/newsfirstlive-kannada/media/media_files/2025/11/08/2026_world_cup_in_india-2025-11-08-14-01-36.jpg)
2026ರ ಟಿ20 ವಿಶ್ವಕಪ್​ ಪಂದ್ಯಗಳನ್ನು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಸಲಾಗುವ ಸ್ಥಳಗಳನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಫೈನಲೈಸ್​ ಮಾಡಿದೆ ಎಂದು ಹೇಳಲಾಗುತ್ತಿದೆ.
ಮುಂದಿನ ವರ್ಷ 2026ರ ಫೆಬ್ರುವರಿ 7 ರಿಂದ ಆರಂಭವಾಗುವ ಟಿ20 ವಿಶ್ವಕಪ್​ ಟೂರ್ನಿ ಭಾರತ ಹಾಗೂ ಶ್ರೀಲಂಕಾದಲ್ಲಿ ಆಯೋಜನೆ ಮಾಡಲಾಗುತ್ತದೆ. ಇದರಲ್ಲಿ ಭಾರತದ ದೊಡ್ಡ ನಗರಗಳಾದ ಅಹಮದಾಬಾದ್, ಕೊಲ್ಕತ್ತಾ, ದೆಹಲಿ ಮುಂಬೈ ಹಾಗೂ ಚೆನ್ನೈ ನಗರದಲ್ಲಿ ನಡೆಯಲಿವೆ. ಜೊತೆಗೆ ಶ್ರೀಲಂಕಾದ ಕೊಲೊಂಬೊ ಸೇರಿ ಇನ್ನು ಎರಡು ಸ್ಥಳಗಳು ಸೇರಿ ಒಟ್ಟು 10 ಮೈದಾನಗಳಲ್ಲಿ ಪಂದ್ಯಗಳನ್ನು ನಿಗದಿಸಲಾಗುತ್ತೆ. ಆದರೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಈ ಪಟ್ಟಿಯಲ್ಲಿಯೇ ಇಲ್ಲದಿರುವುದು ಬೇಸರ ಸಂಗತಿ.
ವಿಶ್ವದ ಅತ್ಯಂತ ದೊಡ್ಡ ಮೈದಾನವಾಗಿರುವ ಗುಜರಾತ್​ನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಿ20 ವಿಶ್ವಕಪ್ ಫೈನಲ್ ಮ್ಯಾಚ್ ನಡೆಯಲಿದೆ. ಒಂದು ವೇಳೆ ಪಾಕಿಸ್ತಾನ ತಂಡ ಫೈನಲ್​ಗೆ ಪ್ರವೇಶಿಸಿದರೆ ಶ್ರೀಲಂಕಾದಲ್ಲಿ ಫೈನಲ್ ಪಂದ್ಯ ಆಯೋಜನೆ ಮಾಡಲಾಗುತ್ತದೆ. ಬಿಸಿಸಿಐ ಹಾಗೂ ಪಿಸಿಬಿ ಈ ಮೊದಲೇ ಮಾಡಿಕೊಂಡ ಒಪ್ಪದದಂತೆ ಪಾಕಿಸ್ತಾನದ ಪಂದ್ಯಗಳು ತಟಸ್ಥ ಸ್ಥಳ ಅಂದರೆ ಶ್ರೀಲಂಕಾದಲ್ಲಿ ನಡೆಯಲಿವೆ ಎನ್ನಲಾಗಿದೆ.
/filters:format(webp)/newsfirstlive-kannada/media/media_files/2025/11/08/abhishek_sharma_sanju_samsan_jaiswal_in_ind_vs_aus-2025-11-08-14-01-48.jpg)
ಮಹತ್ವದ ಟೂರ್ನಿಯು 2026ರ ಫೆಬ್ರುವರಿಯಿಂದ ಆರಂಭವಾಗಿ ಮಾರ್ಚ್​ 8ಕ್ಕೆ ಕೊನೆಗೊಳ್ಳುತ್ತದೆ. ಕೆಲವೇ ತಿಂಗಳಲ್ಲಿ ವಿಶ್ವಕಪ್​ ಪಂದ್ಯಗಳು ಆರಂಭವಾಗುವುದರಿಂದ ಇದಕ್ಕೆ ಸಂಬಂಧಿಸಿದಂತೆ ಐಸಿಸಿಯೂ ಮುಂದಿನ ವಾರ ವಿವರವಾದ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಇದಕ್ಕಾಗಿ ತಂಡಗಳು ಕಾಯುತ್ತಿವೆ. ಜೊತೆಗೆ ಪಂದ್ಯ ವೀಕ್ಷಣೆಗೆ ಟಿಕೆಟ್ ಬಗೆಗಿನ ಮಾಹಿತಿಯನ್ನು​ ಐಸಿಸಿ ಹಂಚಿಕೊಳ್ಳಬೇಕಿದೆ ಎಂದು ಹೇಳಲಾಗಿದೆ.
ಈ ವರ್ಲ್ಡ್​​ಕಪ್​ ಟೂನಿಯೂ ಕಳೆದ ಆವೃತ್ತಿಯಂತೆ ಸೇಮ್ ಫಾರ್ಮೆಟ್​ ಅನ್ನು ಹೊಂದಿರುತ್ತದೆ. ಅಂದರೆ 20 ತಂಡಗಳನ್ನು 5 ರಂತೆ 4 ಗುಂಪುಗಳಾಗಿ ವಿಂಗಡಣೆ ಮಾಡಲಾಗುತ್ತೆ. ಪ್ರತಿ ತಂಡವೂ ಇನ್ನೊಂದು ಟೀಮ್​​ನೊಂದಿಗೆ ಒಂದೊಂದು ಪಂದ್ಯ ಆಡಲಿವೆ. ಪ್ರತಿ ತಂಡದಿಂದ ಎರಡು ಟಾಪ್ ಎರಡು ತಂಡಗಳು ಸೂಪರ್​- 8ಗೆ ಎಂಟ್ರಿ ಕೊಡುತ್ತವೆ. ಇಲ್ಲಿ ಆಡಿರುವ ಅಗ್ರ 4 ತಂಡಗಳು ಎರಡು ಗುಂಪುಗಳು ಆಗುತ್ತವೆ. ಅಗ್ರ 2 ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಸೆಮಿಫೈನಲ್‌ನಲ್ಲಿ ವಿಜೇತರು ಫೈನಲ್‌ಗೆ ಬಿಗ್ ಎಂಟ್ರಿ ಕೊಡುತ್ತಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us