Advertisment

RCB ಟೀಮ್ ಮಾರಾಟದ ಹಿಂದೆ ಸ್ಫೋಟಕ ಸತ್ಯ.. ಕಿಂಗ್ ಕೊಹ್ಲಿನೇ ಕಾರಣನಾ..?

17 ವರ್ಷಗಳ ನಂತರ ಆರ್​ಸಿಬಿ ಟ್ರೋಫಿ ಗೆದ್ದಿತು. ಆದ್ರೆ ಯಾವಾಗ ಕಪ್ ಗೆಲ್ತೋ, ಫ್ರಾಂಚೈಸಿ ಮಾಲೀಕರು ಬ್ಯೂಸಿನೆಸ್ ಗೇಮ್ ಶುರುಮಾಡಿದ್ರು. ಇಷ್ಟು ದಿನ ವಿರಾಟ್ ಹೆಸರಲ್ಲೇ ಆರ್​ಸಿಬಿ ತಂಡದ ಬ್ರ್ಯಾಂಡ್ ಬಿಲ್ಡ್ ಮಾಡಿದ ಡಿಯಾಜಿಯೊ ಇದೀಗ..

author-image
Bhimappa
Virat_kohli_RCB_team_sale
Advertisment

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರಾಟಕ್ಕೆ ಇರೋದು ಕನ್ಫರ್ಮ್ ಆಗಿದೆ. ಆದ್ರೆ ಆರ್​ಸಿಬಿ ಮಾರಾಟಕ್ಕೆ ಕಾರಣ ಏನು ಅನ್ನೋದು, ಯಾರಿಗೂ ಗೊತ್ತಿಲ್ಲ. 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿ ಗೆದ್ದ ಆರ್​ಸಿಬಿಯನ್ನ, ಡಿಯಾಜಿಯೊ ಒಡೆತನದ ಸಂಸ್ಥೆ ಕೈಬಿಡುತ್ತಿರೋದ್ಯಾಕೆ?. ಕ್ರಿಕೆಟ್​ ಅಭಿಮಾನಿಗಳ ಬಹು ದಿನಗಳ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.   

Advertisment

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರಾಟದ ಹಿಂದೆ, ಸ್ಪೋಟಕ ಸತ್ಯ ತಿಳಿದುಬಂದಿದೆ. ಇಷ್ಟು ದಿನ ಆರ್​ಸಿಬಿ ತಂಡ, ಅಭಿಮಾನಿಗಳಿಂದ ಅಭಿಮಾನಿಗಳಿಗೋಸ್ಕರ ಅಂತ ಹೇಳಲಾಗ್ತಿತ್ತು. ಆದ್ರೀಗ ಡಿಯಾಜಿಯೊ ಒಡೆತನದ ಸಂಸ್ಥೆಯ ಒಳ ಲೆಕ್ಕಾಚಾರ, ಬಹಿರಂಗವಾಗಿದೆ. ಆರ್​ಸಿಬಿ ಅಭಿಮಾನಿಗಳಿಗದ್ದಲ್ಲ, ಆರ್​ಸಿಬಿ ಜಸ್ಟ್ ಬ್ಯುಸಿನೆಸ್ ಅನ್ನೋದು ಪ್ರೂವ್ ಆಗಿದೆ. 

RCB_KOHLI

ಆರ್​ಸಿಬಿ ಮಾರಾಟದ ಹಿಂದಿದ್ಯಾ ದೊಡ್ಡ ಲೆಕ್ಕಾಚಾರ..?

17 ವರ್ಷಗಳ ಕಾಲ ಆರ್​ಸಿಬಿ, ಒಂದೇ ಒಂದು ಐಪಿಎಲ್ ಟ್ರೋಫಿ ಗೆದ್ದಿಲ್ಲ. ಆದ್ರೆ ಯಾವಾಗ ಆರ್​ಸಿಬಿ ಐಪಿಎಲ್ ಕಪ್ ಗೆಲ್ತೋ, ಫ್ರಾಂಚೈಸಿ ಮಾಲೀಕರು ಬ್ಯೂಸಿನೆಸ್ ಗೇಮ್ ಶುರುಮಾಡಿದ್ರು. ಇಷ್ಟು ದಿನ ವಿರಾಟ್ ಕೊಹ್ಲಿ ಹೆಸರಲ್ಲೇ ಆರ್​ಸಿಬಿ ತಂಡದ ಬ್ರ್ಯಾಂಡ್ ಬಿಲ್ಡ್ ಮಾಡಿದ ಡಿಯಾಜಿಯೊ ಒಡೆತನದ ಸಂಸ್ಥೆ, ಇದೀಗ ತಂಡವನ್ನ ಮಾರಾಟಕ್ಕೆ ಇಟ್ಟಿರೋದು ಕ್ರಿಕೆಟ್ ಅಭಿಮಾನಿಗಳಿಗೆ ಆಶ್ಚರ್ಯ ಮೂಡಿಸಿದೆ.

