/newsfirstlive-kannada/media/media_files/2025/11/08/taliban-2025-11-08-20-40-11.jpg)
ಅಫ್ಘಾನ್ ಸರ್ಕಾರದ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ತಾಲಿಬಾನ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ನವೆಂಬರ್ 6 ಮತ್ತು 7 ರಂದು ಇಸ್ತಾಂಬುಲ್‌ನಲ್ಲಿ ಎರಡು ದೇಶಗಳ ಮಧ್ಯೆ ಶಾಂತಿ ಮಾತುಕತೆ ನಡೆಯಿತು. ಈ ಅವಧಿಯಲ್ಲಿ ಪಾಕಿಸ್ತಾನದಲ್ಲಿ ದಾಳಿ ನಡೆಸಲು ಅಫ್ಘಾನ್ ಪ್ರದೇಶವನ್ನು ಬಳಸುತ್ತಿರುವ ತೆಹ್ರಿಕ್-ಎ-ತಾಲಿಬಾನ್ (ಟಿಟಿಪಿ) ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕಾಬೂಲ್ ಯಾವುದೇ ಲಿಖಿತ ಭರವಸೆ ನೀಡಿಲ್ಲ.
ಮಾತುಕತೆ ವಿಫಲವಾದ ನಂತರ ಅಫ್ಘಾನ್ ಗಡಿ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ನೂರುಲ್ಲಾ ನೂರಿ, ಪಾಕಿಸ್ತಾನಿ ಅಧಿಕಾರಿಗಳಿಗೆ ಅಫ್ಘಾನ್ ಜನರ ತಾಳ್ಮೆ ಪರೀಕ್ಷಿಸಬೇಡಿ. ನಾವು ಯುದ್ಧಕ್ಕೆ ರೆಡಿ. ಒಂದು ವೇಳೆ ಯುದ್ಧ ಭುಗಿಲೆದ್ದರೆ, ಅಫ್ಘಾನರು, ಯುವಕರು ಮತ್ತು ಹಿರಿಯರು ಎಲ್ಲರೂ ಹೋರಾಟಕ್ಕೆ ಬರುತ್ತಾರೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ:ಟೀಂ ಇಂಡಿಯಾದ ಟಿ-20 ತಂಡದಿಂದ ಸಂಜು ಸ್ಯಾಮ್ಸನ್ ಹೊರಕ್ಕೆ..?
ಪಾಕಿಸ್ತಾನ ಸರ್ಕಾರ ಮತ್ತು ಟಿಟಿಪಿ ನಡುವೆ ನೇರ ಸಂವಾದಕ್ಕೆ ತಾಲಿಬಾನ್ ವಾತಾವರಣ ಸೃಷ್ಟಿಸಿದೆ. ಇದು ದೀರ್ಘಕಾಲೀನ ಸಮನ್ವಯ ಮತ್ತು ಪ್ರಗತಿಗೆ ಕಾರಣವಾಯಿತು. ಪಾಕಿಸ್ತಾನಿ ಸೇನೆಯೊಳಗಿನ ಕೆಲವು ಬಣಗಳು ಇದಕ್ಕೆ ಅಡ್ಡಿಯಾಗಿವೆ ಎಂದು ಕಿಡಿಕಾರಿದ್ದಾರೆ.
ಪಾಕಿಸ್ತಾನ ಸೇನೆಯಲ್ಲಿ ಅಸಮಾಧಾನ
ಪಾಕಿಸ್ತಾನದ ಕೆಲವು ಮಿಲಿಟರಿ ಪಡೆಗಳು ಅಫ್ಘಾನಿಸ್ತಾನದಲ್ಲಿ ನಡೆದ ಮಾತುಕತೆ ಬಗ್ಗೆ ಅತೃಪ್ತವಾಗಿವೆ ಎಂದು ವರದಿಯಾಗಿದೆ. ಈ ಗುಂಪುಗಳು ಯಾವಾಗಲೂ ಅಫ್ಘಾನಿಸ್ತಾನದ ಅಭದ್ರತೆ, ಆಕ್ರಮಣ, ವಲಸೆ ಮತ್ತು ಬಿಕ್ಕಟ್ಟುಗಳಿಂದ ಲಾಭ ಪಡೆದಿವೆ ಎಂದು ಅಫ್ಘಾನ್ ಹೇಳಿಕೊಂಡಿದೆ. 2002ರಲ್ಲಿ ಟಿಟಿಪಿ ಹೊರಹೊಮ್ಮಲು ಪಾಕಿಸ್ತಾನದ ಮಿಲಿಟರಿ ನೀತಿಗಳ ವೈಫಲ್ಯವೇ ಕಾರಣ. ಆ ಸಮಯದಲ್ಲಿ, ಪಾಕಿಸ್ತಾನವು ಅಮೆರಿಕದೊಂದಿಗೆ ಸಮನ್ವಯ ಸಾಧಿಸಿತ್ತು.
ಇದನ್ನೂ ಓದಿ: ಕಬ್ಬಿಗೆ 3,300 ರೂ ಘೋಷಿಸಿದ್ರೂ ರೈತರು ಧರಣಿ ನಿಲ್ಲಿಸಿಲ್ಲ ಯಾಕೆ? ಚುನಪ್ಪ ಪೂಜಾರಿ ಕೊಟ್ಟ ಎಚ್ಚರಿಕೆ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us