ಈ ಹಿಂದೆ ಮಂಗಳೂರು, ಬೆಳಗಾವಿಯ ಜೈಲುಗಳಲ್ಲಿ ಈ ರೀತಿ ಆಗಿದ್ದಾಗ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಕ್ರಮ ತೆಗೆದುಕೊಂಡಿದ್ದೇವೆ. ಎಡಿಜಿಪಿ ಬಿ. ದಯಾನಂದ ಅವರನ್ನು ಮುಖ್ಯಸ್ಥರನ್ನಾಗಿ ಮಾಡಿದ್ದೇವೆ. ಅವರು ನಿನ್ನೆ ರಜೆ ಇದ್ದರು. ಈ ಬಗ್ಗೆ ಅವರ ಬಳಿ ಮಾತನಾಡಿದ್ದೇನೆ. ಕೆಳ ಅಧಿಕಾರಿಗಳ ಮೇಲೆ ತಕ್ಷಣ ಕ್ರಮ ತೆಗೆದುಕೊಂಡು ವರದಿ ಕೊಡಬೇಕು ಎಂದಿದ್ದೇನೆ. ಸಿಬ್ಬಂದಿ ಕಡಿಮೆ ಇದ್ದಾರೆ ಎನ್ನುತ್ತಾರೆ. ಆದ್ರೆ ಇರುವಂತಹ ಸಿಬ್ಬಂದಿ ಸರಿಯಾಗಿ ಕೆಲಸ ಮಾಡಬೇಕು ಅಲ್ವಾ?. ಸ್ಟಾಪ್ ಕಡಿಮೆ ಇದ್ದಾರೆ ಎಂದು ಜೈಲಿನಲ್ಲಿದ್ದವರಿಗೆ ಮೊಬೈಲ್, ಟಿವಿ ಸೇರಿ ಬೇರೆ ಬೇರೆ ಕೊಟ್ಟರೇ ಅದು ಜೈಲು ಎಂದು ಅನಿಸಿಕೊಳ್ಳಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ರಾಜಕೀಯ ನಿವೃತ್ತಿ ಬಗ್ಗೆ ಮಾತಾಡಿದ ಇಂಡಿ ಕ್ಷೇತ್ರದ ಶಾಸಕ.. ರೈತರ ಎದುರಲ್ಲೇ ಕಾಂಗ್ರೆಸ್​ MLA ಕಣ್ಣೀರು
ಈಗಾಗಲೇ ಈ ಬಗ್ಗೆ ವರದಿಯನ್ನು ಕೇಳಿದ್ದು ಶೀಘ್ರದಲ್ಲೇ ಒಂದು ಸಭೆ ಮಾಡುತ್ತೇನೆ. ಇದಕ್ಕೆಲ್ಲಾ ಏನು ಮಾಡಬೇಕು ಎಂದು ಚರ್ಚೆ ಮಾಡಲಾಗುವುದು. ಜಾಮರ್ ಇದ್ದರೂ ಈ ರೀತಿ ಆಗುತ್ತಿವೆ. ವರದಿ ಕೊಡಿ ಎಂದಿದ್ದೇನೆ. ವರದಿ ನನಗೆ ಸರಿ ಅನಿಸಲಿಲ್ಲ ಎಂದರೆ ಸಮಿತಿ ರಚನೆ ಮಾಡಿ ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು. ಉಗ್ರನ ಕೈಯಲ್ಲಿ ಮೊಬೈಲ್​ ಇದೆ ಎಂದಿದ್ದಕ್ಕೆ ಉತ್ತರಿಸಿದ ಗೃಹ ಸಚಿವರು, ಉಗ್ರ ಅಂತಲ್ಲ, ಜೈಲಿನಲ್ಲಿ ಇರುವ ಯಾರ ಬಳಿಯೂ ಮೊಬೈಲ್ ಇರಲೇಬಾರದು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us