/newsfirstlive-kannada/media/media_files/2025/11/13/gambhir-2025-11-13-09-43-52.jpg)
ಕಳೆದೆರಡು ವರ್ಷಗಳಲ್ಲಿ ಟೀಮ್ ಇಂಡಿಯಾ ತವರಿನಲ್ಲಿ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಸಾಲು ಸಾಲು ಸರಣಿಗಳನ್ನ ಸೋತಿದೆ. ಅದ್ರಲ್ಲೂ ಇತ್ತೀಚಿಗೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಸೋಲು, ಅಭಿಮಾನಿಗಳಿಗೆ ಇನ್ನಿಲ್ಲದಂತೆ ಕಾಡ್ತಿದೆ.
ಬರೋಡಾ ಏಕದಿನ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ, ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು. ನಂತರ ರಾಜ್​ಕೋಟ್ ಮತ್ತು ಇಂದೋರ್​​​ ಏಕದಿನ ಪಂದ್ಯಗಳಲ್ಲಿ ಮುಗ್ಗರಿಸಿ, ಸರಣಿ ಸೋಲು ಅನುಭವಿಸಿತು. ಮುನ್ನಡೆ ಸಾಧಿಸಿ ಸತತ ಎರಡು ಪಂದ್ಯಗಳನ್ನ ಸೋಲುತ್ತೆ ಅಂದ್ರೆ, ಊಹಿಸಿಕೊಳ್ಳೋದಕ್ಕೂ ಸಾಧ್ಯವಿಲ್ಲ.
ನ್ಯೂಜಿಲೆಂಡ್ 'C' ಟೀಮ್​​​​​​​​​​​​​​​​​​​​ ವಿರುದ್ಧ ಸೋಲು..!
ಇತ್ತೀಚೆಗೆ ಮುಕ್ತಾಯವಾದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಸೋತಿದ್ದು ಬಲಿಷ್ಟ ನ್ಯೂಜಿಲೆಂಡ್ ತಂಡದ ವಿರುದ್ಧದ ಅಲ್ಲ.. ಕೇನ್ ವಿಲಿಯಮ್ಸನ್, ರಚ್ಚಿನ್ ರವೀಂದ್ರ, ಟಾಮ್ ಲ್ಯಾಥಮ್, ಮಾರ್ಕ್ ಚಾಪ್​ಮೆನ್, ಮಿಚ್ಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿರಂತಹ ಅನುಭವಿ ಆಟಗಾರರು ತಂಡದಲ್ಲಿ ಇಲ್ಲದಿದ್ರೂ ಟೀಮ್ ಇಂಡಿಯಾ ವಿರುದ್ಧ ಏಕದಿನ ಸರಣಿ ಗೆದ್ದಿದೆ. ಕಿವೀಸ್​​ನ ಯುವ ಮತ್ತು ಅನಾನುಭವಿ ಆಟಗಾರರೇ, ನಂಬರ್.1 ತಂಡವನ್ನ ಬಗ್ಗಬಡಿದಿದ್ದಾರೆ.
ಇದನ್ನೂ ಓದಿ: ಶಬರಿಮಲೆ ಚಿನ್ನ ಕಳ್ಳತನ ಕೇಸ್​.. ಬೆಂಗಳೂರು, ಬಳ್ಳಾರಿಯಲ್ಲಿ ED ದಾಳಿ..!
/filters:format(webp)/newsfirstlive-kannada/media/media_files/2025/11/27/gambhir-and-gill-2025-11-27-10-31-33.jpg)
ಸೋಲಿಗೆ ಹೊಣೆ ಯಾರು..?
ಸದ್ಯ ಟೀಮ್ ಇಂಡಿಯಾ ಸೋಲಿಗೆ ಹಲವು ಕಾರಣಗಳಿರಬಹುದು. ಆದ್ರೆ ಸರಣಿ ಸೋಲಿಗೆ ಹೊಣೆ ಯಾರು? ಕ್ಯಾಪ್ಟನ್ ಶುಭ್ಮನ್ ಗಿಲ್ಲಾ..? ಆಟಗಾರರಾ..? ಕೋಚ್ ಗೌತಮ್ ಗಂಭೀರಾ..? ಸಪೋರ್ಟಿಂಗ್​​​​​​​​​​​​​​​​ ಸ್ಟಾಫಾ..? ಅಥವಾ ಸೆಲೆಕ್ಟರ್ಸಾ..? ಯಾರಾದ್ರೂ ಒಬ್ಬರು ಸೋಲಿಗೆ ಹೊಣೆ ಹೊರಲೇಬೇಕಲ್ವಾ..? ಸರಣಿ ಸೋಲಿನ ಬಳಿಕ ಯಾರಿಗೂ ಸಂಬಂಧ ಇಲ್ಲ ಅನ್ನೋ ರೀತಿ ಇದ್ದಾರೆ. ಇದಕ್ಕೆ ಉತ್ತರ ಸಿಗೋದು ಯಾವಾಗ..?
