/newsfirstlive-kannada/media/media_files/2025/11/09/anupama-parameshwaran-2025-11-09-21-49-50.jpg)
ಸಾಮಾಜಿಕ ಜಾಲತಾಣಗಳು ಕೆಲ ಪುಂಡ ಪೋಕರಿಗಳ ಪುಂಡಾಟದ ತಾಟವಾಗಿವೆ. ಅಶ್ಲೀಲ ಮೆಸೇಜ್.. ಕೆಟ್ಟ ಕಮೆಂಟ್ ಹಾಕಿಕೊಂಡೇ ಕಮೆಂಟಾಸುರರು ಅಟ್ಟಹಾಸ ಮೆರೆಯುತ್ತಿದ್ದಾರೆ. ಕಾಂತಾರದ ಕನಕವತಿಗೆ ಕಾಡಿದ್ದ ಸೋಶಿಯಲ್ ಮೀಡಿಯಾ ಕಿರಾತಕರು ಇದೀಗ ಮತ್ತೊಬ್ಬ ನಟಿಯ ಬೆನ್ನುಬಿದ್ದಿದ್ದಾರೆ. ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್ ಅವರ ಫೋಟೋ ಮಾರ್ಫ್ ಮಾಡಿ ಕಿರುಕುಳ ನೀಡಿದ್ದಾರೆ.
ಅನುಪಮಾ ಪರಮೇಶ್ವರನ್.. ಬಹುಭಾಷಾ ನಟಿ.. ನಟಸಾರ್ವಭೌಮನ ಸುಂದರಿ.. ಆದ್ರೀಗ ಈ ನಟಿಗೆ ಸೋಶಿಯಲ್ ಮೀಡಿಯಾದಿಂದ ಟೆನ್ಶನ್ ಹೆಚ್ಚಾಗಿದೆ. ಜಾಲತಾಣಗಳ ಜರಾಸಂಧರು ಅನುಪಮಾಗೆ ಇನ್ನಿಲ್ಲದ ಕಿರುಕುಳ ನೀಡಿದ್ದಾರೆ. ಸೋಷಿಯಲ್ ಮೀಡಿಯಾ ಶೂರರ ಅಟ್ಟಹಾಸ ಮಿತಿ ಮೀರಿರೋದನ್ನ ನಟಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: 3,500 ರೂಪಾಯಿಗಾಗಿ ಮುಧೋಳ ರೈತರು ಪಟ್ಟು.. ಸಕ್ಕರೆ ಕಾರ್ಖಾನೆಗಳಿಗೆ CM ವಾರ್ನ್​..!
/filters:format(webp)/newsfirstlive-kannada/media/media_files/2025/11/09/anupama-parameshwaran-1-2025-11-09-21-54-03.jpg)
ಯುವತಿಯಿಂದಲೇ ನಟಿಗೆ ಕಿರುಕುಳ, ಅವಹೇಳನಕಾರಿ ಪೋಸ್ಟ್
ಕಾಂತಾರ ಕನಕವತಿ, ನಟಿ ರುಕ್ಮಿಣಿ ವಸಂತ್‌ಗೆ ಸೈಬರ್ ಕಳ್ಳರ ಕಾಟ ಕೊಟ್ಟಿದ್ರು. ರುಕ್ಮಿಣಿ ಹೆಸರಿನಲ್ಲಿ ಹಲವರಿಗೆ ವ್ಯಕ್ತಿಯೊಬ್ಬ ಕರೆ ಮತ್ತು ಮೆಸೇಜ್ ಮಾಡಿರೋದು ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್‌ಗೆ ಸೋಶಿಯಲ್ ಮೀಡಿಯಾ ಮೂಲಕ ಕಿರುಕುಳ ಕೊಟ್ಟಿರೋ ವಿಚಾರ ಬೆಳಕಿಗೆ ಬಂದಿದೆ. ಅನುಪಮಾರ ಫೋಟೋ ಮಾರ್ಫ್ ಮಾಡಿ ಫೇಕ್ ಅಕೌಂಟ್‌ನಲ್ಲಿ ಮಾನಹಾನಿ ಪೋಸ್ಟ್ ಹಾಕಿರೋದನ್ನ ಅವರೇ ಹೇಳಿಕೊಂಡಿದ್ದಾರೆ.
22 ವರ್ಷದ ಯುವತಿಯಿಂದ ಪೋಸ್ಟ್.. ಸೈಬರ್ ಠಾಣೆಗೆ ದೂರು
ಅನುಪಮಾ ಪರಮೇಶ್ವರನ್‌ಗೆ ಸೋಶಿಯಲ್ ಮೀಡಿಯಾ ಮೂಲಕ ಕಾಡಿದ್ದು ಪುರುಷರಲ್ಲ.. 22 ವರ್ಷದ ಯುವತಿ.. ನಟಿಯ ಮಾನಹರಣಕ್ಕೆ ಈಕೆ ಮಾಡಿರೋದು ಒಂದೊಂದಲ್ಲ.
ಯುವತಿಯಿಂದಲೇ ಕಿರುಕುಳ!
- ಜಾಲತಾಣದಲ್ಲಿ ಹಲವು ಅಕೌಂಟ್​ಗಳನ್ನ ತೆರೆದು ಯುವತಿಯಿಂದ ಕೃತ್ಯ
- ಎಲ್ಲಾ ಅಕೌಂಟ್​ನಲ್ಲೂ ಅನುಪಮಾ ಬಗ್ಗೆ ಅವಹೇಳನ, ಸುಳ್ಳು ಪೋಸ್ಟ್
- ನಟಿ ಅನುಪಮಾ ಫೋಟೋಗಳನ್ನ ಮಾರ್ಫ್ ಮಾಡಿ ಕೆಟ್ಟದಾಗಿ ಬಳಕೆ
- ಸುಳ್ಳು ಪೋಸ್ಟ್‌ಗಳ ಮಾಡಿ ನಟಿಯ ಕುಟುಂಬಸ್ಥರಿಗೆ, ಗೆಳೆಯರಿಗೆ ಟ್ಯಾಗ್
- ಕೇರಳ ಸೈಬರ್ ಕ್ರೈಂ ಪೊಲೀಸರಿಗೆ ಅನುಪಮಾ ಪರಮೇಶ್ವರನ್ ದೂರು
ಸದ್ಯ ಅನುಪಮಾ ನೀಡಿರೋ ದೂರನ್ನ ಆಧರಿಸಿ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಈ ರೀತಿಯ ಕುಕೃತ್ಯ ಮಾಡೋರು ಯುವತಿಯೇ ಆಗಿರಲಿ.. ಯುವಕರೇ ಆಗಿರಲಿ.. ಇನ್ನೊಬ್ಬರ ಮಾನಹರಣ ಮಾಡುವ ಸೋಶಿಯಲ್ ಮೀಡಿಯಾ ಶೂರರಿಗೆ ಪೊಲೀಸರು ತಕ್ಕ ಪಾಠ ಕಲಿಸಬೇಕಿದೆ.
ಇದನ್ನೂ ಓದಿ:ಸಂಘ ಸಂದೇಶ! ‘ಮುಸ್ಲಿಮರು, ಕ್ರಿಶ್ಚಿಯನ್ನರೂ ಸಂಘ ಸೇರಬಹುದು, ಆದರೆ’..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us