/newsfirstlive-kannada/media/media_files/2025/11/09/surya-and-tim-devid-2025-11-09-19-26-02.jpg)
ಟಿ-20 ಕ್ರಿಕೆಟ್​​ನಲ್ಲಿ ಟೀಮ್ ಇಂಡಿಯಾ ದರ್ಬಾರ್ ಮುಂದುವರೆದಿದೆ. ಕಳೆದ ಕೆಲ ವರ್ಷಗಳಿಂದ ದೇಶ-ವಿದೇಶಗಳಲ್ಲಿ ಟಿ-20 ಸರಣಿಗಳನ್ನ ಗೆದ್ದಿರುವ ಸೂರ್ಯಕುಮಾರ್ ಯಾದವ್ ಪಡೆ, ಬಲಿಷ್ಟ ತಂಡಗಳಿಗೆಲ್ಲಾ ನೀರು ಕುಡಿಸಿದೆ. ಟಿ-20 ಫಾರ್ಮೆಟ್​ನಲ್ಲಿ ಟೀಮ್ ಇಂಡಿಯಾ ಪ್ರಾಬಲ್ಯ ಸಾಧಿಸಲು ಈ ಆಟಗಾರರೇ ಕಾರಣ. ಬ್ಯಾಟಿಂಗ್, ಬೌಲಿಂಗ್​ನಲ್ಲಿ ಮಿಂಚಿರುವ ಇವರು ತಂಡಕ್ಕೆ ಶಕ್ತಿ ತುಂಬಿದ್ದಾರೆ.
/filters:format(webp)/newsfirstlive-kannada/media/media_files/2025/10/05/abhishek_sharma-1-2025-10-05-17-27-25.jpg)
ಅಭಿಷೇಕ್ ಶರ್ಮಾ ಡೇಂಜರಸ್ ಬ್ಯಾಟ್ಸ್​ಮನ್
ವರ್ಲ್ಡ್ ಟಿ-ಟ್ವೆಂಟಿ ಕ್ರಿಕೆಟ್​​ನಲ್ಲಿ ಮೋಸ್ಟ್ ಡೇಂಜರಸ್ ಬ್ಯಾಟ್ಸ್​ಮನ್ ಯಾರು ಅನ್ನೋ ಪ್ರಶ್ನೆಗೆ ಉತ್ತರ ಒಂದೇ. ಅದು ಅಭಿಷೇಕ್ ಶರ್ಮಾ. ಈಗಾಗಲೇ ಆಡಿರೋ ಕೆಲವೇ ಕೆಲವು ಪಂದ್ಯಗಳಲ್ಲಿ ದಾಖಲೆಗಳನ್ನ ಚಿಂದಿ ಚಿತ್ರಾನ್ನ ಮಾಡಿರುವ ಪಂಬಾಜ್ ಹುಡುಗ. ವೇಗವಾಗಿ ಸಾವಿರ ರನ್ ಪೂರೈಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
ವೇಗವಾಗಿ ಸಾವಿರ ರನ್​​ ಸಿಡಿಸಿದ ಬ್ಯಾಟರ್ಸ್
ಅಭಿಷೇಕ್ ಕೇವಲ 528 ಎಸೆತಗಳಲ್ಲಿ ಸಾವಿರ ರನ್ ಕಂಪ್ಲೀಟ್ ಮಾಡಿದ್ರೆ, ಆಸ್ಟ್ರೇಲಿಯಾದ ಟಿಮ್ ಡೇವಿಡ್ 569 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಸಾವಿರ ರನ್​ ಪೂರೈಸಲು 573 ಎಸೆತ ತೆಗೆದುಕೊಂಡ್ರೆ, ಇಂಗ್ಲೆಂಡ್​​ನ ಫಿಲ್ ಸಾಲ್ಟ್ 599 ಎಸೆತಗಳಲ್ಲಿ ಮತ್ತು ಆಸಿಸ್​​ನ ಗ್ಲೇನ್ ಮ್ಯಾಕ್​ವೆಲ್ 604 ಎಸೆತಗಳಲ್ಲಿ ಸಾವಿರ ರನ್ ಕಲೆ ದಾಖಲಿಸಿದ್ದಾರೆ.
