Advertisment

ಆರ್​ಸಿಬಿಗೆ ಬಿಗ್ ಶಾಕ್ ಕೊಟ್ಟ ಕ್ಯಾಪ್ಟನ್​ ರಜತ್ ಪಾಟೀದಾರ್​.. ಹೊಸ ಟೆನ್ಶನ್!

ಇಂಡಿಯನ್​​ ಪ್ರೀಮಿಯರ್​​ ಲೀಗ್​ ರಿಟೈನ್ಶನ್​ಗೂ ಮುನ್ನ ಆರ್​​ಸಿಬಿ ಗೊಂದಲದ ಗೂಡಾಗಿದೆ. ಒಂದೆಡೆ ಆಟಗಾರರ ರಿಟೈನ್​-ರಿಲೀಸ್​ ಲೆಕ್ಕಾಚಾರ​, ಇನ್ನೊಂದೆಡೆ ಫ್ರಾಂಚೈಸಿ ಮಾರಾಟದ ತಲೆಬಿಸಿ​, ಇದ್ರ ನಡುವೆ ಕೊಹ್ಲಿ ನಿವೃತ್ತಿ ವದಂತಿ ಮ್ಯಾನೇಜ್​ಮೆಂಟ್​ನ ಟೆನ್ಶನ್ ಹೆಚ್ಚಿಸಿದೆ.

author-image
Ganesh Kerekuli
Rajat patidar

ರಜತ್ ಪಾಟೀದಾರ್, ಆರ್​ಸಿಬಿ ಕ್ಯಾಪ್ಟನ್ Photograph: (ಆರ್​ಸಿಬಿ ಟ್ವಿಟರ್)

Advertisment
  • ರಾಯಲ್​​ ಚಾಲೆಂಜರ್ಸ್​ ಬೆಂಗಳೂರಿಗೆ ಹೊಸ ಟೆನ್ಶನ್​
  • 4ರಿಂದ 5 ತಿಂಗಳು ಕ್ರಿಕೆಟ್​ ಫೀಲ್ಡ್​ನಿಂದ ರಜತ್​ ದೂರ
  • ರಜತ್​​ ಹೊರಬಿದ್ರೆ ಆರ್​​ಸಿಬಿ ಮುನ್ನಡೆಸೋದ್ಯಾರು..?

ಇಂಡಿಯನ್​​ ಪ್ರೀಮಿಯರ್​​ ಲೀಗ್​ ರಿಟೈನ್ಶನ್​ಗೂ ಮುನ್ನ ಆರ್​​ಸಿಬಿ ಗೊಂದಲದ ಗೂಡಾಗಿದೆ. ಒಂದೆಡೆ ಆಟಗಾರರ ರಿಟೈನ್​-ರಿಲೀಸ್​ ಲೆಕ್ಕಾಚಾರ​, ಇನ್ನೊಂದೆಡೆ ಫ್ರಾಂಚೈಸಿ ಮಾರಾಟದ ತಲೆಬಿಸಿ​, ಇದ್ರ ನಡುವೆ ಕೊಹ್ಲಿ ನಿವೃತ್ತಿ ವದಂತಿ ಮ್ಯಾನೇಜ್​ಮೆಂಟ್​ನ ಟೆನ್ಶನ್ ಹೆಚ್ಚಿಸಿದೆ. ಇದೀಗ ಕ್ಯಾಪ್ಟನ್​ ರಜತ್​ ಪಾಟಿದಾರ್​ ಮ್ಯಾನೇಜ್​ಮೆಂಟ್​ ತಲೆನೋವನ್ನ ಮತ್ತಷ್ಟು ಹೆಚ್ಚಿಸಿದ್ದಾರೆ. 

