/newsfirstlive-kannada/media/media_files/2025/11/09/farmer-protest-4-2025-11-09-20-04-05.jpg)
ರೈತರ ಹೋರಾಟದಲ್ಲೇ ಗೊಂದಲ ಶುರುವಾಗಿದೆ. ಒಂದ್ಕಡೆ ಸರ್ಕಾರ ಒಂದು ಟನ್ ಕಬ್ಬಿಗೆ 3,300 ರೂಪಾಯಿ ಬೆಂಬಲ ಬೆಲೆ ಘೋಷಿಸಿದ್ರೂ ಬಾಗಲಕೋಟೆಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಮತ್ತೊಂದ್ಕಡೆ ಬೆಳಗಾವಿಯಲ್ಲಿ ಭರದ ಕಟಾವು ಕಾರ್ಯ ಶುರುವಾಗಿದೆ. ಇದೇ ವೇಳೆ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಸಿಎಂ ಎಚ್ಚರಿಕೆ ಕೊಟ್ಟಿದ್ದಾರೆ.
/filters:format(webp)/newsfirstlive-kannada/media/media_files/2025/11/08/sugarcane_farmers_protest_bagalkote-2025-11-08-07-35-19.jpg)
3,500 ರೂಪಾಯಿಗಾಗಿ ಪಟ್ಟು ಹಿಡಿದು ಮುಧೋಳ ರೈತರ ಪ್ರತಿಭಟನೆ
ಸರ್ಕಾರ ಟನ್ ಕಬ್ಬಿಗೆ 3,300 ಘೋಷಿಸಿದ್ರೂ ರೈತರ ಆಕ್ರೋಶ ಆರಿಲ್ಲ. ಒಂದು ಟನ್ ಕಬ್ಬಿಗೆ 3,500 ರೂಪಾಯಿ ಬೇಕೆ ಬೇಕೆಂದು ಬಾಗಲಕೋಟೆಯ ಮುಧೋಳ ರೈತರು ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದ್ರು. ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ಮಾಡಿ ಬೀದಿಯಲ್ಲೇ ಅಡುಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ರು. ಪ್ರತಿಭಟನೆಯಲ್ಲಿ ರಾಜ್ಯ ರೈತ ಮುಖಂಡ ಬಡಗಲಪುರ ನಾಗೇಂದ್ರ ಭಾಗಿಯಾಗಿದ್ರು.
ಹೋರಾಟದ ಜೊತೆಗೆ ರೈತರು ಸಿಎಂ ಸಿದ್ದರಾಮಯ್ಯ ಭೇಟಿಯಾಗಲು ನಿರ್ಧರಿಸಿದ್ದಾರೆ. ಸರ್ಕಾರ ಘೋಷಿಸಿದ ಬೆಲೆ ಗೊಂದಲದಿಂದ ಕೂಡಿದ್ದು ಮತ್ತೆ ಪರಿಶೀಲಿಸಬೇಕು. ಇನ್ನೆರಡು ದಿನದಲ್ಲಿ ಸಿಎಂ ಭೇಟಿ ಮಾಡಿ ರೈತರ ಬೇಡಿಕೆ ಬಗ್ಗೆ ಮನವರಿಕೆ ಮಾಡುತ್ತೇವೆ ಎಂದು ಬಡಗಲಪುರ ನಾಗೇಂದ್ರ ಹೇಳಿದ್ದಾರೆ.
