ಪರಪ್ಪನ ಅಗ್ರಹಾರ ಜೈಲಲ್ಲಿ ಕೈದಿಗಳ ಲೈಫ್ ಜಿಂಗಾಲಾಲ.. ಯಾಱರು ಹೆಂಗೆಂಗೆ..?

ಜೈಲಂದ್ರೆ ಅಲ್ಲಿ ಅಪರಾಧಿಗಳಿಗೆ ಶಿಕ್ಷೆ ನೀಡಲಾಗುತ್ತದೆ. ಆದ್ರೆ ನಮ್ಮ ರಾಜ್ಯದ ಅತೀ ದೊಡ್ಡ ಜೈಲಲ್ಲಿ ಇದೆಲ್ಲಾ ಉಲ್ಟಾ.. ಇಲ್ಲಿನ ದೃಶ್ಯ ನೋಡಿದ್ರೆ ಜೈಲಾ ಅಥವಾ ಲಾಡ್ಜಾ ಅನ್ನೋ ಗೊಂದಲ ಮೂಡುತ್ತೆ. ಜೈಲಲ್ಲಿ ಶಂಕಿತ ಉಗ್ರ, ಅತ್ಯಾಚಾರಿಗಳು, ಖದೀಮರಿಗೆ ರಾಜಾತಿಥ್ಯ ಕೊಡಲಾಗ್ತಿದೆ.

author-image
Ganesh Kerekuli
parappana agrahara jail
Advertisment

ಜೈಲಂದ್ರೆ ಅಲ್ಲಿ ಅಪರಾಧಿಗಳಿಗೆ ಶಿಕ್ಷೆ ನೀಡಲಾಗುತ್ತದೆ. ಆದ್ರೆ ನಮ್ಮ ರಾಜ್ಯದ ಅತೀ ದೊಡ್ಡ ಜೈಲಲ್ಲಿ ಇದೆಲ್ಲಾ ಉಲ್ಟಾ.. ಇಲ್ಲಿನ ದೃಶ್ಯ ನೋಡಿದ್ರೆ ಜೈಲಾ ಅಥವಾ ಲಾಡ್ಜಾ ಅನ್ನೋ ಗೊಂದಲ ಮೂಡುತ್ತೆ. ಜೈಲಲ್ಲಿ ಶಂಕಿತ ಉಗ್ರ, ಅತ್ಯಾಚಾರಿಗಳು, ಖದೀಮರಿಗೆ ರಾಜಾತಿಥ್ಯ ಕೊಡಲಾಗ್ತಿದೆ. ಪರಪ್ಪನ ಅಗ್ರಹಾರ ಜೈಲಂದ್ರೆ ಕೈದಿಗಳು ಭಯ ಪಡಬೇಕಿಲ್ಲ. ಯಾಕಂದ್ರೆ ದುಡ್ಡು ಕೊಟ್ರೆ ಈ ಜೈಲಲ್ಲಿ ಲೈಪ್ ಜಿಂಗಾಲಾಲ.

