/newsfirstlive-kannada/media/media_files/2025/10/27/lokayukta-1-2025-10-27-19-57-56.jpg)
ಬಲ ಇದ್ದವನು ಬಾಳಿಯಾನು ಅಂತಾರೆ.. ನಸೀಬು ಕೆಟ್ರೆ ಯಾವ ಶಕ್ತಿನೂ ಉಪಯೋಗಕ್ಕೆ ಬರಲ್ಲ ಅನ್ನೋದಕ್ಕೆ ಸ್ಟೋರಿಯೇ ಸಾಕ್ಷಿ.. ಲೋಕಾಯುಕ್ತ ಅಧಿಕಾರಿಗಳ ಹೆಸ್ರಲ್ಲಿ ವಸೂಲಿ ಮಾಡ್ತಿದ್ದ ವಿದ್ಯುತ್ ಗುತ್ತಿಗೆದಾರನೊಬ್ಬನ ಮುಖವಾಡ ಕಳಚಿದೆ.. ಇಬ್ಬರು ಸಾಮಾಜಿಕ ಹೋರಾಟಗಾರರು ಗುತ್ತಿಗೆದಾರರನ್ನು ಟ್ರ್ಯಾಪ್ ಮಾಡಿ ಬಲೆಗೆ ಕೆಡವಿದ್ದಾರೆ.
ಇದನ್ನೂ ಓದಿ:‘ಹೈಕಮಾಂಡ್ ಒಪ್ಪಿದ್ರೆ ನಾನೇ..’ CM ಹೇಳಿಕೆಗೆ ಡಿಕೆಶಿ ರಿಯಾಕ್ಷನ್ ಏನು ಗೊತ್ತಾ..?
/filters:format(webp)/newsfirstlive-kannada/media/media_files/2025/10/27/sharanappa-1-2025-10-27-19-57-22.jpg)
ಟ್ರಾಫ್ ಆದ ಶರಣಪ್ಪ
ರಾಜಧಾನಿಯಲ್ಲಿ ನಡೀತಿರೋ ವಸೂಲಿ ದಂಧೆ ಇದು. ಆರೋಪಿ ಹೆಸರು ಶರಣಪ್ಪ ಕುರುಬನಾಳ. ಕೊಪ್ಪಳ ಮೂಲದ ಶರಣಪ್ಪ ಬೆಂಗಳೂರಲ್ಲಿ ವಾಸವಿದ್ದು ಕಳೆದ 30 ವರ್ಷಗಳಿಂದ ವಿದ್ಯುತ್ ಗುತ್ತಿಗೆದಾರನಾಗಿದ್ದಾನೆ. ಭ್ರಷ್ಟ ಹಣದಲ್ಲೇ ಕೋಟಿ ಕೋಟಿ ಹಣ ಸಂಪಾದನೆ ಮಾಡಿರೋ ಆರೋಪ ಈತನ ಮೇಲಿದೆ. ಈತ ಲೋಕಾಯುಕ್ತ ಅಧಿಕಾರಿಗಳ ಪರಿಚಯವನ್ನೇ ಬಂಡವಾಳ ಮಾಡಿಕೊಂಡು ವಸೂಲಿ ಮಾಡ್ತಿರೋದು ಬಟಾಬಯಲಾಗಿದೆ. ಲೈನ್​​ಮ್ಯಾನ್​ನಿಂದ ಹಿಡಿದು ಅಧಿಕಾರಿಗಳ ಮಟ್ಟದವರೆಗೂ ಈತ ಸುಲಿಗೆ ಮಾಡ್ತಿದ್ದ ಎನ್ನಲಾಗಿದೆ.
ಆರೋಪ ಏನು..?
