Advertisment

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ.. ಏನೆಲ್ಲ ಪ್ರತಿಷ್ಠಾಪಿಸಲಾಗಿದೆ ಗೊತ್ತಾ?

ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣವು ಆಗಸ್ಟ್​ 5, 2020 ರಿಂದ ಆರಂಭವಾಯಿತು. ದೇವಾಲಯದ ಎಲ್ಲಾ ವಿಗ್ರಹಗಳ ಪ್ರತಿಷ್ಠಾಪನೆ ಪೂರ್ಣಗೊಂಡಿದೆ ಎಂದು ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

author-image
Ganesh Kerekuli
Ram mandir
Advertisment

ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣವು ಆಗಸ್ಟ್​ 5, 2020 ರಿಂದ ಆರಂಭವಾಯಿತು. ದೇವಾಲಯದ ಎಲ್ಲಾ ವಿಗ್ರಹಗಳ ಪ್ರತಿಷ್ಠಾಪನೆ ಪೂರ್ಣಗೊಂಡಿದೆ ಎಂದು ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. 

Advertisment

ಶ್ರೀ ರಾಮ ಜನ್ಮಭೂಮಿ ದೇವಾಲಯದ ಮುಖ್ಯ ದೇವಾಲಯದ ಜೊತೆಗೆ ಕೋಟೆಯ ಗೋಡೆಯೊಳಗಿನ ಆರು ದೇವಾಲಯಗಳಾದ ಶಿವ, ಗಣೇಶ, ಹನುಮಾನ್, ಸೂರ್ಯ, ತಾಯಿ ಭಗವತಿ, ತಾಯಿ ಅನ್ನಪೂರ್ಣ ಮತ್ತು ಶೇಷಾವತಾರಗಳ ನಿರ್ಮಾಣ ಪೂರ್ಣಗೊಂಡಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಪ್ರಕಾರ, ಅವೆಲ್ಲದರ ಮೇಲೆ ಧ್ವಜಸ್ತಂಭಗಳು ಮತ್ತು ಕಳಶಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ‘ಹೈಕಮಾಂಡ್ ಒಪ್ಪಿದ್ರೆ ನಾನೇ..’ CM ಹೇಳಿಕೆಗೆ ಡಿಕೆಶಿ ರಿಯಾಕ್ಷನ್ ಏನು ಗೊತ್ತಾ..?

ಜೊತೆಗೆ ಸಪ್ತ ಮಂಟಪದ ನಿರ್ಮಾಣ (ಮಹರ್ಷಿ ವಾಲ್ಮೀಕಿ, ವಸಿಷ್ಠ, ವಿಶ್ವಾಮಿತ್ರ, ಅಗಸ್ತ್ಯ, ನಿಷಾದ ರಾಜ, ಶಬರಿ ಮತ್ತು ಋಷಿಯ ಪತ್ನಿ ಅಹಲ್ಯೆಯನ್ನು ಚಿತ್ರಿಸುತ್ತದೆ) ಪೂರ್ಣಗೊಂಡಿದೆ. ಸಂತ ತುಳಸಿದಾಸರ ದೇವಾಲಯವೂ ಪೂರ್ಣಗೊಂಡಿದೆ. ರಣಹದ್ದು ರಾಜ ಜಟಾಯು ಮತ್ತು ಅಳಿಲನ್ನು ಸಹ ಸ್ಥಾಪಿಸಲಾಗಿದೆ. ಸಂದರ್ಶಕರ ಅನುಕೂಲತೆ ಮತ್ತು ವ್ಯವಸ್ಥೆಗಳಿಗೆ ನೇರವಾಗಿ ಸಂಬಂಧಿಸಿದ ಎಲ್ಲಾ ಕೆಲಸಗಳು ಪೂರ್ಣಗೊಂಡಿವೆ ಅಂತಾ ಮಾಹಿತಿ ನೀಡಿದೆ. 

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸೋಮವಾರ ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದಾರೆ. ರಸ್ತೆಗಳಿಗೆ ಕಲ್ಲುಗಳನ್ನು ಹಾಕುವುದು ಮತ್ತು ನೆಲಗಟ್ಟಿ ಮಾಡುವುದು, ವಾತಾವರಣ ಸುಂದರಗೊಳಿಸುವುದು, ಹಸಿರೀಕರಣಗೊಳಿಸುವುದು ಮತ್ತು 10 ಎಕರೆ ಪಂಚವಟಿಯನ್ನು ನಿರ್ಮಿಸುವ ಕೆಲಸಗಳು ವೇಗವಾಗಿ ನಡೆಯುತ್ತಿವೆ ಎಂದು ತಿಳಿಸಲಾಗಿದೆ. ಇದಲ್ಲದೆ, ಮೂರುವರೆ ಕಿಲೋಮೀಟರ್ ಗಡಿ ಗೋಡೆ, ಟ್ರಸ್ಟ್ ಕಚೇರಿ, ಅತಿಥಿ ಗೃಹ ಮತ್ತು ಸಭಾಂಗಣದ ನಿರ್ಮಾಣವೂ ನಡೆಯುತ್ತಿರುವ ಬಗ್ಗೆ ಟ್ರಸ್ಟ್ ಮಾಹಿತಿ ನೀಡಿದೆ.

ಇದನ್ನೂ ಓದಿ: ಲೋಕಾಯುಕ್ತ ಹೆಸರಲ್ಲಿ ಲಕ್ಷ ಲಕ್ಷ ವಸೂಲಿ ದಂಧೆ.. ಗುತ್ತಿಗೆದಾರ ಲಾಕ್ ಆಗಿದ್ದೇ ರೋಚಕ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Ram mandir Shri Ram Janmabhoomi Shri Ram Janmabhoomi Teerth Kshetra Trust Ayodhya
Advertisment
Advertisment
Advertisment