Advertisment

ಇದನ್ನೂ ಓದಿ:ನಂಬಿಕೆ ಗಳಿಸಿ ಪಕ್ಕದ ಮನೆಯ ಅಜ್ಜಿಯ ಕತ್ತು ಕೊಯ್ದ ಲೇಡಿ.. ಕಜ್ಜಾಯ ಕೊಡೋದಾಗಿ ಮನೆಗೆ ಕರೆದು ಕೃತ್ಯ

RCB

ಐಪಿಎಲ್ ರಿಟೈನ್ಶನ್​ ಡೇಟ್​ ಹತ್ತಿರವಾದ ಬೆನ್ನಲ್ಲೇ​ ಫ್ರಾಂಚೈಸಿಗಳ ವಲಯದಲ್ಲಿ ಭರದ ಚಟುವಟಿಕೆಗಳು ನಡೀತಿವೆ. ಆಟಗಾರರ ರಿಟೈನ್​​, ರಿಲೀಸ್​, ಟ್ರೇಡಿಂಗ್​ನ ಲೆಕ್ಕಾಚಾರಗಳು ಜೋರಾಗಿ ನಡೀತಿವೆ. ಆದ್ರೆ, ರಾಯಲ್​​ ಚಾಲೆಂಜರ್ಸ್​​ ಬೆಂಗಳೂರು ಫ್ರಾಂಚೈಸಿ ಮಾತ್ರ ಗೊಂದಲದ ಗೂಡಾಗಿದೆ. ಹಲವು ಟೆನ್ಶನ್​ಗಳ ಮಧ್ಯೆ ಮತ್ತೊಂದು ಹೊಸ ಸಮಸ್ಯೆ ಮ್ಯಾನೇಜ್​​ಮೆಂಟ್​ ತಲೆಬಿಸಿ ಹೆಚ್ಚಿಸಿದೆ. 

ಬೆಂಗಳೂರಿಗೆ ಹೊಸ ಟೆನ್ಶನ್.​.!

ಹಾಲಿ ಚಾಂಪಿಯನ್​​ ಆರ್​​​​ಸಿಬಿ ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಒಂದು ಕಡೆ ಫ್ರಾಂಚೈಸಿ ಮಾರಾಟದ ಸುದ್ದಿಯಾದ್ರೆ, ಇನ್ನೊಂದು ಕಡೆಗೆ ವಿರಾಟ್​ ಕೊಹ್ಲಿ ಐಪಿಎಲ್​ಗೆ ಗುಡ್​ ಬೈ ಹೇಳ್ತಾರೆ ಎಂಬ ಸುದ್ದಿ ಹಲ್​ಚಲ್​ ಎಬ್ಬಿಸಿದೆ. ಆರ್​​ಸಿಬಿ ಫ್ರಾಂಚೈಸಿಯಲ್ಲೂ ಈ ವಿಚಾರಗಳು ಗೊಂದಲಕ್ಕೆ ದಾರಿ ಮಾಡಿಕೊಟ್ಟಿವೆ. ಇದ್ರ ನಡುವೆ ಮತ್ತೊಂದು ಹೊಸ ಟೆನ್ಶನ್ ಆರ್​​ಸಿಬಿಯಲ್ಲಿ ತಲೆದೋರಿದೆ. ನಾಯಕನಾದ ಚೊಚ್ಚಲ ಸೀಸನ್​ನಲ್ಲೇ ಕಪ್​ ಗೆಲ್ಲಿಸಿಕೊಟ್ಟ ನಾಯಕ ರಜತ್​ ಪಾಟಿದಾರ್​ ಮ್ಯಾನೇಜ್​ಮೆಂಟ್​​ ಟೆನ್ಶನ್​ ಹೆಚ್ಚಿಸಿದ್ದಾರೆ. 

