾಮ್ಸನ್​ ರೋಲ್​ ಏನಿರುತ್ತೆ ಅನ್ನೋದು ಕುತೂಹಲ ಮೂಡಿಸಿದೆ. ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿ ನಾಯಕತ್ವ ಖಾಲಿ ಇಲ್ಲ. ಋತುರಾಜ್​ ಗಾಯಕ್ವಾಡ್​​ನ ಪ್ಯೂಚರ್​ ಕ್ಯಾಪ್ಟನ್​ ಎಂದಿರೋ ಫ್ರಾಂಚೈಸಿ ಬದಲಾವಣೆಗೆ ಕೈ ಹಾಕಲ್ಲ. ಹೀಗಾಗಿ ಚೆನ್ನೈಗೆ ಬಂದ್ರೆ ಸಂಜುಗೆ ನಾಯಕತ್ವವಂತೂ ಸಿಗಲ್ಲ. ಸಾಮಾನ್ಯ ಆಟಗಾರನಾಗಿ ತಂಡದಲ್ಲಿ ಇರಲಿದ್ದಾರಷ್ಟೇ.
ಇದನ್ನೂ ಓದಿ: BBK12; ರಿಷಾ ದೊಡ್ಮನೆಯಿಂದ ಔಟ್​.. ಈ ನಿರ್ಧಾರ ಯಾರ ಕೈಯಲ್ಲಿದೆ ಗೊತ್ತಾ?
/filters:format(webp)/newsfirstlive-kannada/media/media_files/2025/08/09/sanju_samson-1-2025-08-09-14-46-24.jpg)
‘ಇಂಪ್ಯಾಕ್ಟ್​ ಪ್ಲೇಯರ್​​’ ಆಗಿ ಆಡ್ತಾರಾ ಧೋನಿ.?
ಸಂಜು ಸ್ಯಾಮ್ಸನ್​ ಕರೆ ತರಲು ಚೆನ್ನೈ ಶತಪ್ರಯತ್ನ ನಡೆಸ್ತಿರೋದು ಹೊಸ ಚರ್ಚೆಗೂ ದಾರಿ ಮಾಡಿಕೊಟ್ಟಿದೆ. ಮೊಣಕಾಲಿನ ಸರ್ಜರಿಗೆ ಒಳಗಾಗಿರೋ ಧೋನಿ ಮೊದಲಿನಷ್ಟು ಫಿಟ್​ ಇಲ್ಲ. 20 ಓವರ್​ಗಳ ಸುದೀರ್ಘ ಕಾಲ ಕೀಪಿಂಗ್​ ಮಾಡೋದು 44 ವರ್ಷದ ಧೋನಿಗೆ ಸವಾಲಾಗಲಿದೆ. ಆದ್ರೂ, ಧೋನಿ ಐಪಿಎಲ್ ಆಡ್ತಿನಿ ಎಂದಿದ್ದಾರೆ. ಇನ್ನೊಂದೆಡೆ ಫ್ರಾಂಚೈಸಿ ಸಂಜು ಟ್ರೇಡಿಂಗ್​ಗೆ ಶತಪ್ರಯತ್ನ ನಡೆಸ್ತಿದೆ. ಇದನ್ನ ನೋಡಿದ್ರೆ ಧೋನಿ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಬ್ಯಾಟಿಂಗ್​ಗೆ ಮಾತ್ರ ಸೀಮಿತಾವಾಗೋ ಸಾಧ್ಯತೆಯಿದೆ. ಎಲ್ಲಾ ಅಂದುಕೊಂಡತೆ ಆದ್ರೆ, ಧೋನಿ ಬದಲು ಸಂಜು ಕೀಪಿಂಗ್​ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಥಿಂಕ್​​ ಟ್ಯಾಂಕ್​ ಜೊತೆಗೆ ಹೈವೋಲ್ಟೆಜ್​ ಮೀಟಿಂಗ್​.!
ಐಪಿಎಲ್ ರಿಟೈನ್ಶನ್​​ಗೆ ನವೆಂಬರ್​ 15 ಲಾಸ್ಟ್​ ಡೇಟ್​. ಇದಕ್ಕೂ ಮುನ್ನ ಹೈವೋಲ್ಟೆಜ್​ ಮೀಟಿಂಗ್​ಗೆ ವೇದಿಕೆ ಸಜ್ಜಾಗಿದೆ. ನಾಳೆ ಅಥವಾ ನಾಡಿದ್ದು CSK ಸಿಇಒ ಕಾಸಿ ವಿಶ್ವನಾಥನ್​, ಹೆಡ್​ ಕೋಚ್​​ ಸ್ಟೀಫನ್​ ಫ್ಲೆಮಿಂಗ್​, ನಾಯಕ ಋತುರಾಜ್​ ಗಾಯಕ್ವಾಡ್​ ಹಾಗೂ ಧೋನಿ ಸಭೆ ಸೇರಲಿದ್ದಾರೆ. ಟ್ರೇಡಿಂಗ್​, ರಿಟೈನ್​, ರಿಲೀಸ್​ನ ಚರ್ಚೆಯೇ ಈ ಸಭೆಯ ಅಂಜೆಂಡಾ. ಈ ಹೈವೋಲ್ಟೆಜ್ ಸಭೆಯ​ ಅಂತ್ಯದ ಬಳಿಕ ಒಂದು ಕ್ಲೀಯರ್​ ಪಿಚ್ಚರ್​ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us