/newsfirstlive-kannada/media/media_files/2025/11/06/bihar_elections_2025_bhimabhand-2025-11-06-15-32-48.jpg)
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದ್ದು 20 ವರ್ಷಗಳ ನಂತರ ಇದೇ ಮೊದಲ ಬಾರಿಗೆ ನಕ್ಸಲ್​ ಪೀಡಿತ ಪ್ರದೇಶವೊಂದರಲ್ಲಿ ವೋಟಿಂಗ್ ನಡೆದಿದೆ. ಇದರಿಂದ ಆ ಊರಿನ ಪುರುಷರು, ಮಹಿಳಾ ಮತದಾರರು ಸಂತೋಷ ವ್ಯಕ್ತಪಡಿಸಿದ್ದಾರೆ.
ಬಿಹಾರದ ಮುಂಗೇರ್ ಜಿಲ್ಲೆಯ ಭೀಮಬಂಧ್ ಗ್ರಾಮ ನಕ್ಸಲ್ ಪೀಡಿತ ಪ್ರದೇಶವಾಗಿದೆ. ಇಲ್ಲಿ ಕಳೆದ ಎರಡು ದಶಕಗಳಿಂದ ಮತದಾನ ಎನ್ನುವುದು ನಡೆದೇ ಇರಲಿಲ್ಲ. ನಕ್ಸಲರ ದಾಳಿ ಹಿನ್ನೆಲೆಯಲ್ಲಿ 20 ವರ್ಷಗಳಿಂದ ಅಲ್ಲಿನ ಮತದಾನ ಮಾಡಿರಲಿಲ್ಲ. ಆದರೆ ಈಗ ನಕ್ಸಲರ ನಾಶವಾಗಿದ್ದು ಪ್ರಜಾಪ್ರಭುತ್ವಕ್ಕೆ ದೊಡ್ಡ ಗೆಲುವು ದೊರೆತಿದೆ. ಹೀಗಾಗಿ 2025ರ ಬಿಹಾರ ವಿಧಾನಸಭಾ ಎಲೆಕ್ಷನ್​ನಲ್ಲಿ ಭೀಮಬಂಧ್ ಗ್ರಾಮದಲ್ಲಿ ಶಾಂತಿಯುತವಾಗಿ ಮತದಾರರು ತಮ್ಮ ಹಕ್ಕು ಅನ್ನು ಚಲಾಯಿಸುತ್ತಿದ್ದಾರೆ. ಇದೊಂದು ಪ್ರಜಾಪ್ರಭುತ್ವದ ವಿಜಯವೆಂದು ಪರಿಗಣಿಸಲಾಗಿದೆ.
ಈ ಬಾರಿ ಇಲ್ಲಿ ಮತದಾನ ನಡೆಯುತ್ತಿದ್ದರಿಂದ ಮುಂದಿನ ದಿನಗಳಲ್ಲಿ ಇಲ್ಲಿ ಸಾಕಷ್ಟು ಅಭಿವೃದ್ಧಿಗಳನ್ನು ನಾವು ಕಾಣಬಹುದು. ಮತ್ತೆ ಮತಗಟ್ಟೆಗಳು ಆರಂಭವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ವೋಟ್ ಹಾಕಲು ಬರುತ್ತಿರುವುದರಿಂದ ಕುಂಠಿತಗೊಂಡ ಅಭಿವೃದ್ಧಿಗೆ ಮತ್ತೆ ಚಾಲನೆ ಸಿಗಬಹುದು ಎಂದು ಸರ್ಕಾರಿ ಅಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮುದ್ದಿನ ಶ್ವಾನ ಕೊಕೊನ ಬರ್ತ್​ಡೇ ಸೆಲೆಬ್ರೆಟ್ ಮಾಡಿದ ಯಶ್, ರಾಧಿಕಾ ಪಂಡಿತ್.. Photos
/filters:format(webp)/newsfirstlive-kannada/media/post_attachments/wp-content/uploads/2024/05/VOTE-2.jpg)
ಭೀಮಬಂದ್‌ನಲ್ಲಿ ಮೊದಲ ಬಾರಿಗೆ ಮತದಾನ: ಸ್ಥಳೀಯರ ಅಭಿಪ್ರಾಯ