Advertisment

ಸೌತ್​ ಆಫ್ರಿಕಾ ಎ ಎದುರಿನ ಅನಧಿಕೃತ ಟೆಸ್ಟ್​ನಲ್ಲಿ ಆರ್​​ಸಿಬಿ ನಾಯಕ ರಜತ್​ ಪಾಟಿದಾರ್​ ಇಂಜುರಿಗೆ ತುತ್ತಾಗಿದ್ದಾರೆ. ಮೊದಲ ಟೆಸ್ಟ್​ ಅಂತ್ಯದ ಬಳಿಕ ರಜತ್​ ಇಂಜುರಿಗೆ ತುತ್ತಾಗಿದ್ದು ಹೀಗಾಗಿಯೇ 2ನೇ ಟೆಸ್ಟ್​ನಿಂದ ಹೊರಗುಳಿದಿದ್ರು. ಇದೀಗ ಬಿಸಿಸಿಐ ಸೆಂಟರ್​ ಆಫ್​ ಎಕ್ಸಲೆನ್ಸ್​ನಿಂದ ರಜತ್​ ಇಂಜುರಿಯ ಲೇಟೆಸ್ಟ್​ ಅಪ್​ಡೇಟ್​ ಹೊರಬಿದ್ದಿದೆ. ಇದ್ರ ಪ್ರಕಾರ ರಜತ್​ ಚೇತರಿಸಿಕೊಳ್ಳಲು 4ರಿಂದ 5 ತಿಂಗಳು ಬೇಕಂತೆ.  ಸುದೀರ್ಘ ಕಾಲ ರಜತ್​ ಮೈದಾನದಿಂದ ಹೊರ ಬೀಳಲಿದ್ದಾರೆ. ಇದೇ ಆರ್​​ಸಿಬಿ ತಲೆಬಿಸಿಗೆ ಕಾರಣವಾಗಿರೋದು. 

ಇದನ್ನೂ ಓದಿ: ರುಕ್ಮಿಣಿ ವಸಂತ್ ಬಳಿಕ ಅನುಪಮಾಗೆ ‘ಜಾಲತಾಣ’ದ ಟೆನ್ಶನ್..! ಅಸಲಿಗೆ ಆಗಿದ್ದೇನು?

jitesh_sharma_RCB

ಇಂಜುರಿಯಿಂದ ಚೇತರಿಕೆಗೆ 4ರಿಂದ 5 ತಿಂಗಳು ಬೇಕು.. ಅಂದ್ರೆ ಸಂಪೂರ್ಣ ಫಿಟ್​ ಆಗಿ ಮೈದಾನಕ್ಕೆ ಮರಳಲು ಇನ್ನೂ ಹೆಚ್ಚಿನ ಸಮಯ ಬೇಕಾಗಲಿದೆ ಅನ್ನೋದು ಎನ್​ಸಿಎ ಮೆಡಿಕಲ್​ ಟೀಮ್​ ಮೂಲಗಳ ಮಾಹಿತಿಯಾಗಿದೆ. ಮಾರ್ಚ್​​ನಲ್ಲಿ ಐಪಿಎಲ್​ ಆರಂಭವಾಗಲಿದ್ದು, ಸದ್ಯದ ಮಾಹಿತಿ ಪ್ರಕಾರ ರಜತ್​​​​ ಫುಲ್​ ಫಿಟ್​ ಆಗಲು ಏಪ್ರಿಲ್​ವರೆಗೆ ಸಮಯ ಬೇಕಾಗಬಹುದು ಎನ್ನಲಾಗ್ತಿದೆ. ಅಂದ್ರೆ ಐಪಿಎಲ್​ ಮೊದಲಾರ್ಧಕ್ಕೆ ರಜತ್​ ಪಾಟಿದಾರ್​ ಅಲಭ್ಯರಾಗೋ ಸಾಧ್ಯತೆ ದಟ್ಟವಾಗಿದೆ. 

Advertisment

ಆರ್​​ಸಿಬಿ ಮುನ್ನಡೆಸೋದ್ಯಾರು..?

