/newsfirstlive-kannada/media/media_files/2025/11/09/mohan-bhaghavath-2025-11-09-21-13-14.jpg)
ನೂರನೇ ವಸಂತ ಪೂರೈಸಿರೋ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಕೆಲವರಲ್ಲಿ ನೂರೆಂಟು ಗೊಂದಲಗಳಿವೆ. ಈ ಗೊಂದಲಗಳಿಗೆಲ್ಲಾ ತೆರೆ ಎಳೆಯೋ ಕೆಲಸ ಇವತ್ತು ಆಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾರಥಿ ಡಾ.ಮೋಹನ್ ಭಾಗವತ್ ಸಂಘದ ಬಗೆಗಿನ ಹಲವು ಯಕ್ಷ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಕೆಲ ಇಂಟ್ರೆಸ್ಟಿಂಗ್​ ವಿಚಾರಗಳನ್ನ ಸಹ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: 3,500 ರೂಪಾಯಿಗಾಗಿ ಮುಧೋಳ ರೈತರು ಪಟ್ಟು.. ಸಕ್ಕರೆ ಕಾರ್ಖಾನೆಗಳಿಗೆ CM ವಾರ್ನ್​..!
ರಾಷ್ಟ್ರೀಯ ಸ್ವಯಂ ಸೇವಕ ಸಂಘ.. ನೂರನೇ ವಸಂತ ಪೂರೈಸಿರೋ ಸಂಭ್ರಮದಲ್ಲಿರೋ ಸಂಘದ ಬಗ್ಗೆ ಕೆಲವರಿಗೆ ಹಲವು ಗೊಂದಲಗಳಿವೆ.. ಸದ್ಯ ಆರ್​ಎಸ್​ಎಸ್​ ಬಗೆಗಿನ ಹಲವು ಪ್ರಶ್ನೆಗಳಿಗೆ ಬೆಂಗಳೂರಿನ ಹೊಸಕೆರೆಹಳ್ಳಿ ಖಾಸಗಿ ಕಾಲೇಜು ಸಭಾಂಗಣದಲ್ಲಿ ನಡೆದ ಸಂವಾದದಲ್ಲಿ ಮೋಹನ್ ಭಾಗವತ್​ ಉತ್ತರ ನೀಡಿದ್ದಾರೆ.
RSS ನೋಂದಣಿ ಬಗ್ಗೆ ಮೋಹನ್ ಭಾಗವತ್ ಸ್ಪಷ್ಟನೆ
1925ರಲ್ಲಿ ಜನ್ಮತಾಳಿದ ಆರ್‌ಎಸ್‌ಎಸ್ ಇನ್ನೂ ಯಾಕೆ ನೋಂದಣಿ ಆಗಿಲ್ಲ ಅಂತ ಮೋಹನ್ ಭಾಗವತ್ ಉತ್ತರಿಸಿದ್ದಾರೆ. ಬ್ರಿಟೀಷರ ಕೈಯಲ್ಲಿ ನಾವು ಆರ್‌ಎಸ್‌ಎಸ್ ನೋಂದಣಿ ಮಾಡಿಸಬೇಕಿತ್ತಾ ಅಂತ ವಿರೋಧಿಗಳಿಗೆ ಚಾಟಿ ಬೀಸಿದ್ದಾರೆ.
ಆರ್‌ಎಸ್‌ಎಸ್ 1925ರಲ್ಲಿ ಸ್ಥಾಪನೆಯಾಯಿತು. ಆಗ ಭಾರತವನ್ನು ಬ್ರಿಟೀಷರು ಆಳುತ್ತಿದ್ದರು. ನಾವು ಬ್ರಿಟೀಷ್ ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಬೇಕಿತ್ತು ಎಂದು ನೀವು ನಿರೀಕ್ಷಿಸುತ್ತೀರಾ?. ನಮ್ಮ ಹೋರಾಟ ಬ್ರಿಟೀಷರ ವಿರುದ್ಧ ಇತ್ತು. ದೇಶಕ್ಕೆ ಸ್ವಾತಂತ್ರ ಬಂದ ನಂತರ, ಸಂಘಗಳನ್ನು ನೋಂದಣಿ ಮಾಡಬೇಕೆಂದು ಭಾರತ ಸರ್ಕಾರ ಕಡ್ಡಾಯಗೊಳಿಸಲಿಲ್ಲ. ನಮ್ಮನ್ನು ಸಾಮಾನ್ಯ ನಂಬಿಕೆಗಳನ್ನು ಹಂಚಿಕೊಳ್ಳುವ ಮತ್ತು ಸ್ವಯಂಪ್ರೇರಣೆಯಿಂದ ಒಟ್ಟಾಗಿ ಕೆಲಸ ಮಾಡುವ ಜನರ ಗುಂಪು ಎಂದು ವರ್ಗೀಕರಿಸಲಾಗಿದೆ ಮತ್ತು ನಮ್ಮದು ಮಾನ್ಯತೆ ಪಡೆದ ಸಂಸ್ಥೆ.
