/newsfirstlive-kannada/media/media_files/2025/11/10/parappana-agrahara-jail-1-2025-11-10-08-04-48.jpg)
ಕಾರಾಗೃಹ.. ಅತಿಥಿ ಗೃಹದಂತೆ ಕಾಣಿಸ್ತಿದೆ.. ಕ್ರೈಂ ಲೋಕದ ಪರಮ ಪಾಪಿಗಳ ಜಗತ್ತು, ಯಾವ ಫೈವ್​​​ ಸ್ಟಾರ್​​​ ಹೋಟೆಲ್​​ಗೂ ಕಮ್ಮಿ ಇಲ್ಲ.. ನಿತ್ಯವೂ ಎಪಿಸೋಡ್​​​ ರೀತಿ ಹೊರ ಬರ್ತಿರುವ ದೃಶ್ಯಗಳು, ನಾಗರಿಕ ಪ್ರಪಂಚವನ್ನ ಬೆಚ್ಚಿ ಬೀಳಿಸ್ತಿದೆ.. ಸುಖದ ಸುಪ್ಪತ್ತಿಗೆಯ ಜೈಲಿನ ದೃಶ್ಯಗಳು ಜನರನ್ನ ಆಘಾತಕ್ಕೆ ತಳ್ತಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ..
ಫೈವ್​ ಸ್ಟಾರ್​​ ಅಲ್ಲ, ಇದು ಅದರಪ್ಪ, ಹೆಸರು ಪರಪ್ಪ!
ನಾನ್​ವೆಜ್​ ಊಟ, ಸೈಡ್​​ನಲ್ಲಿ ಎಣ್ಣೆ.. ಫುಲ್​ ಮೋಜು-ಮಸ್ತಿ.. ಇದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಮನ್ ಆದಂತಿದೆ. ಬೆಂಗಳೂರಿನ ಸೆಂಟ್ರಲ್​​ ಜೈಲಿನೊಳಗಿನ ಪಬ್​​ ಕಂ ರೆಸ್ಟೋರೆಂಟ್​​​.. ಡ್ರಮ್​​​, ತಟ್ಟೆಗಳೇ ಕೈದಿಗಳಿಗೆ ಇಲ್ಲಿ ಮ್ಯೂಸಿಕ್​​ ಬ್ಯಾಂಡ್​​.. ಮೋಸ್ಟ್​​​ಲೀ ಅದು ಸಿಗುತ್ತೋ ಏನೋ? ಯಾರಿಗ್​​​ ಗೊತ್ತು.. ಸಿಕ್ಕರೂ ಸಿಗಬಹುದು.. ಅಂದ್ಹಾಗೆ, ಜೈಲಿನ ಕರ್ಮಕಾಂಡ ಬಗೆದಷ್ಟು ಬಯಲಾಗ್ತಿದೆ.. ಗುಂಡಿಯಲ್ಲಿ ಹೋದ ಮಾನಕ್ಕಿಂತ ದೊಡ್ಡದಾಗಿ ಬೆಳಕಿಂಡಿ ರೀತಿ ಕಾಣಿಸ್ತಿದೆ.
ಇದನ್ನೂ ಓದಿ: ರುಕ್ಮಿಣಿ ವಸಂತ್ ಬಳಿಕ ಅನುಪಮಾಗೆ ‘ಜಾಲತಾಣ’ದ ಟೆನ್ಶನ್..! ಅಸಲಿಗೆ ಆಗಿದ್ದೇನು?
ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಜೈಲುಗಳು, ಸುಧಾರಣಾ ಕೇಂದ್ರಗಳು ಆಗಬೇಕಿತ್ತು.. ಈ ದೃಶ್ಯಗಳನ್ನ ನೋಡಿದ್ರೆ ಯಾರಿಗಾದ್ರೂ ಹಾಗನಿಸುತ್ತಾ? ಫುಲ್ ಟೈಟ್ ಆಗಿ ಡ್ರಮ್, ತಟ್ಟೆ ಲೋಟಗಳನ್ನೇ ಬಡಿದು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ದೇಶದಲ್ಲೇ ಕರ್ನಾಟಕದ ಕಾರಾಗೃಹಗಳ ವಾಸ ಸ್ವರ್ಗಲೋಕದಂತೆ ಕಾಣಿಸ್ತಿದೆ. ಜಾಗತಿಕ ಮಟ್ಟದಲ್ಲಿ ರಾಜ್ಯದ ಮಾನವನ್ನ ಹರಾಜಿಗಿಟ್ಟಿದೆ..
