ಬಜೆಟ್ 2026: SGB ಹೂಡಿಕೆದಾರರಿಗೆ ಬಿಗ್ ಶಾಕ್ ಕೊಟ್ಟ ಕೇಂದ್ರ ಸರ್ಕಾರ..!

ನೀವು ಆರ್‌ಬಿಐ ವಿಂಡೋ ಮೂಲಕವೇ ಬಾಂಡ್ ಖರೀದಿಸಿದ್ದರೆ ಮತ್ತು ಅದನ್ನು ಮುಕ್ತಾಯದವರೆಗೆ ಇಟ್ಟುಕೊಂಡರೆ, ನಿಮಗೆ ಯಾವುದೇ ತೆರಿಗೆ ಇರುವುದಿಲ್ಲ. ಅಂತಹವರಿಗೆ ಹಳೆಯ ನಿಯಮಗಳೇ ಅನ್ವಯಿಸುತ್ತವೆ.

author-image
Ganesh Kerekuli
union budget (6)
Advertisment

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಸೋವರಿನ್ ಗೋಲ್ಡ್ ಬಾಂಡ್ (SGB) ಹೂಡಿಕೆದಾರರಿಗೆ ಆತಂಕ ತರುವಂತಹ ಪ್ರಸ್ತಾವನೆ ಮಂಡಿಸಲಾಗಿದೆ. ಸೆಕೆಂಡರಿ ಮಾರ್ಕೆಟ್ (ಸ್ಟಾಕ್ ಎಕ್ಸ್ಚೇಂಜ್) ಮೂಲಕ ಎಸ್‌ಜಿಬಿ ಖರೀದಿಸುವವರಿಗೆ ಸಿಗುತ್ತಿದ್ದ ಬಂಡವಾಳ ಲಾಭದ ತೆರಿಗೆ (Capital Gains Tax) ವಿನಾಯಿತಿಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.

ಈ ಬದಲಾವಣೆಯ ಪ್ರಮುಖ ಅಂಶಗಳು ಇಲ್ಲಿವೆ

ಯಾರಿಗೆ ತೆರಿಗೆ ವಿನಾಯಿತಿ ಇರುತ್ತದೆ?

ಆರ್‌ಬಿಐ (RBI) ಬಾಂಡ್ ವಿತರಿಸುವಾಗ ನೇರವಾಗಿ ಚಂದಾದಾರರಾಗಿ (Original Subscribers) ಬಾಂಡ್ ಖರೀದಿಸಿ, ಅದನ್ನು ಅವಧಿ ಮುಕ್ತಾಯದವರೆಗೆ (Maturity) ಹೊಂದಿರುವವರಿಗೆ ಮಾತ್ರ ಸಂಪೂರ್ಣ ತೆರಿಗೆ ವಿನಾಯಿತಿ ಮುಂದುವರಿಯಲಿದೆ. ಸ್ಟಾಕ್ ಎಕ್ಸ್ಚೇಂಜ್ ಅಥವಾ ಸೆಕೆಂಡರಿ ಮಾರ್ಕೆಟ್ ಮೂಲಕ ಇತರರಿಂದ ‘ಸೆಕೆಂಡ್ ಹ್ಯಾಂಡ್’ ಬಾಂಡ್ ಖರೀದಿಸುವವರು ಏಪ್ರಿಲ್ 1, 2026 ರ ನಂತರ ಅದನ್ನು ಮರುಪಾವತಿಸಿದರೆ (Redemption), ಬಂದ ಲಾಭದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ:‘ವಿಕಸಿತ ಭಾರತ’ 2047ಕ್ಕೆ ಭದ್ರ ಬುನಾದಿ; ಬಜೆಟ್ ಭಾಷಣದ ಪ್ರಮುಖ 10 ಹೈಲೈಟ್ಸ್..!

union budget and siddarmaiah (2)

ಹಳೆಯ ನಿಯಮ ಏನು?