ಇಡೀ ಹಿಂದೂ ಸಮಾಜವನ್ನು ಒಗ್ಗೂಡಿಸಲು, ಸಂಘಟಿಸಲು, ಗುಣಗಳನ್ನು ನೀಡಲು ನಾವು ಬಯಸುತ್ತೇವೆ, ಇದರಿಂದ ಅವರು ಸಮೃದ್ಧ ಮತ್ತು ಬಲವಾದ ಭಾರತವನ್ನು ರಚಿಸುತ್ತಾರೆ, ಅದು ಜಗತ್ತಿಗೆ ಧರ್ಮ ಜ್ಞಾನವನ್ನು ನೀಡುತ್ತದೆ. ಇದರಿಂದ ಜಗತ್ತು ಸಂತೋಷ, ಆನಂದ ಮತ್ತು ಶಾಂತಿಯುತವಾಗುತ್ತದೆ. ಈ ಕಾರ್ಯದ ಭಾಗವು ಇಡೀ ಸಮಾಜ, ಇಡೀ ರಾಷ್ಟ್ರದಿಂದ ನಡೆಸಲ್ಪಡುತ್ತದೆ. ಅದಕ್ಕಾಗಿ ಹಿಂದೂ ಸಮಾಜವನ್ನು ಸಿದ್ಧಪಡಿಸುತ್ತಿದ್ದೇವೆ. ನಮ್ಮದು ಒಂದೇ ದೃಷ್ಟಿ, ಏಕ ದೃಷ್ಟಿ.. ನಾವು ಆ ದೃಷ್ಟಿಯನ್ನು ಪೂರೈಸಿದ ನಂತರ, ನಾವು ಬೇರೆ ಏನನ್ನೂ ಮಾಡಲು ಬಯಸುವುದಿಲ್ಲ. ಇಡೀ ಹಿಂದೂ ಸಮಾಜವನ್ನು ಸಂಘಟಿಸುವುದು ನಮ್ಮ ಕಾರ್ಯವಾಗಿದೆ. ನಾವು ಅದನ್ನು ಮುಗಿಸುತ್ತೇವೆ ಮತ್ತು ಸಂಘಟಿತ ಸಮಾಜವು ಉಳಿದದ್ದನ್ನು ಮಾಡುತ್ತದೆ. ನಾವು ಆ ಸಮಾಜದಲ್ಲಿ ಸೇರಿದ್ದೇವೆ, ಆದ್ದರಿಂದ ನಾವು ಅದನ್ನು ಅನುಸರಿಸುತ್ತೇವೆ.. ಆದರೆ ನಮ್ಮ ಧ್ಯೇಯ, ನಮ್ಮ ದೃಷ್ಟಿ ಸಂಘಟಿತ, ಬಲಿಷ್ಠ ಹಿಂದೂ ಸಮಾಜ.
ಮೋಹನ್ ಭಾಗವತ್, RSS ಮುಖ್ಯಸ್ಥ
ಸಂಘದ ‘ಹಿಂದೂ ರಾಷ್ಟ್ರ’ ಅನ್ನೋ ನಿಲುವು ಎಂದಿಗೂ ಬದಲಾಗಲ್ಲ!
RSS​ ಮುಖ್ಯ ಧ್ಯೇಯ ವಾಕ್ಯವೇ ಹಿಂದೂ ರಾಷ್ಟ್ರ ಎಂಬ ಘೋಷ.. ಇದು ಎಂದು ಬದಲಾಗಲ್ಲ ಅಂತ RSS​ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ. ಬಲಿಷ್ಠ ಭಾರತ ಕಟ್ಟೋದೇ ನಮ್ಮ ಗುರಿ ಅಂತ ಭಾಗವತ್​ ಹೇಳಿದ್ದಾರೆ.
ಸಂಘದಲ್ಲಿ ಮುಸ್ಲಿಂ, ಕ್ರೈಸ್ತ, ಬ್ರಾಹ್ಮಣ, ಶೈವ ಪಂಥಗಳಿಗೆ ಅವಕಾಶ ಇಲ್ಲ. ಹಿಂದೂಗಳಿಗೆ ಮಾತ್ರ ಅವಕಾಶ ಇದೆ. ಆದ್ರೆ ಶಾಖೆಗೆ ಬರೋರು ತಮ್ಮ ಧರ್ಮವನ್ನ ಹೊರಗಿಟ್ಟು ಬರಬೇಕಾಗುತ್ತೆ ಅಂತ ಮೋಹನ್ ಭಾಗವತ್ ತಿಳಿಸಿದ್ದಾರೆ..