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಅದೇನೋ ಅಂತಾರಲ್ಲ ಅಡಿಕೆಗೆ ಹೋದ ಮಾನ ಆನೆ ಕೊಟ್ರೂ ಬರೋದಿಲ್ವಂತೆ.. ಬೀದಿಗಳಲ್ಲಿ ಮಾನ ಹೋದ ಬಳಿಕ ಪರಪ್ಪನ ಅಗ್ರಹಾರ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ. ಜೈಲಿನಲ್ಲಿ ನಿಷೇಧ ಇದ್ರೂ ಮೊಬೈಲ್ ಬಳಕೆ ಮಾಡಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ.. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಮುಂದಾಗಿದೆ.. ಎನ್​ಸಿಆರ್​ ದಾಖಲು ಮಾಡ್ಕೊಂಡ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ಜೈಲಿನಲ್ಲಿ ಮೊಬೈಲ್ ಬಳಸಿದ್ದ ಮೂವರನ್ನ ಬಂಧಿಸಿದೆ..
ಜೈಲಾಧಿಕಾರಿಗಳಿಂದ ರೇಡ್.. ಪತ್ತೆಯಾಗದ ವಸ್ತುಗಳು!
ಎನ್​​ಸಿಆರ್​​​ ದಾಖಲಿಸುವ ಮುನ್ನ ಜೈಲಾಧಿಕಾರಿಗಳು ರೇಡ್​ ಮಾಡಿ ಪರಿಶೀಲನೆ ನಡೆಸಿದ್ದಾರೆ.. ಜೈಲಿನ ಎಲ್ಲಾ ಬ್ಯಾರಕ್​ಗಳಲ್ಲಿ ನೂರು ಮಂದಿ ಜೈಲಿನ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.. ಆದ್ರೆ, ದಾಳಿ ಮಾಡುವ ಮಾಹಿತಿ ಕೆಲ ಸಿಬ್ಬಂದಿಯಿಂದಲೇ ಲೀಕ್ ಆಗಿದ್ದು, ಹುಡುಕಾಟದ ವೇಳೆ ಯಾವುದೇ ವಸ್ತು ಪತ್ತೆಯಾಗಿಲ್ಲ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲಿ ಕೈದಿಗಳ ಲೈಫ್ ಜಿಂಗಾಲಾಲ.. ಯಾಱರು ಹೆಂಗೆಂಗೆ..?
ಸದ್ಯ ಆಂತರಿಕವಾಗಿ ತನಿಖೆ ನಡೆಸಲು ಡಿಐಜಿ ಸೂಚನೆ ನೀಡಿದ್ದಾರೆ.. ಒಟ್ಟಾರೆ, ಜೈಲಿನ ಕರ್ಮಕಾಂಡ ಹೊಸ ಲೋಕವನ್ನ ಬಿಚ್ಚಿಡ್ತಿದೆ.. ಜೈಲಿನ ಬಗ್ಗೆ ಇರುವ ಭಯದ ವಾತಾವರಣ ಕುಸಿಯುವಂತೆ ಮಾಡ್ತಿದೆ.. ಕ್ರೈಂ ಜಗತ್ತಿಗೆ ಹೊಸ ಅತಿಥಿಗಳ ಆಗಮನಕ್ಕೆ ಕುಮ್ಮಕ್ಕು ನೀಡುವಂತಿದೆ.
ಸಿಎಂ ನಿವಾಸಕ್ಕೆ ಮುತ್ತಿಗೆ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರ ಸಂಬಂಧ ಬಿಜೆಪಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದೆ. ಬೆಳಿಗ್ಗೆ 10 ಗಂಟೆಗೆ ವಿಜಯೇಂದ್ರ, ಅಶೋಕ್ ನೇತೃತ್ವದಲ್ಲಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದಾರೆ. ಇದಕ್ಕೂ ಮುನ್ನ ಬೆಳಿಗ್ಗೆ 9:30ಕ್ಕೆ ಕುಮಾರಕೃಪಾ ಅತಿಥಿ ಗೃಹದಿಂದ ಬಿಜೆಪಿ ಱಲಿ ನಡೆಸಲಿದ್ದಾರೆ. ಇದಾದ ಬಳಿಕ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದಾರೆ. ರಾಜಾತಿಥ್ಯಕ್ಕೆ ಕೈದಿಗಳಿಂದ ಸರ್ಕಾರ ಹಣ ವಸೂಲಿ ಅಂತ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬಿಗ್​ಬಾಸ್ ಮನೆಯಿಂದ ಚಂದ್ರಪ್ರಭ ಔಟ್! ಬೇಸರದಲ್ಲಿ ಹೊರ ನಡೆದ ಸ್ಪರ್ಧಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us