ಶ್ರೀ ಸಿದ್ದಗಂಗಾ ಎಲೆಕ್ಟ್ರಿಕಲ್ ಎಂಟರ್​​ಪ್ರೈಸಸ್​ ಶಾಪ್ ಮಾಲೀಕನಾಗಿರೋ ಗುತ್ತಿಗೆದಾರ ಶರಣ​ಪ್ಪ ಆರಂಭದಲ್ಲಿ 4-5 ಬೆಸ್ಕಾಂ ಅಧಿಕಾರಿಗಳ ವಿರುದ್ಧ ದೂರು ನೀಡಿ ಲೋಕಾಯುಕ್ತ ಬಲೆಗೆ ಬೀಳಿಸಿದ್ದ, ಬಳಿಕ ಇದನ್ನೇ ಬಂಡವಾಳ ಮಾಡಿಕೊಂಡ ಗುತ್ತಿಗೆದಾರ ಶರಣಪ್ಪ ಅಧಿಕಾರಿಗಳು ನನ್ನ ಮಾತನ್ನು ಕೇಳುತ್ತಾರೆ ಅಂತ ಹೆದರಿಸಿ ವಸೂಲಿ ಮಾಡುತ್ತಿದ್ದು.. ಸುಮಾರು ₹10 ಕೋಟಿಗೂ ಹೆಚ್ಚು ಹಣವನ್ನು ಭ್ರಷ್ಟ ಹಣದಲ್ಲಿ ಸಂಪಾದಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾನೆ ಎನ್ನಲಾಗಿದೆ. ಅದೂ ಅಲ್ಲದೇ ರಾಜ್ಯದ ಪ್ರತಿಷ್ಠಿತ ಮಠಗಳ ಹೆಸರಲ್ಲಿ ದಾನ ಸಂಗ್ರಹಿಸಿ ದುರ್ಬಳಕೆ ಮಾಡಿಕೊಂಡಿರುವ ಆರೋಪ ಇದೆ. ಇನ್ನು ಸಮಾಜ ಸೇವೆ ಹೆಸರಲ್ಲೂ ಕೋಟ್ಯಂತರ ರೂ.ಅಕ್ರಮದ ಆರೋಪ ಕೇಳಿ ಬಂದಿದೆ..
ಇದನ್ನೂ ಓದಿ: Breaking News: ಹೈಕಮಾಂಡ್ ಒಪ್ಪಿದ್ರೆ ನಾನೇ ಪೂರ್ಣಾವಧಿ ಸಿಎಂ ಎಂದ ಸಿದ್ದರಾಮಯ್ಯ! ಹಾಗಾದರೆ ಹೈಕಮಾಂಡ್ ತೀರ್ಮಾನ ಏನು?
/filters:format(webp)/newsfirstlive-kannada/media/media_files/2025/10/27/sharanappa-2025-10-27-19-57-37.jpg)
ಹಲವು ವರ್ಷಗಳ ಕಾಲ ಭ್ರಷ್ಟಾಚಾರವನ್ನೇ ಉಸಿರಾಡಿದ್ದ ಗುತ್ತಿಗೆದಾರ ಶರಣಪ್ಪ ಕುರುಬನಾಳ ನಸೀಬು ಕೆಟ್ಟದಾಗಿತ್ತು ಅನ್ಸುತ್ತೆ.. ಸಾಮಾಜಿಕ ಹೋರಟಗಾರರದ ಲೋಕೇಶ್ ಹಾಗೂ ದೇವರಾಜು ಕೈಯಲ್ಲಿ ತಗ್ಲಾಕ್ಕೊಂಡಿದ್ದಾನೆ.. ಗುತ್ತಿಗೆದಾರನಾಗಿ ಲೋಕೇಶ್ ಆ್ಯಕ್ಟ್ ಮಾಡಿದ್ರೆ ಲೈನ್​ಮೆನ್ ಆಗಿ ದೇವರಾಜು ನಟಿಸಿ ಈತನ ಬ್ಲ್ಯಾಕ್​​ಮೇಲ್ ಆಟ.. 5 ಲಕ್ಷಕ್ಕೆ ಬೇಡಿಕೆ ಸೇರಿ ತನ್ನ ಅಕೌಂಟ್​​ನಲ್ಲಿ 4 ಕೋಟಿ ಹಣ ಇರೋ ವಿಚಾರವನ್ನೂ ಬಯಲಿಗೆಳೆದಿದ್ದಾರೆ..
ಸಿಕ್ಕಿಬಿದ್ದಿದ್ದು ಹೇಗೆ..?