ಸಂಘದಲ್ಲಿ ಬ್ರಾಹ್ಮಣರಿಗೆ ಪ್ರವೇಶವಿಲ್ಲ. ಸಂಘದಲ್ಲಿ ಬೇರೆ ಯಾವುದೇ ಜಾತಿಗೆ ಅವಕಾಶವಿಲ್ಲ. ಯಾವುದೇ ಮುಸಲ್ಮಾನರಿಗೆ ಅವಕಾಶವಿಲ್ಲ. ಕ್ರಿಶ್ಚಿಯನ್ನರಿಗೆ ಅವಕಾಶವಿಲ್ಲ, ಶೈವ, ಶಾಕ್ತರಿಗೆ ಅವಕಾಧವಿಲ್ಲ.. ಹಿಂದೂಗಳಿಗೆ ಮಾತ್ರ ಅವಕಾಶ.. ಆದ್ದರಿಂದ ವಿವಿಧ ಪಂಗಡದ ಜನರು, ಮುಸ್ಲಿಮರು, ಕ್ರಿಶ್ಚಿಯನ್ನರು, ಯಾವುದೇ ಪಂಗಡದವರು, ಅವರು ಸಂಘಕ್ಕೆ ಬರಬಹುದು.. ಆದರೆ ನಿಮ್ಮ ಪ್ರತ್ಯೇಕತೆಯನ್ನು ದೂರವಿಡಿ.. ನಿಮ್ಮ ವಿಶೇಷತೆ ಸ್ವಾಗತಾರ್ಹ.. ಆದರೆ ನೀವು ಶಾಕೆ ಒಳಗೆ ಬಂದಾಗ, ನೀವು ಈ ಹಿಂದೂ ಆತ್ಮಹತ್ಯೆಯ ಸದಸ್ಯ ಬರ್ತ್ ಮಾತೆಯ ಮಗನಾಗಿ ಬರುತ್ತೀರಿ.
ಸಂಘ ಯಾವುದೇ ರಾಜಕೀಯ ಪಕ್ಷದ ಜೊತೆಗೆ ಗುರುತಿಸಿಕೊಂಡಿಲ್ಲ. ರಾಜಕೀಯದಿಂದ ನಾವು ಹೊರಗಡೆ ಇದೀವಿ.. ಸಂಘ ರಾಮ ಮಂದಿರ ನಿರ್ಮಾಣ ರಾಮ ಮಂದಿರ ನಿರ್ಮಾಣದಲ್ಲಿ ಭಾಗಿಯಾಗಿತ್ತು.. ಬಿಜೆಪಿ ರಾಮ ಮಂದಿರ ನಿರ್ಮಾಣದ ಕೆಲಸ ಮುಂಚೂಣಿಯಲ್ಲಿತ್ತು.. ಒಂದ್ ವೇಳೆ ಕಾಂಗ್ರೆಸ್ ಪಕ್ಷ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ರೆ, ಆಗ ಸಂಘ ಕಾಂಗ್ರೆಸ್ ಜೊತೆಗೆ ನಿಲ್ಲುತ್ತಿತ್ತು.
ಮೋಹನ್ ಭಾಗವತ್, RSS ಮುಖ್ಯಸ್ಥ
ಯಾವುದೇ ರಾಜಕೀಯ ಪಕ್ಷಗಳ ಜೊತೆ ಆರ್​ಎಸ್​ಎಸ್​ ಯಾಕೆ ಗುರುತಿಸಿಕೊಂಡಿಲ್ಲ ಎಂಭ ಪ್ರಶ್ನೆಗೂ ಮೋಹನ್ ಭಾಗವತ್​ ಉತ್ತರಿಸಿದ್ದಾರೆ.
ಮೋಹನ್ ಭಾಗವತ್​ ಹೇಳಿಕೆಗೆ ಸಿದ್ದರಾಮಯ್ಯ ಸಿಡಿಮಿಡಿ
ಆರ್​ಎಸ್​ಎಸ್​ ನೋಂದಣಿ ಯಾಕೆ ಮಾಡ್ಕೊಂಡಿಲ್ಲ ಎಂಬ ಮೋಹನ್ ಭಾಗವತ್​ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ.. ಭಾಗವತ್ ಹೇಳಿದ್ದಕ್ಕೆಲ್ಲ ನಾವು ಉತ್ತರ ಕೊಡಕ್ಕೆ ಆಗಲ್ಲ ಅಂತ ಕಿಡಿಕಾರಿದ್ದಾರೆ.
ಇದನ್ನೂ ಓದಿ:ಈತ ಟಿ-20ಯಲ್ಲಿ ಡೇಂಜರಸ್ ಬ್ಯಾಟರ್.. ಡೇವಿಡ್, ಸೂರ್ಯನನ್ನೂ ಮೀರಿಸಿದ ಭಲೇ ಆಟಗಾರ..!
ಒಟ್ನಲ್ಲಿ ಆರ್​ಎಸ್​ಸ್​ ಬಗೆಗೆ ಉತ್ತರ ಸಿಗದ ಅದೆಷ್ಟೋ ಪ್ರಶ್ನೆಗಳಿಗೆ ಡಾ. ಮೋಹನ್ ಭಾಗವತ್​ ಇಂದು ಉತ್ತರ ನೀಡೋ ಕೆಲಸಮಾಡಿದ್ದಾರೆ.. ಆ ಉತ್ತರವೂ ಸದ್ಯ ಆರ್​ಎಸ್​ಎಸ್​ ವಿರೋಧಿಗಳ ಪಾಲಿಗೆ ಅಸ್ತ್ರವಾಗಿದ್ದು ಇನ್ನೂ ಈ ಬಗ್ಗೆ ಯಾಱರು ಯಾವ್ಯಾವ ರಾಗ ತೆಗಿತಾರೆ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us