‘ಗಿಲ್ಲಿ ಪುಣ್ಯವಂತ..’ ಬಿಗ್​ ಬಾಸ್ ವಿನ್ನರ್ ಬಗ್ಗೆ ಧ್ರುವಂತ್ ಮುತ್ತಿನಂಥ ಮಾತು-VIDEO

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನ ಬಗ್ಗೆ ಸಹ ಸ್ಪರ್ಧಿ ಧ್ರುವಂತ್ ಮಾತನ್ನಾಡಿದ್ದಾರೆ. ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಮಾತುಕತೆಯಲ್ಲಿ, ಗಿಲ್ಲಿ ಗೆಲುವಿನ ಬಗ್ಗೆ ನನಗೆ ತುಂಬಾ ಖುಷಿ ಇದೆ. ಜನರನ್ನು ತುಂಬಾನೇ ರಂಜಿಸಿದ್ದಾರೆ ಎಂದಿದ್ದಾರೆ.

author-image
Ganesh Kerekuli
Advertisment

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನ ಬಗ್ಗೆ ಸಹ ಸ್ಪರ್ಧಿ ಧ್ರುವಂತ್ ಮಾತನ್ನಾಡಿದ್ದಾರೆ. ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಮಾತುಕತೆಯಲ್ಲಿ, ಗಿಲ್ಲಿ ಗೆಲುವಿನ ಬಗ್ಗೆ ನನಗೆ ತುಂಬಾ ಖುಷಿ ಇದೆ. ಜನರನ್ನು ತುಂಬಾನೇ ರಂಜಿಸಿದ್ದಾರೆ. ಗಿಲ್ಲಿ ಅವರೇ ನಿಮಗೆ ನನ್ನ ಕಡೆಯಿಂದ ವಿಶ್​ ಯೂ ಆಲ್​ ದಿ ಬೆಸ್ಟ್​. ತುಂಬಾ ಜನರನ್ನು ಸಂಪಾದಿಸಿದ್ದೀರಿ. ನೀವು ಪುಣ್ಯವಂತರಿದ್ದೀರಿ. ಬಹಳ ಕಡಿಮೆ ಜನರಿಗೆ ಇಂಥ ಭಾಗ್ಯ ಸಿಗೋದು. ಜನರ ನಿರೀಕ್ಷೆ ಏನಿದೆ ಅದನ್ನು ಉಳಿಸಿ. ಜನರ ಪ್ರೀತಿ ಪಡೆಯೋದು ಸುಲಭವಿಲ್ಲ. ನಿಮ್ಮ ತಂದೆ, ತಾಯಿ ಮಾಡಿರುವ ಪುಣ್ಯದ ಕೆಲಸದಿಂದ ನಿಮಗೆ ಅದು ದಕ್ಕಿದೆ. ಅದನ್ನು ಉಳಿಸಿ, ಬಹಳ ಜಾಗೃತೆಯಿಂದ ಬೆಳಸಿ ಎಂದಿದ್ದಾರೆ. 

ಇದನ್ನೂ ಓದಿ: ರಕ್ಷಿತಾ ಬಗ್ಗೆ ಮಾತನ್ನಾಡುತ್ತ ಕಣ್ಣೀರಿಟ್ಟ ಅಶ್ವಿನಿ ಗೌಡ -VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Bigg Boss Kannada 12 Gilli Nata Bigg boss bigg boss dhruvanth
Advertisment