/newsfirstlive-kannada/media/media_files/2025/09/19/hyd_brothers-2025-09-19-18-22-35.jpg)
ಹೈದರಾಬಾದ್: ಮನುಷ್ಯ ಭೂಮಿ ಮೇಲೆ ಇರುವವರೆಗೆ ಮಾತ್ರ ಬೆಲೆ. ಅವನು ಕೊನೆಯುಸಿರೆಳೆದ ಮೇಲೆ ಅವನ ಬಟ್ಟೆ, ಹಾಸಿಗೆ ಸೇರಿ ಎಲ್ಲವನ್ನು ಗುರುತು ಇರಬಾರದು ಎಂದು ದೂರ ಎಸೆದು ಬಿಡುತ್ತಾರೆ. ಆದರೆ ಆತ ಇದ್ದಾಗ ಬಳಸಿದಂತ ಮೌಲ್ಯಯುತ ವಸ್ತುಗಳಾದ ಭೂಮಿ, ಚಿನ್ನ, ಬೆಳ್ಳಿಗಾಗಿ ಕುಟುಂಬಸ್ಥರು ಕಿತ್ತಾಡುವುದು ಮಾತ್ರ ಪಕ್ಕಾ. ಸದ್ಯ ಇಂತಹದ್ದೇ ಒಂದು ಘಟನೆ ನಡೆದಿದ್ದು ತಾಯಿಯ ಚಿನ್ನಾಭರಣಕ್ಕಾಗಿ ಸಹೋದರರು ಪರಸ್ಪರ ಭಯಾನಕವಾಗಿ ಹೊಡೆದಾಡಿಕೊಂಡಿದ್ದಾರೆ.
ಅಣ್ಣ ನಾಗಿರೆಡ್ಡಿ ಹಾಗೂ ತಮ್ಮ ರಾಮಕೃಷ್ಣ ರೆಡ್ಡಿ ಈ ಇಬ್ಬರು ತೆಲಂಗಾಣದ ಭದ್ರಾದ್ರಿ ಕೊತ್ತಗೂಡಂ ಜಿಲ್ಲೆಯ ಲಕ್ಷ್ಮಿಪುರಂ ಗ್ರಾಮದ ನಿವಾಸಿಗಳು ಆಗಿದ್ದಾರೆ. ಇತ್ತೀಚೆಗಷ್ಟೇ ಇವರ ತಾಯಿ ನಿಧನ ಹೊಂದಿದ್ದರು. ಆದರೆ ಬಂಗಾರ ಯಾರಿಗೆ ಸೇರಬೇಕು ಎಂದು ತಾಯಿ ತಿಳಿಸಿರಲಿಲ್ಲ. ಹೀಗಾಗಿ ತಾಯಿಯ ಚಿನ್ನಾಭರಣಕ್ಕಾಗಿ ಅಣ್ಣ ನಾಗಿರೆಡ್ಡಿ ಹಾಗೂ ತಮ್ಮ ರಾಮಕೃಷ್ಣ ರೆಡ್ಡಿ ಕುಟುಂಬದ ನಡುವೆ ದೊಡ್ಡ ಯುದ್ಧವೇ ನಡೆದು ಹೋಗಿದೆ.
ಇದನ್ನೂ ಓದಿ: ಸಿಂಗಾಪುರದಲ್ಲಿ ಭಾರತದ ಖ್ಯಾತ ಸಿಂಗರ್​ ನಿಧನ.. ಅಸಲಿಗೆ ಅಲ್ಲಿ ಆಗಿದ್ದೇನು..?
ತಾಯಿಯ ಚಿನ್ನಾಭರಣಕ್ಕಾಗಿ ಅಣ್ಣ ನಾಗಿರೆಡ್ಡಿ ಹಾಗೂ ತಮ್ಮ ರಾಮಕೃಷ್ಣ ರೆಡ್ಡಿ ನಡುವೆ ಬೀದಿ ಜಗಳ ನಡೆದಿದೆ. ಅಣ್ಣ ಹಾಗೂ ಅತ್ತಿಗೆ ಮೇಲೆ ತಮ್ಮ ಭೀಕರವಾಗಿ ಹಲ್ಲೆ ಮಾಡಿದ್ದಾನೆ. ಅತ್ತಿಗೆಯ ತಲೆಗೆ ಕಲ್ಲುಗಳಿಂದ ಹೊಡೆದಿದ್ದರಿಂದ ಸ್ಥಳದಲ್ಲೇ ಆಕೆ ಮೂರ್ಛೆ ತಪ್ಪಿ ಬಿದ್ದಿದ್ದಾಳೆ. ಅದೇ ರೀತಿ ಅಣ್ಣನ ಮೇಲೂ ರಾಮಕೃಷ್ಣ ದೊಡ್ಡ ಬಂಡೆಗಲ್ಲು ಹಾಕಿದ್ದರಿಂದ ಆತನೂ ಗಂಭೀರವಾಗಿ ಗಾಯಗೊಂಡು ನೆಲಕ್ಕೆ ಉರುಳಿದ್ದಾನೆ ಎಂದು ಹೇಳಲಾಗಿದೆ.
ಅಣ್ಣ-ಅತ್ತಿಗೆ ಇಬ್ಬರು ಭೀಕರವಾಗಿ ಗಾಯಗೊಂಡಿದ್ದರಿಂದ ಅವರನ್ನು ಸ್ಥಳೀಯರು ಭದ್ರಚಲಂನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಈ ಸಮಾಚಾರ ತಿಳಿಯುತ್ತಿದ್ದಂತೆ ಬುರ್ಗಾಂಪಾಡು ಪೊಲೀಸರು ಹಲ್ಲೆ ಮಾಡಿದ ತಮ್ಮನ ಕುಟುಂಬದ ವಿರುದ್ಧ ಪ್ರಕರಣ ದಾಖಲು ಮಾಡಿ ತನಿಖೆ ಆರಂಭಿಸಿದ್ದಾರೆ. ತಾಯಿ ಚಿನ್ನಕ್ಕಾಗಿ ಅಣ್ಣ-ತಮ್ಮ ಭಯಾನಕವಾಗಿ ಹೊಡೆದಾಡಿಕೊಂಡಿರುವುದು ಎಲ್ಲೆಡೆ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