ವ್ಯಕ್ತಿಯ ಬಲಿ ಪಡೆದ 26 ಸೆಕೆಂಡ್ ವಿಡಿಯೋ.. ಲೈಕ್, ವೀವ್ಸ್​​ಗೋಸ್ಕರ ಹೋಯ್ತಾ ಜೀವ..?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಚಟ ಮತ್ತು ಸತ್ಯವಿಲ್ಲದೇ ಯಾರನ್ನಾದರೂ ದೂಷಿಸುವ ಪ್ರವೃತ್ತಿಯು ವ್ಯಕ್ತಿಯೊಬ್ಬನ ಬಲಿ ತೆಗೆದುಕೊಂಡಿದೆ ಎಂಬ ಆರೋಪಗಳು ಕೇಳಿಬಂದಿದೆ. ಕೇರಳದ ಕೋಝಿಕ್ಕೋಡ್‌ನ ಜವಳಿ ಗಿರಣಿ ಕಾರ್ಮಿಕನೊಬ್ಬ ಬದುಕಿಗೆ ಅಂತ್ಯ ಹಾಡಿದ್ದಾನೆ.

author-image
Ganesh Kerekuli
Kerala deepak
Advertisment

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಚಟ ಮತ್ತು ಸತ್ಯವಿಲ್ಲದೇ ಯಾರನ್ನಾದರೂ ದೂಷಿಸುವ ಪ್ರವೃತ್ತಿಯು ವ್ಯಕ್ತಿಯೊಬ್ಬನ ಬಲಿ ತೆಗೆದುಕೊಂಡಿದೆ ಎಂಬ ಆರೋಪಗಳು ಕೇಳಿಬಂದಿದೆ.. ಕೇರಳದ ಕೋಝಿಕ್ಕೋಡ್‌ನ ಜವಳಿ ಗಿರಣಿ ಕಾರ್ಮಿಕನೊಬ್ಬ ಬದುಕಿಗೆ ಅಂತ್ಯ ಹಾಡಿದ್ದಾನೆ. 

ದೀಪಕ್ (42) ದುಡುಕಿನ ನಿರ್ಧಾರ ತೆಗೆದುಕೊಂಡ ವ್ಯಕ್ತಿ. ಜವಳಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ದೀಪಕ್, ಕಳೆದ ಶುಕ್ರವಾರ ಕೆಲಸ ನಿಮಿತ್ತ ಸಾರಿಗೆ ಬಸ್‌ನಲ್ಲಿ ಕಣ್ಣೂರಿಗೆ ಪ್ರಯಾಣಿಸಿದ್ದರು. ಅದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಿಮ್ಜಿತಾ ಮುಸ್ತಫಾ ಎಂಬ ಮಹಿಳೆ 26 ಸೆಕೆಂಡ್​ಗಳ ರೀಲ್ಸ್ ಮಾಡಿದ್ದಳು. 

ವಿಷಯ ಏನು..?

ಜನವರಿ 16 ರಂದು ಸಿಮ್ಜಿತಾ ಮುಸ್ತಫಾ ಎಂಬ ಮಹಿಳೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಳು. ಬಸ್ಸಿನಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಮೃತ ದೀಪಕ್ ಕೂಡ ಅದೇ ಬಸ್ಸಿನಲ್ಲಿ ಪ್ರಯಾಣ ಮಾಡ್ತಿದ್ದ. ಈ ವೇಳೆ ಮಹಿಳೆ 26 ಸೆಕೆಂಡ್​ಗಳ ಸೆಲ್ಫಿ ವಿಡಿಯೋ ಮಾಡಿದ್ದಾಳೆ. ತನ್ನ ಪಕ್ಕದಲ್ಲಿ ನಿಂತಿದ್ದ ದೀಪಕ್ ಬಸ್ಸಿನಲ್ಲಿ ಜನಸಂದಣಿಯ ಲಾಭ ಪಡೆದು ಅನುಚಿತವಾಗಿ ನನ್ನನ್ನು ಸ್ಪರ್ಷಿಸುತ್ತಿದ್ದಾನೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಳು. 

ಇದನ್ನೂ ಓದಿ:ಹಿಂದೂಗಳ ಭಾವನೆಗೆ ದಕ್ಕೆ ಆರೋಪ; ರಿಂಕು ಸಿಂಗ್ ವಿರುದ್ಧ ಬಿತ್ತು ಕೇಸ್..!

ಈ ವಿಡಿಯೋ ವೈರಲ್ ಆಗಿತ್ತು. ನೆಟ್ಟಿಗರು ದೀಪಕ್ ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದರು. ಆದರೆ ಮಹಿಳೆಯ ಆರೋಪವನ್ನು ದೀಪಕ್ ನಿರಾಕರಿಸಿದ್ದರು. ಆದಾಗ್ಯೂ ಸೋಶಿಯಲ್ ಮೀಡಿಯಾದಲ್ಲಿ ನಿಂದನೆ ಶುರುವಾಗಿತ್ತು. ಇದನ್ನು ಸಹಿಸದ ಅವರು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಜನವರಿ 18 ರಂದು ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. 

ಆರಂಭದಲ್ಲಿ ಪೊಲೀಸರು, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಕುಟುಂಬ ಸದಸ್ಯರ ದೂರಿನ ಮೇರೆಗೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 108 ರ ಅಡಿಯಲ್ಲಿ ಆತ್ಮ*ತ್ಯೆಗೆ ಪ್ರಚೋದನೆ ನೀಡಿದ ಹೊಸ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಪೊಲೀಸ್ ತನಿಖೆಗೆ ಆದೇಶಿಸಿದೆ. 

ಇದನ್ನೂ ಓದಿ: ಸುತ್ತೂರು ಜಾತ್ರೆಯಲ್ಲಿ ದುರಂತ.. ಮಲಗಿದ್ದ ಭಕ್ತರ ಮೇಲೆ ಕಾರು ಹರಿದು ಓರ್ವ ಭಕ್ತ ನಿಧನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Kannada News
Advertisment