ಇದುವರೆಗೆ ಎಸ್‌ಜಿಬಿಗಳು ಅತ್ಯಂತ ತೆರಿಗೆ ಸ್ನೇಹಿ ಹೂಡಿಕೆಯಾಗಿದ್ದವು. ಹೂಡಿಕೆದಾರರು ವಾರ್ಷಿಕ ಶೇ. 2.5 ರಷ್ಟು ಬಡ್ಡಿ ಪಡೆಯುವುದರ ಜೊತೆಗೆ, ಬಾಂಡ್ ಅನ್ನು ಎಲ್ಲಿಂದಲೇ ಖರೀದಿಸಿದ್ದರೂ (ನೇರವಾಗಿ ಅಥವಾ ಎಕ್ಸ್ಚೇಂಜ್ ಮೂಲಕ), ಅವಧಿ ಮುಕ್ತಾಯದ ಸಮಯದಲ್ಲಿ ಬರುವ ಲಾಭದ ಮೇಲೆ ಯಾವುದೇ ತೆರಿಗೆ ಇರುತ್ತಿರಲಿಲ್ಲ.

ಬದಲಾವಣೆಯ ಉದ್ದೇಶ: ಅನೇಕ ಹೂಡಿಕೆದಾರರು ಸ್ಟಾಕ್ ಎಕ್ಸ್ಚೇಂಜ್‌ನಲ್ಲಿ ಹಳೆಯ ಎಸ್‌ಜಿಬಿ ಸರಣಿಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ನಂತರ ತೆರಿಗೆ ರಹಿತ ಲಾಭ ಪಡೆಯುತ್ತಿದ್ದರು. ಈ ‘ಆರ್ಬಿಟ್ರೇಜ್’ (Arbitrage) ಅವಕಾಶವನ್ನು ತಡೆಯಲು ಮತ್ತು ನೇರ ಚಂದಾದಾರರು ಹಾಗೂ ಟ್ರೇಡರ್ಸ್ ನಡುವೆ ಸಮಾನತೆ ತರಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ‘ಕ್ಯಾಪಿಟಲ್‌ಮೈಂಡ್’ ಸಿಇಒ ದೀಪಕ್ ಶೆಣೈ, ‘ಇದು ಸ್ಟಾಕ್ ಮಾರ್ಕೆಟ್‌ನಲ್ಲಿ ಎಸ್‌ಜಿಬಿ ಖರೀದಿಸುವವರಿಗೆ ದೊಡ್ಡ ಹಿನ್ನಡೆ. ಭೌತಿಕ ಚಿನ್ನ ಅಥವಾ ಗೋಲ್ಡ್ ಇಟಿಎಫ್‌ಗಳಿಗಿಂತ ಎಸ್‌ಜಿಬಿಗಳು ಶ್ರೇಷ್ಠ ಎನಿಸಿಕೊಳ್ಳಲು ಇದ್ದ ಏಕೈಕ ದೊಡ್ಡ ಲಾಭವನ್ನು ಈ ನಿಯಮ ಕಿತ್ತುಕೊಂಡಿದೆ ಎಂದಿದ್ದಾರೆ.  ಈ ಹೊಸ ನಿಯಮವು ಏಪ್ರಿಲ್ 1, 2026 ರಿಂದ (ಹಣಕಾಸು ವರ್ಷ 2026-27) ಜಾರಿಗೆ ಬರಲಿದೆ. ಏಪ್ರಿಲ್ 2026 ರ ನಂತರ ಮೆಚ್ಯೂರಿಟಿ ಆಗುವ ಮತ್ತು ಎಕ್ಸ್ಚೇಂಜ್‌ನಲ್ಲಿ ಖರೀದಿಸಿದ ಬಾಂಡ್‌ಗಳಿಗೆ ಇದು ಅನ್ವಯಿಸುತ್ತದೆ. 

ಇದನ್ನೂ ಓದಿ: ಕೇಂದ್ರದ ಬಜೆಟ್ ಮಂಡನೆಯಾಗುತ್ತಿದ್ದಂತೆ, ಷೇರು ಮಾರ್ಕೆಟ್ ಕುಸಿದಿದ್ದು ಏಕೆ ಗೊತ್ತಾ? ಆ ಘೋಷಣೆಯಿಂದ ಷೇರು ಮಾರ್ಕೆಟ್ ಕುಸಿತ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Nirmala Sitharaman union budget budget 2026
Advertisment