/newsfirstlive-kannada/media/media_files/2025/11/04/up_car_barabanki-2025-11-04-11-56-04.jpg)
ಲಕ್ನೋ: ಟ್ರಕ್ ಹಾಗೂ ಕಾರಿನ ನಡುವೆ ಭೀಕರವಾದ ಡಿಕ್ಕಿ ಸಂಭವಿಸಿ 6 ಜನರು ಮೃತಪಟ್ಟಿದ್ದು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ಉತ್ತರ ಪ್ರದೇಶದ ಬಾರಬಂಕಿ ಜಿಲ್ಲೆಯ ಕುಟ್ಲುಪುರ ಗ್ರಾಮ ಸಮೀಪದ ಕಲ್ಯಾಣಿ ನದಿಯ ಬ್ರಿಡ್ಜ್​ ಮೇಲೆ ನಡೆದಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಫತ್ತೇಪುರ ನಗರದ ನಿವಾಸಿಗಳಾದ 8 ಜನರ ಪೈಕಿ ಸ್ಥಳದಲ್ಲೇ ನಾಲ್ವರು ಕೊನೆಯುಸಿರೆಳೆದಿದ್ದರು. ಇನ್ನಿಬ್ಬರು ಆಸ್ಪತ್ರೆಯಲ್ಲಿ ಜೀವ ಬಿಟ್ಟಿದ್ದಾರೆ. ಇದರಲ್ಲಿ ಓರ್ವ ಮಹಿಳೆ ಕೂಡ ಸೇರಿದ್ದಾರೆ. ಉಳಿದ ಇಬ್ಬರು ಆಸ್ಪತ್ರೆಯಲ್ಲಿ ಸಾವುಬದುಕಿನ ನಡುವೆ ಹೋರಾಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ ಎನ್ನಲಾಗಿದೆ.
/filters:format(webp)/newsfirstlive-kannada/media/media_files/2025/11/04/up_car-2025-11-04-11-56-17.jpg)
ಕಾರನ್ನು ಬಾಡಿಗೆ ಪಡೆದಿದ್ದ 8 ಜನರು ಟ್ರಿಪ್ ಹೋಗಿ ವಾಪಸ್​ ಫತ್ತೇಪುರಕ್ಕೆ ವಾಪಸ್ ಆಗುತ್ತಿದ್ದರು. ಟ್ರಕ್ ಹಾಗೂ ಕಾರಿನ ನಡುವಿನ ಡಿಕ್ಕಿ ಎಷ್ಟು ಭೀಕರತೆಯಿಂದ ಕೂಡಿತ್ತು ಎಂದರೆ ಕಾರನ್ನು ಕ್ರೇನ್ ಸಹಾಯದಿಂದ ಹೊರ ತೆಗೆಯಲಾಗಿದೆ. ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಗುರುತು ಸಿಗದಂತೆ ಆಗಿದೆ. ಇನ್ನು ನಂಬರ್​ ಪ್ಲೇಟ್​ ಇಲ್ಲ ಎನ್ನಲಾಗಿದ್ದು ಕಾರು ಹೊಸದು ಎಂದು ಹೇಳಲಾಗುತ್ತಿದೆ. 
 
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಕ್ಷಣೆ ಕಾರ್ಯ ಕೈಗೊಂಡು ನಾಲ್ವರು ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇದರಲ್ಲಿ ಇಬ್ಬರು ಮೃತಪಟ್ಟರು. ಕಾರು ಹಾಗೂ ಟ್ರಕ್ ಎರಡು ಒಂದೇ ದಿಕ್ಕಿನಲ್ಲಿ ರಸ್ತೆಯಲ್ಲಿ ಹಿಂದೆ ಮುಂದೆ ಚಲಿಸುತ್ತಿದ್ದವು. ಈ ವೇಳೆ ವೇಗದಲ್ಲಿದ್ದಾಗ ಕಾರು ತನ್ನ ಲೈನ್ ಬಿಟ್ಟು ಲಾರಿಯ ಲೈನ್​ಗೆ ಬಂದಿದೆ. ತಕ್ಷಣಕ್ಕೆ ಇದನ್ನು ಗಮನಿಸಿದ ಟ್ರಕ್​ ಡ್ರೈವರ್​ ಡಿಕ್ಕಿ ಹೊಡೆದಿದ್ದರಿಂದ ಭೀಕರ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅರ್ಪಿತ್ ವಿಜಯವರ್ಗಿಯ ಅವರು ಹೇಳಿದ್ದಾರೆ.   
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us