/newsfirstlive-kannada/media/media_files/2025/11/09/congress_mla-2025-11-09-11-46-03.jpg)
ವಿಜಯಪುರ: ಕಬ್ಬು ಬೆಳೆಗಾರರು ಪ್ರತಿಭಟನೆ ವೇಳೆ ಇವರು ರೈತರು ಅಲ್ಲ ಎಂದು ದರ್ಪ ತೋರಿದ್ದ ಇಂಡಿ ಶಾಸಕ ಯಶವಂತ ರಾಯಗೌಡ ಪಾಟೀಲ್ ಇದೀಗ ರಾಜಕೀಯ ನಿವೃತ್ತಿ ಬಗ್ಗೆ ಮಾತಾಡಿ ಕಣ್ಣೀರಿಟ್ಟಿದ್ದಾರೆ.
ಕಾರ್ಖಾನೆ ರೈತರ ಸಭೆಯಲ್ಲಿ ಕಣ್ಣೀರಿಟ್ಟ ಇಂಡಿ ಕಾಂಗ್ರೆಸ್ ಶಾಸಕ ಯಶವಂತ ರಾಯಗೌಡ ಪಾಟೀಲ್ ಅವರು, ನಾನು ಬಹಳ ಶಾರ್ಟ್​ ಆಗಿ ಯೋಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇನೆ. ಈಗ ಹೇಳೋದು ಬೇಡ ಎಂದರೂ I have Decided. ಸಾರ್ವಜನಿಕ ಜೀವನದಲ್ಲಿ ನಮ್ಮಂತಹವರು ಬಹಳ ದಿನ ಉಳಿಯಲ್ಲ. ಈಗ ನಿವೃತ್ತಿ ಜೀವನದತ್ತ ವಾಲುತ್ತಿದ್ದೇನೆ. ಭೂಮಿ ಮೇಲಿಂದ ಹೋಗಬೇಕೆಂದು ನಿರ್ಧಾರ ಮಾಡಿದ್ದೇನೆ ಎಂದು ಕಾಂಗ್ರೆಸ್ ಶಾಸಕ ದುಃಖಿಸುತ್ತಾ ಮಾತಾಡಿದ್ದಾರೆ. ಈ ವೇಳೆ ರೈತರು ಅಳಬೇಡಿ ನಾವು ನಿಮ್ಮ ಪರ ಇದ್ದೇವೆ ಎಂದು ಧೈರ್ಯ ತುಂಬಿದ್ದಾರೆ.
/filters:format(webp)/newsfirstlive-kannada/media/media_files/2025/11/08/sugarcane_farmers_protest-2025-11-08-07-19-19.jpg)
ನೀವೆಲ್ಲಾ ಇದ್ದೀರಿ ಅಂತ 40 ವರ್ಷ ರಾಜಕಾರಣದಲ್ಲಿದ್ದೇನೆ. ಈ ಜಿಲ್ಲೆಯ ಅಭಿವೃದ್ಧಿಗೆ ಏನೇನು ಶ್ರಮಿಸಿದ್ದೇನೆ. ಇಂಡಿ ತಾಲೂಕು ಉಗಮವಾದಾಗ ಏನಿತ್ತು?. ನೀರಾವರಿ ಯೋಜನೆಗಳು, ರೇವಣಸಿದ್ದೇಶ್ವರ ಏತನೀರಾವರಿ ಯೋಜನೆಯಿಂದ ಎಷ್ಟು ಕೆರೆ ತುಂಬಿವೆ, ರೈತರ ಭೂಮಿ ಹಸಿರಾಗಿವೆ. ನೀರಾವರಿಗಾಗಿ ಶ್ರಮಿಸಿದ್ದೇನೆ. ನನ್ನ ರಾಜಕಾರಣ ಜೀವನ ನನಗೆ ಸಂತೃಪ್ತಿಯಿದೆ. ಸಕ್ಕರೆ ಕಾರ್ಖಾನೆ 40 ವರ್ಷದಿಂದ ಬಾರಾ ಕಮಾನ್ ಇದ್ದುದ್ದು ಗೋಲ ಗುಮ್ಮಟ ಮಾಡಿದ್ದೇನೆ. ಅಸ್ತಿ ಪಂಜರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದೇನೆ. ಆದರೆ ಇಂತಹ ಜೀವನಕ್ಕೆ ರಾಜಕಾರಣ ಮಾಡೋದಾ ಎಂದು ಪ್ರಶ್ನೆ ಮಾಡಿದ್ದಾರೆ.