ಬ್ಯಾಟಿಂಗ್​ನಲ್ಲಿ ಅಭಿಷೇಕ್ ಶರ್ಮಾರ ಓಟಕ್ಕೆ ಬ್ರೇಕ್ ಹಾಕೋ ಬೌಲರೇ ಇಲ್ಲ. ಹೊಡಿ ಬಡಿ ಆಟಕ್ಕೆ ಹೇಳಿಮಾಡಿಸಿದಂತಿರುವ ಅಭಿಷೇಕ್, ಬೌಲರ್​ಗಳನ್ನ ಶೇಕ್ ಮಾಡಿದ್ದಾರೆ. ಮತ್ತೊಂದೆಡೆ ಬೌಲಿಂಗ್​ನಲ್ಲಿ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ಟಿ-20 ಫಾರ್ಮೆಟ್​​ನಲ್ಲಿ ಕಿಂಗ್ ಬೌಲರ್ ಎನಿಸಿಕೊಂಡಿದ್ದಾರೆ.
2025ರ ಬೆಸ್ಟ್ T20 ಬೌಲರ್ ಚಕ್ರವರ್ತಿ
ಈ ವರ್ಷ ವರುಣ್, ವಿಶ್ವ ಟಿ-20 ಕ್ರಿಕೆಟ್​ನ ಚಕ್ರವರ್ತಿಯಾಗಿ ಮೆರೆದಿದ್ದಾರೆ. ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್, ಗೇಮ್​ ಚೇಂಜರ್ ಎನಿಸಿಕೊಂಡಿರೋ ವರುಣ್, ತಂಡದ ಕೀ ಬೌಲರ್ ಅಷ್ಟೇ ಅಲ್ಲ, ನಾಯಕನ ನಂಬಿಕಸ್ಥ ಬೌಲರ್ ಆಗಿದ್ದಾರೆ. ಒಂದೇ ಓವರ್​ನಲ್ಲಿ ವೆರೈಟಿ ವೆರೈಟಿ ಡಿಲಿವರಿಗಳನ್ನ ಬೌಲ್ ಮಾಡೋ ವರುಣ್, ಶಾರ್ಟರ್ ಫಾರ್ಮೆಟ್​​​​​​​ನ ಕಿಂಗ್.
/filters:format(webp)/newsfirstlive-kannada/media/post_attachments/wp-content/uploads/2025/03/Varun-Chakravarthy.jpg)
ಅಧಿಕ ವಿಕೆಟ್ ಪಡೆದ ಮಿಸ್ಟ್ರಿ ಬೌಲರ್
ಈ ವರ್ಷ ವರುಣ್ 26 ಬ್ಯಾಟ್ಸ್​ಮನ್​ಗಳನ್ನ ಬೇಟೆಯಾಡಿ ಗರಿಷ್ಟ ವಿಕೆಟ್ ಕಬಳಿಸಿದ ಬೌಲರ್. 2016ರಲ್ಲಿ ಆಫ್ ಸ್ಪಿನ್ನರ್ ಆರ್.ಅಶ್ವಿನ್ 23 ವಿಕೆಟ್ ಪಡೆದು ದಾಖಲೆ ಬರೆದಿದ್ರೆ, 2017ರಲ್ಲಿ ಲೆಗ್​ಸ್ಪಿನ್ನರ್ ಯುಜುವೇಂದ್ರ ಚಹಲ್ 23 ವಿಕೆಟ್ ಮತ್ತು 2022ರಲ್ಲಿ ಮತ್ತೆ 23 ವಿಕೆಟ್ ಪಡೆದು, ಅಧಿಕ ವಿಕೆಟ್ ಪಡೆದ ಬೌಲರ್ ​ಲಿಸ್ಟ್​ನಲ್ಲಿ ಕಾಣಿಸಿಕೊಂಡಿದ್ರು.
ಟಿ-20 ಫಾರ್ಮೆಟ್​ನಲ್ಲಿ ಅಭಿಷೇಕ್ ಶರ್ಮಾ ಮತ್ತು ವರುಣ್ ಚಕ್ರವರ್ತಿ ಸಾಲಿಡ್ ಫಾರ್ಮ್​ನಲ್ಲಿರೋದು, ಟೀಮ್ ಮ್ಯಾನೇಜ್ಮೆಂಟ್​​ಗೆ ಸಮಾಧಾನ ತಂದಿದೆ. ಟೀಮ್ ಇಂಡಿಯಾಕ್ಕೆ ಇದು ಗುಡ್​ನ್ಯೂಸ್. ಟಿ-20 ವಿಶ್ವಕಪ್​ಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿರೋದ್ರಿಂದ ಅಭಿಷೇಕ್ ಮತ್ತು ವರುಣ್, ಅದೇ ಗುಡ್​ ಫಾರ್ಮ್​ ಮುಂದುವರೆಸಲಿ ಅನ್ನೋದೇ ಕ್ರಿಕೆಟ್ ಅಭಿಮಾನಿಗಳ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us