/newsfirstlive-kannada/media/media_files/2025/10/25/ayyappa-2025-10-25-19-27-08.jpg)
ಬೆಂಗಳೂರು: ಶಬರಿಮಲೆಯಲ್ಲಿ ಚಿನ್ನ ಕಳವು ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ ಏಕಕಾಲದಲ್ಲಿ ಬಳ್ಳಾರಿ, ತಿರುವನಂತಪುರಂನಲ್ಲೂ ಇಡಿ ದಾಳಿ ಮಾಡಿದೆ.
ಬೆಂಗಳೂರಿನ ಶ್ರೀರಾಂಪುರ ಅಯ್ಯಪ್ಪಸ್ವಾಮಿ ದೇವಸ್ಥಾನ, ಅಯ್ಯಪ್ಪ ದೇವಸ್ಥಾನದ ಟ್ರಸ್ಟಿ ಮನೆ ಮೇಲೆ ದಾಳಿಯಾಗಿದೆ. ದಾಳಿ ಮಾಡಿರುವ ಅಧಿಕಾರಿಗಳು ಶೋಧಕಾರ್ಯ ನಡೆಸ್ತಿದ್ದಾರೆ.
ಇದನ್ನೂ ಓದಿ:ಸತತ ಐದನೇ ಗೆಲುವು.. ಪ್ಲೇ-ಆಫ್​ಗೆ ಅರ್ಹತೆ ಪಡೆದ ನಮ್ಮ RCB
/filters:format(webp)/newsfirstlive-kannada/media/media_files/2026/01/09/sabarimala-temple-chief-priest-arrested-2026-01-09-18-35-53.jpg)
ಏನಿದು ಪ್ರಕರಣ..?
2019 ರಲ್ಲಿ.. ಟ್ರಾವಂಕೂರ್ ದೇವಸ್ವಂ ಬೋರ್ಡ್.. 42.8 ಕೆಜಿ ತೂಕದ ವಸ್ತುಗಳನ್ನ ಚೆನ್ನೈನಲ್ಲಿರುವ ಉನ್ನಿಕೃಷ್ಣನ್ ಪೊಟ್ಟಿಗೆ ಹಸ್ತಾಂತರಿಸಿತ್ತು. ಚಿನ್ನ ಲೇಪಿತ ತಾಮ್ರದ ತಟ್ಟೆಗಳನ್ನ ಮತ್ತೆ ದೇವಸ್ಥಾನಕ್ಕೆ ತಂದಾಗ, ಅವುಗಳ ತೂಕವು 38.258 ಕೆಜಿಗೆ ಇಳಿಕೆಯಾಗಿತ್ತು. ಉಳಿದಿದ್ದ ಹೆಚ್ಚುವರಿ 4 ಕೆಜಿ ಚಿನ್ನ ಎಲ್ಲಿದೆ ಎಂಬ ವಿಚಾರವಾಗಿ SIT ತನಿಖೆ ನಡೆಸುತ್ತಿದೆ. 4 ಕೆ.ಜಿ ಪೈಕಿ 475 ಗ್ರಾಂ ತೂಕದ ಚಿನ್ನವನ್ನ ಬಳ್ಳಾರಿ ರೊದ್ದಂ ಜ್ಯುವೆಲ್ಲರಿ ಮಾಲೀಕ ಗೋವರ್ಧನ್​ಗೆ ಮಾರಾಟ ಮಾಡಿರೋದು ಪತ್ತೆಯಾಗಿದೆ. ಉನ್ನಿಕೃಷ್ಣನ್ ಪೊಟ್ಟಿ ದಕ್ಷಿಣ ಭಾರತದ ರಾಜ್ಯಗಳ ಹಲವು ದೇವಾಲಯಗಳಿಗೆ ಸಾಗಿಸಿರೋದು ಬೆಳಕಿಗೆ ಬಂದಿದೆ. ಇದೇ ಉನ್ನಿಕೃಷ್ಣನ್ ವಿರುದ್ಧ 475 ಗ್ರಾಂ ಚಿನ್ನದ ಪ್ಲೇಟ್ ಕದ್ದಿರುವ ಆರೋಪ ಇದೆ.
ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಡಿಜಿಪಿ ರಾಮಚಂದ್ರರಾವ್ ತಲೆದಂಡ..!
ದ್ವಾರಪಾಲಕ ಮೂರ್ತಿಗಳ ಮೇಲಿನ ಚಿನ್ನಕ್ಕೆ ಎಲೆಕ್ಟ್ರೋಪ್ಲೆಟಿಂಗ್ ಮಾಡಲು ಉನ್ನಿಕೃಷ್ಣನ್​ಗೆ ಚಿನ್ನದ ಫಲಕ ಕೊಡಲಾಗಿತ್ತು. ಅಂತೆಯೇ ತಿರುವಾಂಕೂರು ದೇವಸ್ವ ಮಂಡಳಿಯಿಂದ ಚಿನ್ನ ಲೇಪಿತ ತಾಮ್ರದ ಹೊದಿಕೆಯನ್ನು ಉನ್ನಿಕೃಷ್ಣನ್ ಪಡೆದುಕೊಂಡಿದ್ದ. ಆನಂತರ ಉನ್ನಿಕೃಷ್ಣನ್ ಇದನ್ನು ಅನುಮತಿ ಇಲ್ಲದೆ ದಕ್ಷಿಣ ಭಾರತದ ರಾಜ್ಯಗಳ ಹಲವು ದೇವಾಲಯಗಳು ಹಾಗೂ ಮನೆಗಳಿಗೆ ಸಾಗಿಸಿದ್ದ. ಈ ಪೈಕಿ 475 ಗ್ರಾಂ ಚಿನ್ನವನ್ನು ಬಲ್ಲಾರಿಯ ಗೋವರ್ಧನ್ ಅನ್ನೋರಿಗೆ ಮಾರಾಟ ಮಾಡಿದ್ದಾನೆಂಬ ಆರೋಪ ಇದೆ. ಚಿನ್ನ ಕಳವು, ಮಾರಾಟಕ್ಕೆ ಉನ್ನಿಕೃಷ್ಣನ್​ಗೆ ಶಬರಿಮಲೆ ದೇವಸ್ವಂ ಮಂಡಳಿಯ ಮಾಜಿ ಆಡಳಿತಾಧಿಕಾರಿ ಬಾಬು ಮುರಾರಿ ಸಹಾಯ ಮಾಡಿರುವ ಆರೋಪ ಇದೆ. 2019ರವರೆಗೆ ಉನ್ನಿಕೃಷ್ಣನ್ ವಿಐಪಿ ಭಕ್ತರಿಗೆ ದೇವರ ದರ್ಶನಕ್ಕೆ ಕೋ-ಆರ್ಡಿನೇಟರ್ ಆಗಿ ಕೆಲಸ ಮಾಡ್ತಿದ್ದ. ಹೀಗಾಗಿ ಹಲವು ಪ್ರಭಾವಿಗಳ ಸಂಪರ್ಕ ಸಾಧಿಸಿದ್ದ.
ಇದನ್ನೂ ಓದಿ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ನಿತಿನ್ ನಬಿನ್ : ನಾಳೆ ಅಧಿಕಾರ ಸ್ವೀಕಾರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us