/newsfirstlive-kannada/media/post_attachments/wp-content/uploads/2025/03/Ranya-roa-Gold-Case.jpg)
ಪರಪ್ಪನ ಅಗ್ರಹಾರ ಪಂಜರದಲ್ಲಿರುವ ಅರಗಿಣಿ, ಚಿನ್ನದ ಚೋರಿ ಸ್ಯಾಂಡಲ್​ವುಡ್​ ನಟಿ ರನ್ಯಾ ರಾವ್ ವಿರುದ್ಧ ​ದೋಷಾರೋಪ ಪಟ್ಟಿ ಸಲ್ಲಿಕೆಗೆ ತಯಾರಿ ಬರದಿಂದ ಸಾಗಿದೆ. ಈ ನಡುವೆ ಈ ಚಿನ್ನದ ಕೋಳಿ, ರಾಜಕಾರಣಿಗಳು ಹಾಗೂ ಮಲತಂದೆ ಹೆಸರನ್ನ ಯಾರ ರೀತಿ ದುರ್ಬಳಕೆ ಮಾಡಿಕೊಂಡಿದ್ದಾಳೆ ಅನ್ನೋ ಶಾಕಿಂಗ್​ ಸಮಾಚಾರ ರಿವೀಲ್​ ಆಗಿದ್ದು, ಈ ಗೋಲ್ಡ್​​ ಸ್ಮಗ್ಲಿಂಗ್​ ಕೇಸ್​ಗೆ ಮತ್ತೊಂದು ಆಯಾಮ ನೀಡಿದೆ.
ರನ್ಯಾ ರಾವ್.. ಈ ಐಸ್ ಪೈಸ್ ರಾಣಿಯ ಚಿನ್ನದ ಪುರಾಣ ಇಡೀ ರಾಜ್ಯಕ್ಕೆ ಗೊತ್ತು ಬಿಡಿ. ಸೊಂಟದಲ್ಲಿ ಗೋಲ್ಡ್​ ಇಟ್ಕೊಂಡು ಹೈ ಹೀಲ್ಸ್​ ಹಾಕ್ಕೊಂಡು ಕ್ಯಾಟ್ ವಾಕ್ ಮಾಡ್ತಿದ್ದ ಚೆಲುವೆಯನ್ನ ಪೊಲೀಸರು ಏರ್​ಪೋರ್ಟ್​ನಲ್ಲೇ ಲಾಕ್ ಮಾಡಿ ಜೈಲಿಗೆ ಟಿಕೆಟ್ ಬುಕ್ ಮಾಡಿದ್ರು. ಆದಗಲೇ ಚಿನ್ನದ ಕೋಳಿ ಜೈಲು ಸೇರಿ 6 ತಿಂಗಳಾಯ್ತು ಜೈಲಿನ ಹಕ್ಕಿಯಾಗಿ. ಇದೀಗ ಪೊಲೀಸರು ಈ ಗೋಲ್ಡ್ ಸ್ಮಗ್ಲಿಂಗ್ ಕೇಸ್​ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಕೆಗೆ ತಯಾರಿ ನಡೆಸಿದ್ದಾರೆ. ಈ ವೇಳೆ ಮತ್ತಷ್ಟು ಶಾಕಿಂಗ್​ ಸಮಾಚಾರ ರಿವೀಲ್​ ಆಗಿದೆ.
ಇದನ್ನೂ ಓದಿ:ಟೀಂ ಇಂಡಿಯಾದ ಟಿ-20 ತಂಡದಿಂದ ಸಂಜು ಸ್ಯಾಮ್ಸನ್ ಹೊರಕ್ಕೆ..?
/filters:format(webp)/newsfirstlive-kannada/media/media_files/2025/09/02/ranya-rao-2025-09-02-17-10-46.jpg)
ಚಿನ್ನದ ಚೆನ್ನಿ
ಮಾಣಿಕ್ಯನ ಬೆಡಗಿ.. ಗೋಲ್ಡ್ ಸ್ಮಗ್ಲಿಂಗ್ ಕೇಸ್​ ಅಂತಿಮ ಹಂತ ತಲುಪಿದೆ. ಕಳೆದ 6 ತಿಂಗಳಿಂದ ತನಿಖೆ ನಡೆಸುತ್ತಿರೋ DRI ತನಿಖಾ ಸಂಸ್ಥೆ, ಸದ್ಯ ಪ್ರಕರಣ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಕೆಗೆ ತಯಾರಿ ನಡೆಸಿದೆ. 123 ಕೋಟಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿರೋದು ಪ್ರಕರಣದ ತನಿಖೆಯ ವೇಳೆ ಬೆಳಕಿಗೆ ಬಂದಿದ್ದು, ಈ ಪೈಕಿ ರನ್ಯಾ ರಾವ್ 102 ಕೋಟಿ ಮೌಲ್ಯದ ಚಿನ್ನವನ್ನ ಅಕ್ರಮ ಮಾಡಿದ್ದಾರೆ ಅನ್ನೋದು ಸ್ಪಷ್ಟವಾಗಿ ತನಿಖೆಯಲ್ಲಿ ಅನಾವರಣವಾಗಿದೆ.
ಜೊತೆಗೆ ಈ ಚಿನ್ನದ ಕೋಳಿಯ ಕತೆಯಲ್ಲಿ ರನ್ಯಾ ರಾವ್ ಮಲತಂದೆ ರಾಮಚಂದ್ರರಾವ್ ಅವರ ಕಾರು ದುರ್ಬಳಕೆ ಮಾಡಿಕೊಂಡಿರುವುದು ಹಾಗೇ ಹಲವು ರಾಜಕಾರಣಿಗಳ ಹೆಸರು ದುರ್ಬಳಕೆ ಮಾಡಿಕೊಂಡಿರುವ ಮಾಹಿತಿಯೂ ತನಿಖೆಯಲ್ಲಿ ಬಹಿರಂಗವಾಗಿದೆ.
ದುಬೈನಿಂದ ಭಾರತಕ್ಕೆ ಚಿನ್ನ ಕಳ್ಳ ಸಾಗಣೆ ಹವಾಲ ದಂಧೆ ಹಾಗೂ ಇನ್ನೀತರ ವ್ಯವಹಾರ ಬಯಲಾಗಿದೆ. ಈ ಹಿನ್ನಲೆ, ಈಗಾಗಲೇ DRI 5 ಜನ ಆರೋಪಿಗಳಿಗೂ ಶೋಕಾಸ್ ನೋಟಿಸ್ ನೀಡಿದೆ. ಈಗ ಪ್ರಕರಣದ ಕೊನೆಯ ಹಂತಕ್ಕೆ ತಲುಪಿದ್ದು, ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಿದ್ದತೆ ಭರದಿಂದ ಸಾಗಿದೆ. ಅದೇನೇ ಹೇಳಿ, ಅಡ್ಡದಾರಿಯಲ್ಲಿ ಅರಮನೆ ನೊಡೋಕೋದ ಸುಂದರಿ ಸ್ಥಿತಿ ಹೀಗಾಗಿದ್ದು, ಮಾತ್ರ ವಿಪರ್ಯಾಸ.
ಇದನ್ನೂ ಓದಿ: ‘ಯುದ್ಧ ಭುಗಿಲೆದ್ದರೆ..’ ಪಾಕಿಸ್ತಾನಕ್ಕೆ ತಾಲಿಬಾನ್ ನೇರ ಎಚ್ಚರಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us