ನಾನು ಏನು ಅಭಿವೃದ್ಧಿ ಮಾಡಿದ್ದೇನೆ, ಈ ಪ್ರದೇಶದಲ್ಲಿ ನಾನು ಎಲ್ಲ ಸಮಾಜವನ್ನು ಹೃದಯದಲ್ಲಿ ಪ್ರೀತಿಸಿದ್ದೇನೆ. ಅದೇ ಸ್ಥಳದಿಂದಲೇ ಧಿಕ್ಕಾರ ಕೂಗಿಸಿಕೊಳ್ಳುವುದು ಯಾವ ಪುರುಷಾರ್ಥಕ್ಕೆ ನಾನು ಇರಬೇಕು?. ಇದೆಲ್ಲಾ ಆ ಭಗವಂತನೇ ನೋಡಿಕೊಳ್ಳಬೇಕು. ಎಲ್ಲಾ ಸಮುದಾಯಗಳಿಗೆ ಸ್ವಾಭಿಮಾನದಿಂದ ಮಾಡತಕ್ಕದ್ದು ಮಾಡಿದೆ ಎಂದು ಹೇಳುವಾಗ ಗದ್ಗದಿತರಾದ ಶಾಸಕ ಯಶವಂತ ರಾಯಗೌಡ ಮಾತು ನಿಲ್ಲಿಸಿ ಕಣ್ಣೀರು ಹಾಕಿದರು.
ಬಳಿಕ ಕಣ್ಣೀರು ಹಾಕುತ್ತಾ ಮಾತು ಮುಂದುವರಿಸಿ, ನಾನು ಭೂಮಿ ಮೇಲಿಂದ ಹೋಗಬೇಕೆಂದು ನಿರ್ಧಾರ ಮಾಡಿದ್ದೇನೆ. ಮೊನ್ನೆ ಚುನಾವಣೆಯಲ್ಲಿ ಶೇ.90ರಷ್ಟು ಒನ್ ಸೈಡ್. ನಾನೆಂದಾದರೂ ಫೋನ್ ಮಾಡಿದ್ದೇನಾ?. ಎರಡು ಭಾಷಣ ಮಾಡಿದ್ದೆ, ನಾಮಿನೇಷನ್ ಮಾಡಿ ಹೈದರಾಬಾದ್​ಗೆ ಹೋಗಿದ್ದೆ. ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲು ಹೋಗಿದ್ದೆ. ಹೈದ್ರಾಬಾದ್​ನಲ್ಲಿ ಎಸ್ಟಿಮೇಟ್ ಕಮಿಟಿ ಚೇರ್ಮನ್ ಆಗಿ ನೋಡೋಕೆ ಹೋಗಿದ್ದೆ. ಬಸವಣ್ಣ, ಅಂಬೇಡ್ಕರ್ ಅವರಿಗೆ ಬಿಟ್ಟಿಲ್ಲ ನನ್ನಂತವರನ್ನ ಬಿಡ್ತಾರಾ?. ಆದರೆ ಈ ತಾಲೂಕಿನ ಜನ ಹೃದಯವಂತರಿದ್ದಾರೆ ಎಂದು ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/11/09/congress_mla_2-2025-11-09-11-51-11.jpg)
ಶಾಸಕರು ಈ ಮೊದಲು ಹೇಳಿದ್ದೇನು?
ಜಿಲ್ಲೆಯ ಇಂಡಿ ತಾಲೂಕಿನ ಮರಗೂರ ಬಳಿಯ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಎದುರು ರೈತರು ಧರಣಿ ಮಾಡುತ್ತಿದ್ದರು. ಆದರೆ ಕಾರ್ಖಾನೆಯ ಅಧ್ಯಕ್ಷರೂ ಆಗಿರುವ ಸ್ಥಳೀಯ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ಅಲ್ಲಿಗೆ ಅಗಮಿಸಿದ್ದರು. ಈ ವೇಳೆ ಧರಣಿ ಮಾಡುವವರು ನಿಜವಾದ ರೈತರಲ್ಲ, ರೈತರು ಯಾರು, ಯಾರು ರೈತರಲ್ಲ ಎನ್ನುವುದು ನನಗೆ ಗೊತ್ತಿದೆ. ಪ್ರತಿಭಟನೆ ನಿರತರನ್ನ ಹೇಗೆ ಎದ್ದು ಕಳಿಸಬೇಕು ಎನ್ನುವುದು ಗೊತ್ತಿದೆ ಎಂದಿದ್ದರು. ಆದರೆ ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್​ ಶಾಸಕರೇ ಕಣ್ಣೀರು ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us