ಸರ್ಕಾರದ ದರಕ್ಕೆ ಒಪ್ಪಿ ಕಾರ್ಖಾನೆ ಆರಂಭಕ್ಕೆ ಮಾಲೀಕರ ನಿರ್ಧಾರ
ಭಾರೀ ಚರ್ಚೆ, ವಾದ ಪ್ರತಿವಾದದ ಬಳಿಕ ಕೊನೆಗೂ ಸಕ್ಕರೆ ಕಾರ್ಖಾನೆ ಮಾಲೀಕರು ತಮ್ಮ ಕಾರ್ಖಾನೆ ಶಟರ್ ತೆರೆದಿದ್ದಾರೆ. ಬಾಗಲಕೋಟೆಯ ನವನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಎಸ್​ಪಿ ಸಿದ್ದಾರ್ಥ ನೇತೃತ್ವದಲ್ಲಿ ಮಾಲೀಕರ ಸಭೆ ನಡೆಯಿತು. ಸಭೆಯಲ್ಲಿ ಸರ್ಕಾರದ ದರ ಒಪ್ಪಿ ಕಾರ್ಖಾನೆ ಆರಂಭಿಸಲು ಮಾಲೀಕರು ನಿರ್ಧರಿಸಿದ್ದಾರೆ. ಸರಕಾರದ ಆದೇಶದ ಪ್ರಕಾರ ನಾವು ಬಿಲ್ ಕೊಡಲು ಒಪ್ಪಿದ್ದೇವೆ. ಸರಕಾರದ ಆದೇಶವನ್ನು ಅಕ್ಷರಶಃ ಒಪ್ಪುತ್ತೇವೆ ಅಂತ ಮಾಲೀಕರು ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/10/24/cm-siddu-and-mb-patil-n-dks-2025-10-24-17-52-19.jpg)
ಇದೇ ವೇಳೆ ಸಕ್ಕರೆ ಕಾರ್ಖಾನೆಗಳು ನಿಗದಿತ ಬೆಲೆ ಕೊಡದಿದ್ರೆ ಕ್ರಮ ಕೈಗೊಳ್ಳುತ್ತೇವೆಂದು ಸಿಎಂ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ. ಇತ್ತ ಮೆಕ್ಕೆಜೋಳ ಬೆಂಬಲ ಬೆಲೆಗೆ ಆಗ್ರಹಿಸಿದಕ್ಕೆ ಸಿಎಂ ಕೇಂದ್ರದತ್ತ ಬೊಟ್ಟು ಮಾಡಿದ್ರು. 11 ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದ್ದು ಎಲ್ಲರಿಗೂ ಪರಿಹಾರ ಕೊಡ್ತೇವೆ ಎಂದಿದ್ದಾರೆ.
ಇತ್ತ ಒಂದ್ಕಡೆ ಹೋರಾಟ ಮುಂದುವರೆದಿದ್ರೆ ಮತ್ತೊಂದ್ಕಡೆ ಬೆಳಗಾವಿಯಲ್ಲಿ ಕಬ್ಬು ನುರಿಯುವ ಕಾರ್ಯ ಭರದಿಂದ ಸಾಗಿದೆ. ಕಬ್ಬಿನ ಹಂಗಾಮು ಆರಂಭವಾದ 20 ದಿನ ತಡವಾಗಿ ಕಬ್ಬು ನುರಿಸಲು ಶುರುಮಾಡಲಾಗಿದೆ. ದರ ನಿಗದಿಗಾಗಿ ಶುರುವಾದ ಕಬ್ಬು ಬೆಳೆಗಾರರ ಪ್ರತಿಭಟನೆ ನಿನ್ನೆ ವಾಪಾಸ್ ಹಿನ್ನೆಲೆ ಇಂದಿನಿಂದ ಸಕ್ಕರೆ ಕಾರ್ಖಾನೆಗಳು ಆರಂಭವಾಗಿವೆ. ಸರ್ಕಾರ 3,300 ದರ ನಿಗದಿ ಮಾಡ್ತಿದ್ದಂತೆ ಕಬ್ಬು ಕಟಾವು ಚುರುಕು ಪಡೆದಿದೆ.
ಇದನ್ನೂ ಓದಿ: ಈತ ಟಿ-20ಯಲ್ಲಿ ಡೇಂಜರಸ್ ಬ್ಯಾಟರ್.. ಡೇವಿಡ್, ಸೂರ್ಯನನ್ನೂ ಮೀರಿಸಿದ ಭಲೇ ಆಟಗಾರ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us