ಶರಣಪ್ಪನನ್ನು ಹೇಗೆಲ್ಲಾ ಟ್ರ್ಯಾಪ್ ಮಾಡಲಾಯ್ತು ಅನ್ನೋದನ್ನು ಖುದ್ದು ಸಾಮಾಜಿಕ ಹೋರಾಟಗಾರರದ ಲೋಕೇಶ್ ಹಾಗೂ ರಮೇಶ್ ಬಿಚ್ಚಿಟ್ಟಿದ್ದಾರೆ. ನಾವು ಲೈನ್​ಮ್ಯಾನ್​​ ಮತ್ತು ಗುತ್ತಿಗೆದಾರನ ಸೋಗಿನಲ್ಲಿ ಶರಣಪ್ಪನ ಸಂಪರ್ಕಿಸಿದರು. ಲೋಕೇಶ್ ಗುತ್ತಿಗೆದಾರನಾಗಿ ಮತ್ತು ರಮೇಶ್​ ಲೈನ್​​ಮ್ಯಾನ್​ ಆಗಿ ಪರಿಚಯ ಮಾಡಿಕೊಂಡರು. ಲೈನ್​​ಮ್ಯಾನ್​ ರಮೇಶ್​ ಕೆಲಸ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆಂದು ಶರಣಪ್ಪನನ್ನು ಲೋಕೇಶ್ ಸಂಪರ್ಕ ಮಾಡಿದರು. ರಮೇಶ್​ ಹಣಕ್ಕೆ ಬೇಡಿಕೆ ಇಡುವ ಆಡಿಯೋ, ವಿಡಿಯೋ ಇದೆ ಎಂದು ಶರಣಪ್ಪನ ಭೇಟಿ ಮಾಡಿದ್ದರು. ಈ ವೇಳೆ ನಿಮಗೆ ಲೋಕಾಯುಕ್ತಅಧಿಕಾರಿಗಳು ಪರಿಚಯ ಶಿಕ್ಷೆಯಾಗುವಂತೆ ಮಾಡಿ ಎಂದು ಲೋಕೇಶ್​ ಮನವಿ ಮಾಡಿಕೊಂಡಿದ್ದರು.
/filters:format(webp)/newsfirstlive-kannada/media/media_files/2025/10/27/ramesh-social-activist-2025-10-27-19-58-12.jpg)
ಲೋಕೇಶ್​ನಿಂದ ಆಡಿಯೋ ವಿಡಿಯೋದ ಡಿಟೇಲ್ಸ್​ ಪಡೆದ ಶರಣಪ್ಪ, ಇದನ್ನು ಯಾರಿಗೂ ಕೊಡದಂತೆ ಸೂಚನೆ ನೀಡಿದ್ದ. ಬಳಿಕ ಲೈನ್​​ಮ್ಯಾನ್​​ ಸೋಗಿನಲ್ಲಿದ್ದ ರಮೇಶ್​ ಬಳಿ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದಿದ್ರೆ ಲೋಕಾಯುಕ್ತ ಅಧಿಕಾರಿಗಳಿಂದ ಅರೆಸ್ಟ್ ಮಾಡಿಸುವ ಬೆದರಿಕೆ ಹಾಕಿದ್ದಾನೆ. ಮಾತ್ರವಲ್ಲ, ಲೋಕಾಯುಕ್ತ SP ವಂಶಿಕೃಷ್ಣ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾನೆ.
ಒಟ್ಟಾರೆ, ನಾನೊಬ್ಬ ಧೀರ, ಶೂರ ಅಂತ ಬಿಲ್ಡಪ್ ಕೊಟ್ಟ ಶರಣಪ್ಪನ ಅಕ್ರಮ ಬಯಲಾಗಿದೆ.. ಲೋಕಾಯುಕ್ತವನ್ನೇ ಮಿಸ್​ಯೂಸ್​ ಮಾಡಿಕೊಂಡಿರೋ ಶರಣಪ್ಪ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳೇ ದಾಳಿ ಮಾಡಿ ಆತನ ಅಕ್ರಮವನ್ನು ಶೋಧಿಸಬೇಕಿದೆ..
ವಿಶೇಷ ವರದಿ: ರಘುಪಾಲ್, ನ್ಯೂಸ್​​​ಫಸ್ಟ್​, ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us