/newsfirstlive-kannada/media/media_files/2026/01/20/rcb-9-2026-01-20-08-38-52.jpg)
ವಡೋದರಾದಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಸುಲಭವಾಗಿ ಗೆಲವು ಸಾಧಿಸಿದೆ. ಈ ಮೂಲಕ 2026 ಮಹಿಳಾ WPL ​​​​​ನಲ್ಲಿ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇ-ಆಫ್​​ಗೆ ಅರ್ಹತೆ ಪಡೆದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 178 ರನ್ ಗಳಿಸಿತು. 179ರನ್​ಗಳ ಗುರಿ ಬೆನ್ನತ್ತಿದ ಗುಜರಾತ್ ತಂಡವನ್ನು ಆರ್​​ಸಿಬಿ ಬೌಲರ್​ಗಳು ಕಾಡಿದ್ರು. ಆರ್​ಸಿಬಿ ಸಾಂಘಿಕ ದಾಳಿಗೆ ತತ್ತರಿಸಿದ ಗುಜರಾತ್ ಬರೋಬ್ಬರಿ 61 ರನ್​ಗಳಿಂದ ಸೋಲೊಪ್ಪಿಕೊಂಡಿದೆ.
/filters:format(webp)/newsfirstlive-kannada/media/media_files/2026/01/20/rcb-10-2026-01-20-08-47-27.jpg)
ಆರ್​ಸಿಬಿ ಪರ ಸ್ಮೃತಿ ಮಂದಾನ 26 ರನ್​ಗಳಿಸಿದ್ರೆ, ಗೌತಮಿ ನಾಯ್ಕ್ 73 ರನ್​ಗಳಿಸಿದರು. ಇನ್ನು ರಿಚಾ ಘೋಷ್ ಮೂರು ಸಿಕ್ಸರ್​​ನೊಂದಿಗೆ 27 ರನ್​ಗಳಿಸಿದರು. ಬೌಲಿಂಗ್​ನಲ್ಲಿ ಸಯಾಲಿ ಮೂರು ವಿಕೆಟ್ ಕಿತ್ತರು. ನದಿನೆ ಎರಡು ವಿಕೆಟ್ ಪಡೆದರೆ, ಲಾರೆನ್ ಬೆಲ್, ಶ್ರೇಯಾಂಕ ಪಾಟೀಲ್, ರಾಧಾ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
ಪಾಯಿಂಟ್ಸ್​ ಟೇಬಲ್​​ನಲ್ಲಿ ಅಗ್ರಸ್ಥಾನ
ಇನ್ನು ನಮ್ಮ ಆರ್​ಸಿಬಿ ಪಾಯಿಂಟ್ಸ್​ ಟೇಬಲ್​​ನಲ್ಲಿ ಅಗ್ರಸ್ಥಾನದಲ್ಲಿದೆ. ಸತತ ಐದು ಪಂದ್ಯಗಳನ್ನು ಗೆದ್ದುಕೊಂಡಿರುವ ಆರ್​ಸಿಬಿ, 10 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿರುವ ಮುಂಬೈ ನಾಲ್ಕು ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ. ಅದೇ ರೀತಿ UP Warriorz, ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಕ್ರಮವಾಗಿ ಮೂರು, ನಾಲ್ಕು ಹಾಗೂ ಐದನೇ ಸ್ಥಾನವನ್ನು ಪಡೆದುಕೊಂಡಿವೆ.
ಇದನ್ನೂ ಓದಿ: ಕನ್ನಡತಿ ಶ್ರೇಯಾಂಕಾ ಮತ್ತೆ ಶೈನಿಂಗ್​.. ಟೀಮ್​ ಇಂಡಿಯಾ ಡೋರ್​ ಓಪನ್..!?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us