ರಜತ್​ ಪಾಟಿದಾರ್​​​ ಅಲಭ್ಯತೆಯಿಂದ ಟೀಮ್​ ಬ್ಯಾಲೆನ್ಸ್ ಡಿಸ್ಟರ್ಬ್​ ಆಗೋ ಚಿಂತೆ ಒಂದೆಡೆಯಾದ್ರೆ, ತಂಡವನ್ನ ಮುನ್ನಡೆಸೋದ್ಯಾರು ಅನ್ನೋ ಪ್ರಶ್ನೆ ಮತ್ತೊಂದೆಡೆ ಕಾಡ್ತಿದೆ. ನಾಯಕನಾದ ಚೊಚ್ಚಲ ಸೀಸನ್​ನಲ್ಲೇ ಕಪ್​ ಗೆಲ್ಲಿಸಿ 18 ವರ್ಷದ ಕೊರಗನ್ನ ರಜತ್​ ಪಾಟಿದಾರ್​ ನೀಗಿಸಿದ್ರು. ಟೂರ್ನಿಯೂದ್ದಕ್ಕೂ ಬ್ರಿಲಿಯಂಟ್​ ಕ್ಯಾಪ್ಟನ್ಸಿಯಿಂದ ಗಮನ ಸೆಳೆದಿದ್ರು. ಅಷ್ಟೇ ಸಮರ್ಥವಾಗಿ ತಂಡವನ್ನ ಮುನ್ನಡೆಸೋದ್ಯಾರು ಅನ್ನೋದು ಫ್ರಾಂಚೈಸಿಯಲ್ಲಿರೋ ದೊಡ್ಡ ಪ್ರಶ್ನೆಯಾಗಿದೆ. ಬಹುತೇಕ ವೈಸ್​​ ಕ್ಯಾಪ್ಟನ್​ ಜಿತೇಶ್​ ಶರ್ಮಾಗೆ ನಾಯಕತ್ವದ ಜವಾಬ್ಧಾರಿ ನೀಡೋ ಸಾಧ್ಯತೆಯಿದೆ.  

ಇದನ್ನೂ ಓದಿ:ಈತ ಟಿ-20ಯಲ್ಲಿ ಡೇಂಜರಸ್ ಬ್ಯಾಟರ್.. ಡೇವಿಡ್, ಸೂರ್ಯನನ್ನೂ ಮೀರಿಸಿದ ಭಲೇ ಆಟಗಾರ..!

ಒಟ್ಟಿನಲ್ಲಿ ಫ್ರಾಂಚೈಸಿಯ ಮಾರಾಟ, ವಿರಾಟ್​ ಕೊಹ್ಲಿ ನಿವೃತ್ತಿ ಸುದ್ದಿ, ರಿಟೈನ್​-ರಿಲೀಸ್​ ಲೆಕ್ಕಾಚಾರದ ನಡುವೆ ರಜತ್​ ಪಾಟಿದಾರ್ ಇಂಜುರಿ ಆರ್​​ಸಿಬಿಗೆ ಹೊಸ ಟೆನ್ಶನ್​ ತಂದಿಟ್ಟಿದೆ. ಫ್ರಾಂಚೈಸಿಯನ್ನೇ ಮಾರಾಟ ಮಾಡ್ತಿರೋದ್ರಿಂದ ಟೆನ್ಶನ್​ ಯಾಕೆ ಅನ್ನೋದು ನಿಮ್ಮ ಪ್ರಶ್ನೆ ಇರಬಹುದು. ಕೊಹ್ಲಿ ನಿವೃತ್ತಿಯಾದ್ರೆ, ನಾಯಕ ರಜತ್​ ಪಾಟಿದಾರ್​​ ಅಲಭ್ಯರಾದ್ರೆ ಆರ್​​​ಸಿಬಿ ಬ್ರ್ಯಾಂಡ್​ವ್ಯಾಲ್ಯೂ ಕುಸಿಯದೇ ಇರುತ್ತಾ.?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rajat Patidar RCB
Advertisment
Advertisment
Advertisment