ಸುತ್ತೂರು ಜಾತ್ರೆಯಲ್ಲಿ ದುರಂತ.. ಮಲಗಿದ್ದ ಭಕ್ತರ ಮೇಲೆ ಕಾರು ಹರಿದು ಓರ್ವ ಭಕ್ತ ನಿಧನ

ಮೈಸೂರು ಸುತ್ತೂರು ಜಾತ್ರೆಯಲ್ಲಿ ಮಲಗಿದ್ದ ಭಕ್ತರ ಮೇಲೆ ಅಪರಿಚಿತ ಕಾರು ಹರಿದು ಓರ್ವ ಭಕ್ತ ಪ್ರಾಣ ಕಳೆದುಕೊಂಡಿದ್ದಾನೆ. ಜಿಎಂ ಪ್ರದೀಪ್ ಕುಮಾರ್ (36) ಮೃತ ಭಕ್ತ. ಅಸಲಿಗೆ ಆಗಿದ್ದೇನು?

author-image
Ganesh Kerekuli
Sutturu fair (1)
Advertisment

ಮೈಸೂರು ಸುತ್ತೂರು ಜಾತ್ರೆಯಲ್ಲಿ ಮಲಗಿದ್ದ ಭಕ್ತರ ಮೇಲೆ ಅಪರಿಚಿತ ಕಾರು ಹರಿದು ಓರ್ವ ಭಕ್ತ ಪ್ರಾಣ ಕಳೆದುಕೊಂಡಿದ್ದಾನೆ. ಜಿಎಂ ಪ್ರದೀಪ್ ಕುಮಾರ್ (36) ಮೃತ ಭಕ್ತ.

ಸುತ್ತೂರು ಸಮೀಪದ ಗಟ್ಟವಾಡಿ ಗ್ರಾಮದ ಜಿಎಂ ಪ್ರದೀಪ್ ಕುಮಾರ್ ಪ್ರಾಣ ಕಳೆದುಕೊಂಡಿದ್ದಾನೆ. ಮತ್ತೊಬ್ಬ ಭಕ್ತ ಗಟ್ಟವಾಡಿ ಗ್ರಾಮದ ರವಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಇದನ್ನೂ ಓದಿ: ‘ಗಿಲ್ಲಿ ಪುಣ್ಯವಂತ..’ ಬಿಗ್​ ಬಾಸ್ ವಿನ್ನರ್ ಬಗ್ಗೆ ಧ್ರುವಂತ್ ಮುತ್ತಿನಂಥ ಮಾತು-VIDEO

Sutturu fair

ಸುತ್ತೂರು ದೇವಾಲಯದ ಬಳಿ ಪೌರಾಣಿಕ ನಾಟಕವನ್ನು ವೀಕ್ಷಣೆ ಮಾಡಿ ಗದ್ದಿಗೆ ಬಳಿ ಇಬ್ಬರು ಭಕ್ತರು ಮಲಗಿದ್ದರು. ನಾಟಕ ವೀಕ್ಷಿಸಿ ಗಾಢ ನಿದ್ರೆಯಲ್ಲಿದ್ದ ಇಬ್ಬರ ಭಕ್ತರ ತಲೆಯ ಭಾಗದ ಮೇಲೆ ಕಾರು ಹರಿದಿದೆ. ನಂಜನಗೂಡಿನ ಸರ್ಕಾರಿ ಆಸ್ಪತ್ರೆ ಶವಗಾರದಲ್ಲಿ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. 

ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಇಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ. ನೊಂದ ಕುಟುಂಬಸ್ಥರು ಮತ್ತು ಗಟ್ಟವಾಡಿ ಗ್ರಾಮಸ್ಥರಿಂದ ಬಿಳಿಗೆರೆ ಪೊಲೀಸ್ ಠಾಣೆಯ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಎ 03 ಸಿ 3498 ನಂಬರಿನ ಅಪರಿಚಿತ ಕಾರು ಅಪಘಾತ ಮಾಡಿದೆ. ಅಪರಿಚಿತ ಕಾರು ಹಾಗೂ ಚಾಲಕನ ಪತ್ತೆಗೆ ಬಿಳಿಗೆರೆ ಪೊಲೀಸರು ಬಲೆ ಬೀಸಿದ್ದಾರೆ. 

ಇದನ್ನೂ ಓದಿ:ಕೋಚ್ ಗಂಭೀರ್ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್.. ಅದೆಷ್ಟು ಸರಣಿ ಸೋಲು ಸಹಿಸೋದು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Mysore Mysore news Sutturu fair
Advertisment