ಐಪಿಎಲ್​​ಗೆ ಗುಡ್​ಬೈ ಹೇಳ್ತಾರಾ ಕಿಂಗ್ ಕೊಹ್ಲಿ ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರಾಟದ ಹಿಂದಿರೋದು, ಬೇರೆ ಯಾರು ಅಲ್ಲ, ಆರ್​ಸಿಬಿ ಸೇಲ್​​ಗೆ ಕಾರಣ, ವಿರಾಟ್ ಕೊಹ್ಲಿ. ನೀವು ಕೇಳ್ತಾ ಇರೋದು ನಿಜಾನೇ. ಯಾಕಂದ್ರೆ 2026ರ ಐಪಿಎಲ್, ಕಿಂಗ್ ಕೊಹ್ಲಿ ಪಾಲಿಗೆ ಕೊನೆಯ ಟೂರ್ನಿ ಆದ್ರೂ ಆಶ್ಚರ್ಯ ಪಡಬೇಕಾಗಿಲ್ಲ. ಕೊಹ್ಲಿ ತಂಡ ಬಿಡೋ ಮೊದಲೇ, ಫ್ರಾಂಚೈಸಿಯನ್ನ ಮಾರಿಬಿಡೋಣ ಅನ್ನೋದು ಮಾಲೀಕರ ಸ್ಟ್ರಾಟಜಿಯಾಗಿದೆ.  

Advertisment

ಆರ್​ಸಿಬಿಗೆ ಕೊಹ್ಲಿ ಕೈಕೊಟ್ರೆ ತಂಡದ ಬೆಲೆ ಕುಸಿಯುತ್ತಾ..?

ನಿಜ ಹೇಳಬೇಕು ಅಂದ್ರೆ, ವಿರಾಟ್ ಕೊಹ್ಲಿಯಿಂದಲೇ ಆರ್​ಸಿಬಿ, ಆರ್​ಸಿಬಿಯಿಂದ ವಿರಾಟ್ ಕೊಹ್ಲಿ ಅಲ್ಲ, ಕೊಹ್ಲಿ ಹೆಸರಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತನ್ನ ಬ್ರ್ಯಾಂಡ್ ಬಿಲ್ಡ್​​​ ಮಾಡಿರೋದು. ಒಂದು ವೇಳೆ ವಿರಾಟ್, ದಿಢೀರಂತ ಆರ್​ಸಿಬಿ ತಂಡವನ್ನ ಬಿಟ್ರೆ, ತಂಡದ ಬ್ರ್ಯಾಂಡ್ ವ್ಯಾಲ್ಯೂ ಪಾತಾಳಕ್ಕೆ ಕುಸಿಯಲಿದೆ. ಹಾಗಾಗಿ ಡಿಯಾಜಿಯೊ ಸಂಸ್ಥೆ ಸಿಕ್ಕಾಪಟ್ಟೆ ಹೋಂ ವರ್ಕ್ ಮಾಡಿ, ಸೇಲ್ ಮಾಡೋ ಪ್ಲಾನ್ ಮಾಡಿಕೊಂಡಿರೋದು. 

ಕೊಹ್ಲಿ ಹೆಸರಲ್ಲೇ ಆರ್​ಸಿಬಿ ಟಾಪ್ 3 ಬ್ರ್ಯಾಂಡ್ ಆಗಿತ್ತಾ..?