ಗಂಭೀರ್ ಅವಧಿಯಲ್ಲಿ ಸರಣಿ ಸೊಲು ಎಷ್ಟು ಗೊತ್ತಾ?
ಜುಲೈ 9, 2024. ಗೌತಮ್ ಗಂಭೀರ್ ಕೋಚ್ ಹುದ್ದೆ ಅಲಂಕರಿಸಿದ ದಿನ. ಗಂಭೀರ್​​​, ಟೀಮ್ ಇಂಡಿಯಾ ಕೋಚ್ ಆಗೋಕೂ ಮುನ್ನ ಸಾಕಷ್ಟು ನಿರೀಕ್ಷೆಗಳಿತ್ತು. ಆದ್ರೆ ಎಲ್ಲಾ ನಿರೀಕ್ಷೆಗಳು ಹುಸಿಯಾಯ್ತು. ಗಂಭೀರ್ ಅವಧಿಯಲ್ಲಿ ಟೀಮ್ ಇಂಡಿಯಾ 3 ಟೆಸ್ಟ್ ಸರಣಿ ಮತ್ತು 2 ಏಕದಿನ ಸರಣಿಗಳನ್ನ ಸೋತಿದೆ. ಗಂಭೀರ್ ಕೋಚ್ ಆಗಿ ಎರಡು ವರ್ಷಗಳಾಗಲಿಲ್ಲ. ಆಗಲೇ 5 ಪ್ರಮುಖ ಸರಣಿಗಳನ್ನ ಸೋತು, ಟೀಮ್ ಇಂಡಿಯಾ ಮುಖಭಂಗ ಅನುಭವಿಸಿದೆ.
ಇದನ್ನೂ ಓದಿ: ‘ಗಿಲ್ಲಿ ಪುಣ್ಯವಂತ..’ ಬಿಗ್​ ಬಾಸ್ ವಿನ್ನರ್ ಬಗ್ಗೆ ಧ್ರುವಂತ್ ಮುತ್ತಿನಂಥ ಮಾತು-VIDEO
/filters:format(webp)/newsfirstlive-kannada/media/media_files/2025/11/08/gambhir-and-surya-kumara-yadav-2025-11-08-17-42-02.jpg)
ಕೋಚ್ ಗೌತಮ್ ಗಂಭೀರ್​ಗೂ ಮುನ್ನ ಟೀಮ್ ಇಂಡಿಯಾಕ್ಕೆ ರಾಹುಲ್ ದ್ರಾವಿಡ್ ಮತ್ತು ರವಿ ಶಾಸ್ತ್ರಿ ಕೋಚ್​ ಹುದ್ದೆ ಅಲಂಕರಿಸಿದ್ರು. ದ್ರಾವಿಡ್ ಮಾರ್ಗದಶರ್ನದಲ್ಲಿ ಟೀಮ್ ಇಂಡಿಯಾ ತವರಿನಲ್ಲಿ ಡಾಮಿನೇಟ್ ಮಾಡಿತ್ತು. ರವಿ ಶಾಸ್ತ್ರಿ ಅವಧಿಯಲ್ಲಿ ಟೀಮ್ ಇಂಡಿಯಾ, ವಿದೇಶಗಳಲ್ಲಿ ಹೆಚ್ಚು ಹೆಚ್ಚು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಆದ್ರೆ ಗಂಭೀರ್ ಟೀಮ್ ಇಂಡಿಯಾ ಗುರವಾದ ಮೇಲೆ, ಎದುರಾಳಿಗಳು ನಮ್ಮ ತವರಿನಲ್ಲಿ ನಮ್ಮ ವಿರುದ್ಧವೇ ಪಾರುಪಾತ್ಯ ಸಾಧಿಸಲು ಆರಂಭಿಸಿದ್ದಾರೆ.​​​​​​​​
ಗೌತಮ್ ಗಂಭೀರ್ ಒಳ್ಳೆ ಆಟಗಾರ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಉತ್ತಮ ಕೋಚ್ ಅಲ್ಲವೇ ಅಲ್ಲ. ಗಂಭೀರ್ ಸ್ಟ್ರಾಟಜಿ, ಗೇಮ್ ಪ್ಲಾನ್, ಮ್ಯಾಚ್ ಟ್ಯಾಕ್ಟಿಕ್ಸ್ ಎಲ್ಲವೂ ಜಸ್ಟ್ ಫ್ಲಾಪ್ ಅಲ್ಲ. ಅಟ್ಟರ್ ಫ್ಲಾಪ್ ಆಗಿವೆ. ಇನ್ನಾದ್ರೂ ಗಂಭೀರ್ ಕೋಚ್ ಆಗಿ ಬದಲಾಗ್ತಾರಾ? ನೋಡೋಣ.
ಇದನ್ನೂ ಓದಿ: ರಕ್ಷಿತಾ ಬಗ್ಗೆ ಮಾತನ್ನಾಡುತ್ತ ಕಣ್ಣೀರಿಟ್ಟ ಅಶ್ವಿನಿ ಗೌಡ -VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us