ಪರಪ್ಪನ ಅಗ್ರಹಾರ ಜೈಲಲ್ಲಿ ಕೈದಿಗಳ ಲೈಫ್ ಜಿಂಗಾಲಾಲ

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್​ ರಾಜ್ಯ ಸರ್ಕಾರಕ್ಕೆ ಹಾಗೂ ಜೈಲಿನ ಅಧಿಕಾರಿಗಳಿಗೆ ತೀವ್ರವಾಗಿ ಚಳಿ ಬಿಡಿಸಿತ್ತು. ಜೈಲಲ್ಲಿ ಆರೋಪಿ ದರ್ಶನ್ ಹಾಗೂ ಇತರರಿಗೆ ಸಿಗ್ತಿದ್ದ ರಾಜಾತಿಥ್ಯದ ಪೋಟೋ ನೋಡಿ ತರಾಟೆಗೆ ತಗೊಂಡಿತ್ತು. ಇದಾದ ಮೇಲೆ ರಾಜ್ಯದ ಜೈಲುಗಳ ಚಿತ್ರಣ ಬದಲಾಗಿದೆಯಾ? ನೋ ವೇ, ನಾಯಿ ಬಾಲ ಯಾವತ್ತೂ ಡೊಂಕೇ.. ಯಾಕಂದ್ರೆ ರಾಜ್ಯದ ಅತಿದೊಡ್ಡ ಜೈಲುಗಳಲ್ಲಿ ಒಂದಾಗಿರುವ ಪರಪ್ಪನ ಅಗ್ರಹಾರ ಜೈಲು ತೀರಾ ಹದಗೆಟ್ಟಿದೆ. ಕೈದಿಗಳು ಮೊಬೈಲ್ ಬಳಕೆ ಹಾಗೂ ಬಿಂದಾಸ್ ಲೈಫ್ ಎಂಜಾಯ್ ಮಾಡ್ತಿರೋ ವಿಡಿಯೋ ಸಂಚಲನ ಸೃಷ್ಟಿಸಿವೆ.

ಇದನ್ನೂ ಓದಿ: ಟೀಂ ಇಂಡಿಯಾದ ಟಿ-20 ತಂಡದಿಂದ ಸಂಜು ಸ್ಯಾಮ್ಸನ್ ಹೊರಕ್ಕೆ..?

prisoners had smart phone in jail

ಶಂಕಿತ ಐಸಿಸ್ ಉಗ್ರನ ಕೈಯಲ್ಲಿ ಮೊಬೈಲ್‌ ಫೋನ್‌

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿರುವ ಐಸಿಸ್ ಶಂಕಿತ ಉಗ್ರ ಶಕೀಲ್​ಗೆ ರಾಜಾತಿಥ್ಯ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ಐಸಿಸ್​ಗೆ ಮುಸ್ಲಿಂ ಯುವಕರ ನೇಮಕಾತಿ ಮಾಡ್ತಿದ್ದ ಶಕೀಲ್ ಮೊಬೈಲ್ ಬಳಸುತ್ತಿರುವ ವಿಡಿಯೋ ಭಾರೀ ಹಲ್ ಚಲ್ ಸೃಷ್ಟಿಸಿದೆ. 

ಹೆಣ್ಮಕ್ಕಳ ನಿದ್ದೆಗೆಡಿಸಿದ್ದ ವಿಕೃತಕಾಮಿ ಉಮೇಶ್ ರೆಡ್ಡಿ ಜೈಲಲ್ಲಿ ಬಿಂದಾಸ್

ಇನ್ನು ಇವನ ಹೆಸರು ಕೇಳಿದ್ರೆ ಹೆಣ್ಣುಮಕ್ಕಳು ಬೆಚ್ಚಿ ಬೀಳ್ತಿದ್ದ ಅತ್ಯಾಚಾರಿ ಉಮೇಶ್ ರೆಡ್ಡಿಗೂ ರಾಜಾತಿಥ್ಯ ನೀಡಿರುವ ವಿಡಿಯೋಗಳು ವೈರಲ್‌ ಆಗಿದೆ. ವಿಕೃತಕಾಮಿ ಉಮೇಶ್‌ ರೆಡ್ಡಿ ತುಂಬಾ ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಇವನೂ ಕೂಡ ಮೊಬೈಲ್‌ ಬಳಸುವ ಹಾಗೂ ರೂಮ್‌ನಲ್ಲಿ ಟಿವಿ ಇರೋದು ವಿಡಿಯೋದಲ್ಲಿ ದಾಖಲಾಗಿದೆ. 

