/newsfirstlive-kannada/media/media_files/2025/11/09/chandraprabha-2025-11-09-22-53-15.jpg)
ಬಿಗ್​​ಬಾಸ್​ ಮನೆಯಿಂದ ಚಂದ್ರಪ್ರಭ ಹೊರಬಿದ್ದಿದ್ದಾರೆ. ಆರು ವಾರಗಳ ಕಾಲ ಬಿಗ್​ಬಾಸ್ ಮನೆಯಲ್ಲಿದ್ದ ಚಂದ್ರಪ್ರಭ, ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು, ಇದೀಗ ಬೇಸರದಿಂದ ಮನೆಯಿಂದ ಹೊರಬಂದಿದ್ದಾರೆ.
ಕಿಚ್ಚ ಸುದೀಪ್ ಅವರೇ ಎಲ್ಲಾ ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ್ದರು. ವಾರದ ಮಧ್ಯೆ ಮನೆಯಿಂದ ಬಂದಿದ್ದ ಲೆಟರ್​ ಪಡೆಯುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಕೆಲವರು ಎಲಿಮಿನೇಷನ್​ನಿಂದ ಪಾರಾಗಿದ್ದರು. ಕೊನೆಯಲ್ಲಿ ಈ ವಾರ ಬಿಗ್ ಬಾಸ್ ಮನೆಯಲ್ಲಿ 10 ಮಂದಿ ನಾಮಿನೇಟ್ ಆಗಿದ್ದರು.
ಅವರಲ್ಲಿ ಚಂದ್ರಪ್ರಭ ಕೂಡ ಒಬ್ಬರಾಗಿದ್ದರು. ಕಾಕ್ರೋಚ್ ಸುಧಿ , ಧ್ರುವಂತ್, ಗಿಲ್ಲಿ ನಟ, ಸೂರಜ್ ಸಿಂಗ್, ಅಶ್ವಿನಿ ಗೌಡ, ಚಂದ್ರಪ್ರಭ, ರಾಶಿಕಾ ಶೆಟ್ಟಿ, ಧನುಷ್, ರಕ್ಷಿತಾ ಶೆಟ್ಟಿ, ಸ್ಪಂದನಾ ಸೋಮಣ್ಣ ಅವರು ನಾಮಿನೇಟ್ ಆಗಿದ್ದರು.
ಕಿಚ್ಚ ಸುದೀಪ್ ಅವರು ವೋಟ್ ಪ್ರಕಾರ, ಒಬ್ಬೊಬ್ಬರನ್ನೇ ಸೇವ್ ಮಾಡುತ್ತ ಬಂದರು. ಕೊನೆಯಲ್ಲಿ ಕಾಕ್ರೋಚ್ ಸುಧೀ, ಚಂದ್ರಪ್ರಭ ಉಳಿದುಕೊಂಡಿದ್ದರು. ಈ ವೇಳೆ ಕಾಕ್ರೋಚ್ ಸುಧಿ ತಮಗೆ ಸಿಕ್ಕಿರುವ ಸ್ಪೆಷಲ್ ಪವರ್ ಬಳಸಿಕೊಂಡು ಸೇವ್ ಆದರು. ಆದರೆ ಕೊನೆಯಲ್ಲಿ ಚಂದ್ರಪ್ರಭ ಮನೆಯಿಂದ ಹೊರ ಬರಬೇಕಾಯಿತು.
ಇದನ್ನೂ ಓದಿ: ಉಗ್ರಂ ಮಂಜು, ಸಂಧ್ಯಾ ಎಂಗೇಜ್ಮೆಂಟ್​.. ವಿಶೇಷವಾದ ಟಾಪ್​- 10 ಫೋಟೋಸ್​.!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us