/newsfirstlive-kannada/media/media_files/2025/09/19/sanju_samson_new-1-2025-09-19-21-42-26.jpg)
ಸಂಜು ಸ್ಯಾಮ್ಸನ್ (Sanju Samson) ಅವರನ್ನು ಟಿ20 ತಂಡದಿಂದ ಕೈಬಿಡಲಾಗುತ್ತದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಮಾಜಿ ಕ್ರಿಕೆಟಿಗ ಕೈಫ್ ಭವಿಷ್ಯದಂತೆ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ (ನಾಲ್ಕನೇ ಮತ್ತು ಐದನೇ ಟಿ20) ಸಂಜುಗೆ ಅವಕಾಶ ನೀಡಿಲ್ಲ.
ಮೂರನೇ ಟಿ20ಯಲ್ಲಿ ಕೇವಲ 2 ರನ್‌ಗಳಿಗೆ ಔಟಾದ ನಂತರ ಅವರನ್ನು ತಂಡದಿಂದ ಹೊರಗಿಡುವ ವದಂತಿಗಳು ಹೆಚ್ಚುತ್ತಿವೆ. ಟೀಮ್ ಇಂಡಿಯಾದ ನಾಯಕ ಸೂರ್ಯ ಬ್ಯಾಟಿಂಗ್ ಲೈನ್‌ಅಪ್ ಕುರಿತು ಮಾಡಿದ ಪ್ರಮುಖ ಹೇಳಿಕೆಗಳು ಕೂಡ ಚರ್ಚೆಗೆ ಕಾರಣವಾಗಿದೆ.
ಕೈಫ್ ಹೇಳಿದ್ದೇನು?
ಆಸ್ಟ್ರೇಲಿಯಾ ವಿರುದ್ಧದ ಕೊನೆಯ 2 ಪಂದ್ಯಗಳಿಂದ ಸಂಜು ಅವರನ್ನು ಹೊರಗಿಡಲಾಯಿತು. ಮೆಲ್ಬೋರ್ನ್‌ನಲ್ಲಿ ನಡೆದ 3ನೇ ಪಂದ್ಯದಲ್ಲಿ ಸಂಜುಗೆ 3ನೇ ಸ್ಥಾನದಲ್ಲಿ ಆಡುವ ಅವಕಾಶ ಸಿಕ್ಕಿತು. ಆದರೆ ಅವರು ಕೇವಲ 2 ರನ್‌ಗಳಿಗೆ ಔಟಾದರು. ಇದೇ ವೈಫಲ್ಯ ಸಂಜುಗೆ ಮುಳುವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಟಿ-20 ಸರಣಿ ಗೆದ್ದ ಭಾರತ! ಸಂತೋಷದ ಕ್ಷಣದಲ್ಲಿ ಗಂಭೀರ್, ಯಾಕೆಂದು ತಿಳಿಯಿರಿ..!
ಸಂಜು ಆರಂಭಿಕ ಆಟಗಾರನಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಆರಂಭಿಕರಾಗಿ ಆಡಿದ ಅವರು 12 ಇನ್ನಿಂಗ್ಸ್‌ಗಳಲ್ಲಿ 3 ಶತಕಗಳು ಸೇರಿದಂತೆ 417 ರನ್ ಗಳಿಸಿದ್ದರು. ಗಿಲ್ ತಂಡಕ್ಕೆ ಮರಳಿದಾಗಿನಿಂದ ಅವರ ಬ್ಯಾಟಿಂಗ್ ಸ್ಥಾನ ಆಗಾಗ ಬದಲಾಗುತ್ತಿದೆ. ಏಷ್ಯಾ ಕಪ್‌ನಲ್ಲಿ ಓಮನ್ ವಿರುದ್ಧ 3ನೇ ಸ್ಥಾನದಲ್ಲಿ 56 ರನ್ ಗಳಿಸಿದರೂ ಅಂದಿನಿಂದ ಅವರ ಫಾರ್ಮ್ ಉತ್ತಮವಾಗಿಲ್ಲ.
ಸೂರ್ಯ ಏನಂದ್ರು?
ಬ್ರಿಸ್ಬೇನ್‌ನಲ್ಲಿ ನಡೆದ 5ನೇ ಟಿ20 ಪಂದ್ಯದ ಟಾಸ್ ಸಮಯದಲ್ಲಿ ನಾಯಕ ಸೂರ್ಯ ಹೇಳಿದ್ದು ಏನೆಂದರೆ, ‘ಈ ಪಿಚ್ 200 ರನ್‌ಗಳಿಗೆ ಸೂಕ್ತವಲ್ಲ ಅನ್ನೋದನ್ನ ನಾವು ಅರ್ಥಮಾಡಿಕೊಳ್ಳಬೇಕು. ಕಳೆದ ಪಂದ್ಯದಲ್ಲಿ ನಮ್ಮ ಪ್ರದರ್ಶನ ಉತ್ತಮವಾಗಿತ್ತು. ದ್ವಿಪಕ್ಷೀಯ ಸರಣಿಯನ್ನು ಗೆಲ್ಲೋದು ಯಾವಾಗಲೂ ಒಳ್ಳೆಯ ಭಾವನೆ. ನಾವು ಯಾವಾಗಲೂ ಉತ್ತಮ ಸಂಯೋಜನೆಯನ್ನು ಮುಂದುವರಿಸಲು ಬಯಸುತ್ತೇವೆ. ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ ಎಲ್ಲಾ ಆಟಗಾರರು ಬ್ಯಾಟಿಂಗ್ ಸ್ಥಾನಗಳಲ್ಲಿ ನಮ್ಯತೆಯನ್ನು ತೋರಿಸಬೇಕಾದ ಸ್ವರೂಪವಾಗಿದೆ ಎಂದಿದ್ದಾರೆ. ಸೂರ್ಯ ಅವರ ಈ ಹೇಳಿಕೆ ಸಂಜು ಸ್ಯಾಮ್ಸನ್​​ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಂತೆ ಆಗಿದೆ ಎಂದು ವಿಶ್ಲೇಷಕರು ಅರ್ಥೈಸಿಕೊಳ್ತಿದ್ದಾರೆ.
ಇದನ್ನೂ ಓದಿ: RCB ಟೀಮ್ ಮಾರಾಟದ ಹಿಂದೆ ಸ್ಫೋಟಕ ಸತ್ಯ.. ಕಿಂಗ್ ಕೊಹ್ಲಿನೇ ಕಾರಣನಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us