UMESH REDDY LUXURY LIFE IN JAIL

ರನ್ಯಾ ರಾವ್​ ಗೆಳೆಯ, ತೆಲುಗು ನಟ ತರುಣ್​ಗೆ ಜೈಲಿನಲ್ಲಿ ಬಿಂದಾಸ್ 

ಇನ್ನು ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ರನ್ಯಾ ರಾವ್‌ ಪ್ರಿಯಕರ ತೆಲುಗು ನಟ ತರುಣ್‌ ಕೂಡ ಆರಾಮಾವಾಗಿ ಜೀವನ ಕಳೆಯುತ್ತಿದ್ದಾನೆ. ಮೊಬೈಲ್ ಜೊತೆಗೆ ಆತನ ಸೆಲ್ ನಲ್ಲಿ‌ ಟಿವಿ ಕೂಡ ಇದೆ. 

UMESH REDDY LUXURY LIFE IN JAIL (1)

ಗೃಹ ಇಲಾಖೆ ಸತ್ತು ಹೋಗಿದೆ..

ಇನ್ನು ಈ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಜೈಲು ಅಪರಾಧಿಗಳ ಪಾಲಿನ ಸ್ವರ್ಗ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ಗೃಹ ಇಲಾಖೆ ಸತ್ತೇ ಹೋಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನ ರಾಜಾತಿಥ್ಯ ವಿಡಿಯೋ ವೈರಲ್ ಬೆನ್ನಲ್ಲೇ ಎಡಿಜಿಪಿ ಬಿ.ದಯಾನಂದ್ ವಿಡಿಯೋ ಪರಿಶೀಲನೆಗೆ ಸೂಚಿಸಿದ್ದಾರೆ. ಜೈಲಾಧಿಕಾರಿಗಳ ಬಳಿ ವರದಿ ಕೇಳಿದ್ದಾರೆ. ಒಟ್ಟಾರೆ ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಶಂಕಿತ ಉಗ್ರ, ಅತ್ಯಾಚಾರಿ, ಖದೀಮರಿಗೆ ಮೊಬೈಲ್ ಕೊಟ್ಟು ಜೈಲನ್ನು ಲಾಡ್ಜ್​ ಆಗಿ ಬದಲಿಸಲಾಗಿದೆ. ಆರೋಪಿಗಳಿಗೆ ಮೊಬೈಲ್​ ಹಾಗೂ ಇನ್ನೀತರ ಸೌಲಭ್ಯ ಕೊಡೋದಾದ್ರೆ ಅವರನ್ನ ಜೈಲಿಗೆ ಯಾಕೆ ಹಾಕ್ತೀರಾ? ಜೈಲಂದ್ರೆ ಭಯ ಇರಬೇಕು, ಆದ್ರೆ ಇಲ್ಲಿ ಉಲ್ಟಾ.. ಅಲ್ಲದೇ ಶಂಕಿತ ಉಗ್ರನಿಗೆ ಮೊಬೈಲ್ ಕೊಟ್ರೆ ಅದರಿಂದ ದೇಶದ ಭದ್ರತೆಗೆ ಸವಾಲೊಡ್ಡಿದಂತಲ್ವಾ? ಬಿಡಿಗಾಸಿಗಾಗಿ ಇಂಥ ಹೀನ ಕೆಲಸ ಮಾಡ್ತಿರುವ ಕೆಲ ಕಳ್ಳ ಅಧಿಕಾರಿಗಳನ್ನು ಕೆಲಸದಿಂದಲೇ ವಜಾ ಮಾಡಬೇಕಿದೆ.

ಇದನ್ನೂ ಓದಿ: ಜೈಲಿನಲ್ಲಿ ವಿಕೃತ ಕಾಮಿ ಉಮೇಶ್ ರೆಡ್ಡಿ ಬಳಿ ಮೂರು ಪೋನ್ ಪತ್ತೆ! : ಉಮೇಶ್ ರೆಡ್ಡಿ ಪೋನ್ ನಲ್ಲಿ ಮಾತುಕತೆ ವಿಡಿಯೋ ಬಿಡುಗಡೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Parappana agrahara jail
Advertisment