/newsfirstlive-kannada/media/media_files/2025/10/06/br_gavai-2025-10-06-23-21-48.jpg)
ನವದೆಹಲಿ: ಸುಪ್ರೀಂಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ಬಿರ್.ಆರ್ ಗವಾಯಿ ಅವರು ನ್ಯಾಯಾಲಯದಲ್ಲಿ ಕಲಾಪ ನಡೆಸುವ ವೇಳೆ ಶೂ ಎಸೆಯಲು ಯತ್ನಿಸಿದ್ದ ವಕೀಲ ರಾಕೇಶ್ ಕಿಶೋರ್​ನನ್ನ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಮಾನತುಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿಗಳು ಆದ ಬಿ.ಆರ್ ಗವಾಯಿ ಅವರು ಇದ್ದ ಕೋರ್ಟ್ ರೂಂ ನಂಬರ್​​ 1ರಲ್ಲಿ ಸುಪ್ರೀಂಕೋರ್ಟ್​ ಲಾಯರ್​ ರಾಕೇಶ್ ಕಿಶೋರ್ ಗಲಾಟೆ ಮಾಡಿದ್ದನು. ನಂತರ ನ್ಯಾಯಾಲಯದ ಕಲಾಪದ ಬಳಿಗೆ ಬಂದು ಶೂ ತೆಗೆದುಕೊಂಡು ಮುಖ್ಯ ನ್ಯಾಯಮೂರ್ತಿಗಳತ್ತ ಎಸೆಯಲು ಯತ್ನಿಸಿದ್ದರು. ಇದನ್ನು ಅಲ್ಲಿನ ಪ್ರತ್ಯಕ್ಷದರ್ಶಿಗಳು ಕಣ್ಣಾರೆ ಕಂಡಿದ್ದರು. ಹೀಗಾಗಿ ಬೇಗನೇ ಎಲ್ಲೆಡೆ ವರದಿಯಾಗಿತ್ತು.
ಇದನ್ನೂ ಓದಿ:ಬಿಹಾರದ ಎಲೆಕ್ಷನ್​ನಲ್ಲಿ 17 ಹೊಸ ಸುಧಾರಣೆಗಳು.. ಇವೇ ಭಾರತದಾದ್ಯಂತ ಜಾರಿ ಆಗಲಿವೆ!
ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ ಸುಪ್ರೀಂಕೋರ್ಟ್​ನ ವಕೀಲ ರಾಕೇಶ್ ಕಿಶೋರ್​ನನ್ನ ಭದ್ರತಾ ಸಿಬ್ಬಂದಿ ಬಂಧಿಸುತ್ತಿದ್ದಂತೆ ಸನಾತನ ಧರ್ಮದ ಅವಮಾನ ಸಹಿಸಲ್ಲ ಎಂದು ಕೂಗಿದ್ದಾರೆ. ಕೂಡಲೇ ಅವರನ್ನು ನ್ಯಾಯಾಲಯದಿಂದ ಹೊರಕ್ಕೆ ಎಳೆದೊಯ್ದು ಸುಪ್ರೀಂ ಕೋರ್ಟ್‌ನ ಭದ್ರತಾ ಘಟಕಕ್ಕೆ ಹಸ್ತಾಂತರಿಸಲಾಯಿತು. ಆದರೆ ಇಂತಹದಕ್ಕೆ ಗಮನ ಕೊಡದೇ ಸಿಜೆಐ ಗವಾಯಿ ಅವರು ದಿನದ ಕಲಾಪವನ್ನು ಮುಂದುವರೆಸಿದರು. ಇಂತಹದರಿಂದ ವಿಚಲಿತರಾಗಬೇಡಿ. ನಾವು ವಿಚಲಿತರಾಗಲ್ಲ. ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರಲ್ಲ ಎಂದು ಬಿ.ಆರ್ ಗವಾಯಿ ಅವರು ಹೇಳಿದ್ದಾರೆ.
ವಕೀಲ ರಾಕೇಶ್ ಕಿಶೋರ್​ನನ್ನ ಅಮಾನತು ಮಾಡಿದ್ದರಿಂದ ದೇಶದ ಯಾವುದೇ ನ್ಯಾಯಾಲಯ, ನ್ಯಾಯಾಮಂಡಳಿ ಅಥವಾ ಪ್ರಾಧಿಕಾರದಲ್ಲಿ ಕಾಣಿಸಿಕೊಳ್ಳುವುದು ಕಾರ್ಯನಿರ್ವಹಿಸುವುದು, ಮನವಿ ಮಾಡುವುದು ಅಥವಾ ಅಭ್ಯಾಸ ಮಾಡುವಂತೆ ಇರುವುದಿಲ್ಲ. ದೆಹಲಿಯ ಬಾರ್​ ಕೌನ್ಸಿಲ್​ ತಕ್ಷಣದಿಂದಲೇ ಈ ಆದೇಶ ಜಾರಿ ಬರುವಂತೆ ಸೂಚನೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