18 ವರ್ಷಗಳ ಕಾಲ ಒಂದೇ ಫ್ರಾಂಚೈಸಿ ಪರ ಆಡಿರೋ ಏಕೈಕ ಆಟಗಾರ ಅಂದ್ರೆ, ಅದು ವಿರಾಟ್ ಕೊಹ್ಲಿ. ಬೇರೆ ಫ್ರಾಂಚೈಸಿಗಳಿಂದ ಎಷ್ಟೇ ಆಫರ್ ಬಂದ್ರೂ, ಕೊಹ್ಲಿ ಆರ್​ಸಿಬಿ ತಂಡವನ್ನ ಬಿಡೊ ಮನಸು ಮಾಡಲಿಲ್ಲ. ಕೊಹ್ಲಿಗೆ ಬೆಂಗಳೂರು ಮೇಲೆ ಇದ್ದ ಪ್ರೀತಿ, ಅಭಿಮಾನ, ಗೌರವದಿಂದ ಅವರು, ಆರ್​ಸಿಬಿ ತಂಡದಲ್ಲೇ ಆಡಲು ಇಚ್ಛಿಸಿದ್ರು. ಕೊಹ್ಲಿಯಿಂದಲೇ ಆರ್​ಸಿಬಿ, ಐಪಿಎಲ್​​ನ ಟಾಪ್ 3 ಬ್ರ್ಯಾಂಡ್ ಆಗಿ ಬೆಳೆದಿದ್ದು. ಸದ್ಯ ಆರ್​ಸಿಬಿ, ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್​ಕಿಂಗ್ಸ್​ ತಂಡವನ್ನ ಬ್ರ್ಯಾಂಡ್ ವ್ಯಾಲ್ಯೂನಲ್ಲಿ ಹಿಂದಿಕ್ಕಿದೆ. ಇದೆಲ್ಲಾ ಸಾಧ್ಯವಾಗಿದ್ದು, ಜಸ್ಟ್ ಕೊಹ್ಲಿಯಿಂದಲೇ. 

ಇದನ್ನೂ ಓದಿ: T20 World Cup 2026; ಪಂದ್ಯಗಳು ನಡೆಯುವುದು ಎಲ್ಲೆಲ್ಲಿ, ಬೆಂಗಳೂರಲ್ಲೂ ಮ್ಯಾಚ್​ ಇವೆಯಾ?

Advertisment

KOHLI_RCB

5 ತಿಂಗಳಲ್ಲಿ ಡೀಲ್, ಬೋಲ್ಡ್ ಆರ್ಮಿಯಿಂದ ವಿರಾಟ್ ಔಟ್..?

ಡಿಯಾಜಿಯೊ ಸಂಸ್ಥೆ ಆರ್​ಸಿಬಿ ಫ್ರಾಂಚೈಸಿ ಮಾರಾಟಕ್ಕೆ ಡೆಡ್​​ಲೈನ್​​​ ಇಟ್ಕೊಂಡಿದೆ. 2026, ಮಾರ್ಚ್ ಒಳಗೆ ಆರ್​ಸಿಬಿ ತಂಡಕ್ಕೆ ಹೊಸ ಮಾಲೀಕರು ಸಿಗಲಿದ್ದಾರೆ. ಈಗಾಗಲೇ ಯು.ಎಸ್ ಮೂಲದ ಕಂಪನಿ, ಅದಾನಿ ಗ್ರೂಪ್, ಜೆಎಸ್​ಡ್ಲ್ಯೂ ಗ್ರೂಪ್, ಆದಾರ್ ಪೂನವಾಲ್ಲಾ ಮತ್ತು ದೇವ್​ಯಾನಿ ಇಂಟರ್​ನ್ಯಾಷನಲ್ ಗ್ರೂಪ್, ಆರ್​ಸಿಬಿ ಖರೀದಿಗೆ ಆಸಕ್ತಿ ತೋರಿದೆ. ಮಾಲೀಕರು ಬದಲಾಗುತ್ತಿದ್ದಂತೆ ವಿರಾಟ್ ಕೊಹ್ಲಿಯೂ, ಬೋಲ್ಡ್​​ ಆರ್ಮಿಯಿಂದ ದೂರವಾಗಲಿದ್ದಾರೆ.

ಆರ್​ಸಿಬಿ ಮಾರಾಟಕ್ಕಿರೋದು ನೂರಕ್ಕೆ ನೂರರಷ್ಟು ಸತ್ಯ. ಆದ್ರೆ ವಿರಾಟ್ ಕೊಹ್ಲಿಯಿಂದ ಆರ್​ಸಿಬಿ ಮಾರಾಟ ಮಾಡ್ತಾ ಇರೋದು ಅನ್ನೋದು ಸುದ್ದಿ, ಎಷ್ಟು ಸತ್ಯಾನೋ ಗೊತ್ತಿಲ್ಲ. ಯಾವುದು ನಿಜ, ಯಾವುದು ಸುಳ್ಳು ಅನ್ನೋದು, ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
IPL 2026 auction IPL
Advertisment
Advertisment
Advertisment