/newsfirstlive-kannada/media/media_files/2025/11/03/gilli-and-risha-2025-11-03-16-02-59.jpg)
ಗಿಲ್ಲಿ ಹಾಗೂ ರಿಷಾ ನಡುವೆ ಬಕೆಟ್ ನೀರಿನ ವಿಚಾರಕ್ಕೆ ಜಗಳ ನಡೆದದ್ದು, ರಿಷಾ ಕೋಪದಲ್ಲಿ ಗಿಲ್ಲಿಗೆ ಹೊಡೆದದ್ದು ಎಲ್ಲವನ್ನೂ ವೀಕ್ಷಕರು ನೋಡಿದ್ದಾರೆ. ಹೀಗೆ ಬಿಗ್‌ಬಾಸ್ ಮನೆಯಲ್ಲಿ ಇನ್ನೊಬ್ಬರ ಮೇಲೆ ಕೈ ಎತ್ತೋದು ಸರಿನಾ ಅನ್ನೋ ಪ್ರಶ್ನೆ ಅವರಲ್ಲೂ ಮೂಡಿತ್ತು ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.
ರಿಷಾ ಎಲ್ಲರ ಜೊತೆಗೂ ಜಗಳ ಆಡಿಕೊಳ್ತಾಳೆ, ಅವಳು ಜಗಳ ಆಡೋದರಲ್ಲಿ ಅಶ್ವಿನಿ ಗೌಡಗೆ ಟಕ್ಕರ್ ನೀಡ್ತಿದ್ದಾಳೆ ಅನ್ನೋದು ಎಲ್ಲರ ಅಭಿಪ್ರಾಯ. ಆದ್ರೆ ಮೊನ್ನೆ ಆದ ಒಂದು ಜಗಳ ರಿಷಾ ಅಶ್ವಿನಿ ಗೌಡಗಿಂತಲೂ ಮುಂದೆ ಹೋಗಿದ್ದಾಳೆ ಅಂತನಿಸೋಕೆ ಕಾರಣವಾಗಿತ್ತು.
ಗಿಲ್ಲಿ ರಿಷಾಳ ಬಟ್ಟೆಗಳನ್ನು ಬಾತ್‌ರೂಂನ ಹೊರಕ್ಕೆ ತಂದು ಹಾಕಿದ ಅನ್ನೋ ಕಾರಣಕ್ಕೆ ಅವನ ಮೇಲೆ ಕೈ ಎತ್ತಿದರು. ಇದೀಗ ಬಾದ್‌ಷಾ ಸುದೀಪ್‌ರ ವಾರದ ಪಂಚಾಯ್ತಿಯಲ್ಲಿ ಚರ್ಚೆಗೆ ಬಂದಿದ್ದು, ಸುದೀಪ್ ಏನು ಹೇಳಿದ್ರು? ರಿಷಾ ಮಾಡಿದ್ದು ಸರಿನಾ ತಪ್ಪಾ?.
ಇದನ್ನೂ ಓದಿ: ಮತ್ತೊಂದು ಹಂತ ತಲುಪಿದ ರನ್ಯಾ ರಾವ್ ಕೇಸ್​.. ಚಿನ್ನದ ಚೆನ್ನಿ ಮಾಡಿದ್ದೇನು..?
/filters:format(webp)/newsfirstlive-kannada/media/media_files/2025/11/03/bbk12_gilli-2025-11-03-12-11-00.jpg)
ಸುದೀಪ್ ವಾರದ ಪಂಚಾಯ್ತಿಯಲ್ಲಿ ರಿಷಾ ಗಿಲ್ಲಿಗೆ ಹೊಡೆದ ವಿಚಾರವನ್ನು ಚರ್ಚೆಗೆ ತೆಗೆದಿದ್ದು, ಬಿಗ್‌ಬಾಸ್ ಮನೆಯಲ್ಲಿ ಯಾರ ಮೇಲೂ ಕೈ ಎತ್ತೋದು ಸರಿ ಇಲ್ಲ ಎಂದು ಹೇಳಿದ್ದಾರೆ. ಮಾತ್ರವಲ್ಲ ಒಂದೊಮ್ಮೆ ಒಬ್ಬ ಹುಡುಗ ಹೀಗೆ ಹುಡುಗಿ ಮೇಲೆ ಕೈ ಎತ್ತಿದ್ರೆ ಏನಾಗುತ್ತಿತ್ತು. ಹಾಗಾಗಿ ಈ ಘಟನೆಯನ್ನು ಹಾಗೆ ಬಿಟ್ಟು ಬಿಡೋಕೆ ಆಗಲ್ಲ ಎಂದು ಹೇಳಿದ್ದು, ಇದಕ್ಕೇನು ಮಾಡಬೇಕು ಅನ್ನೋ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಸ್ಪರ್ಧಿಗಳಿಗೆ ನೀಡಿದ್ದಾರೆ.
ಇದಕ್ಕಾಗಿಯೇ ಟಾಸ್ಕ್‌ವೊಂದನ್ನು ನೀಡಿದ್ದು, ಎಲ್ಲ ಸ್ಪರ್ಧಿಗಳ ಎದುರಲ್ಲಿ ಹಳದಿ ಹಾಗೂ ಕೆಂಪು ಬಣ್ಣದ ಕಾರ್ಡ್ ಇಟ್ಟಿದ್ದಾರೆ. ಇದರಲ್ಲಿ ಹಳದಿ ಬಣ್ಣದ ಕಾರ್ಡ್ ಆಯ್ದುಕೊಂಡರೆ ರಿಷಾಗೆ ವಾರ್ನಿಂಗ್ ಕೊಟ್ಟು ಬಿಡುವುದು. ಅದೇ ಕೆಂಪು ಬಣ್ಣದ ಕಾರ್ಡ್ ಆಯ್ಕೆ ಮಾಡಿದರೆ ಮನೆಯಿಂದ ಹೊರಕ್ಕೆ ಕಳಿಸೋದು ಅಂತ ನಿರ್ಧರಿಸಲಾಗಿದೆ. ಇದೀಗ ರಿಷಾ ಬಿಗ್‌ಬಾಸ್ ಮನೆಯಲ್ಲಿ ಆಟ ಮುಂದುವರಿಸುತ್ತಾಳಾ, ಇಲ್ವಾ ಅನ್ನೋದು ಉಳಿದವರ ಕೈಯಲ್ಲಿದ್ದು, ಸ್ಪರ್ಧಿಗಳು ರಿಷಾಳನ್ನು ಕ್ಷಮಿಸ್ತಾರಾ ಅಥವಾ ಅವಳಂತೆಯೇ ಉಳಿದವರ ಬಗ್ಗೆ ಅವರ ಭಾವನೆಗಳ ಬಗ್ಗೆ ಚಿಂತೆಯೇ ಮಾಡದೆ ನಿರ್ಧಾರ ತಗೊಳ್ತರಾ?.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us