ಹಲವು ವರ್ಷಗಳ ನಂತರ ವೋಟ್ ಮಾಡುತ್ತಿರುವುದಕ್ಕೆ ನಮಗೆ ತುಂಬಾ ಸಂತಸ ಆವಾಗುತ್ತಿದೆ. 2005ರ ನಂತರ ಇಲ್ಲಿನ ಚುನಾವಣೆ ಪರಿಸ್ಥಿತಿ ಹದಗೆಟ್ಟಿತ್ತು. ಆದರೆ ಈಗ ಎಲ್ಲ ಸರಿ ಹೋಗಿದೆ. ಈಗ ಯಾವುದೇ ಭಯವಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಅಧಿಕಾರಿಗಳನ್ನು ನಿಯೋಜನೆ ಮಾಡಿದ್ದರಿಂದ ಶಾಂತಿಯುತವಾಗಿ ವೋಟಿಂಗ್ ಮಾಡಲು ಅನುಕೂಲವಾಗಿದೆ. ಸರ್ಕಾರದ ಸೌಲಭ್ಯಗಳು ತುಂಬಾ ಅನುಕೂಲವಾಗಿವೆ. ನಾವು ಕಳೆದ ಕೆಲವು ವರ್ಷಗಳಿಂದ ಉಚಿತವಾಗಿ ರೇಷನ್ ಅನ್ನು ಪಡೆದುಕೊಳ್ಳುತ್ತಿದ್ದೇವೆ. ಇಲ್ಲಿ ಬೂತ್​ಗಳನ್ನು ಮಾಡಿ ಮತದಾನಕ್ಕೆ ಅನುಕೂಲ ಮಾಡಿರುವುದು ನಮಗೆ ಸಂತೋಷ ತಂದಿದೆ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.
ಭೀಮಬಂದ್‌ನಲ್ಲಿ ಪ್ರದೇಶದಲ್ಲಿ ಮತದಾನ ಏಕೆ ನಿಂತಿತು?
ಮತಗಟ್ಟೆ ಸಂಖ್ಯೆ 310 ರಲ್ಲಿ 20 ವರ್ಷಗಳ ನಂತರ ಮತದಾನ ನಡೆಯುತ್ತಿದೆ. ಕೆಲವು ವರ್ಷಗಳ ಹಿಂದೆ ಒಂದು ಘೋರ ಘಟನೆ ನಡೆದಿತ್ತು. ಇದರಿಂದಾಗಿ ಇಲ್ಲಿ ಮತದಾನ ಹಲವು ವರ್ಷಗಳಿಂದ ನಿಂತು ಹೋಗಿತ್ತು. ಆದರೆ ನಾವು ಈಗ ಸ್ಥಳಕ್ಕೆ ಭೇಟಿ ನೀಡಿ ಎಲ್ಲವನ್ನು ಸರಿ ಮಾಡಿದ್ದೇವೆ. ಮತದಾರರು ಯಾವುದೇ ಭಯವಿಲ್ಲದೆ ಮುಕ್ತವಾಗಿ ಮತ ಚಲಾಯಿಸಬಹುದು. ಚುನಾವಣಾ ಆಯೋಗದ ಪ್ರಕಾರ, ಈ ಚುನಾವಣೆಯ ಮೊದಲ ಹಂತದಲ್ಲಿ ಬೆಳಗ್ಗೆ 11 ಗಂಟೆವರೆಗೆ 27.65% ರಷ್ಟು ಮತದಾನವಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಭಕ್ತಿಯಾರ್‌ಪುರಕ್ಕೆ ಮತ ಚಲಾಯಿಸಲು ಹೊರಟಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಮತದಾನ ಮಾಡುವುದು ಪ್ರಜಾಪ್ರಭುತ್ವದಲ್ಲಿ ನಾಗರಿಕರ ಹಕ್ಕು, ಮಾತ್ರವಲ್ಲದೆ ಕರ್ತವ್ಯವೂ ಆಗಿದೆ ಎಂದು ಬರೆದು ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಹಾರದ 18 ಜಿಲ್ಲೆಗಳ 121 ಕ್ಷೇತ್ರಗಳಿಗೆ ಇಂದು ಬೆಳಗ್ಗೆ 7 ಗಂಟೆಯಿಂದ ಬಿಗಿ ಭದ್ರತಾ ವ್ಯವಸ್ಥೆಯಲ್ಲಿ ಮತದಾನ ಪ್ರಾರಂಭವಾಗಿದೆ ಸಂಜೆ 6 ಗಂಟೆಗೆ ಮುಕ್ತಾಯವಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us