ಕನ್ನಡತಿ ಶ್ರೇಯಾಂಕಾ ಮತ್ತೆ ಶೈನಿಂಗ್​.. ಟೀಮ್​ ಇಂಡಿಯಾ ಡೋರ್​ ಓಪನ್..!?

ಮಹಿಳಾ ಪ್ರೀಮಿಯರ್​ ಲೀಗ್​ ಸೀಸನ್​ 4ರಲ್ಲಿ ಕನ್ನಡತಿಯ ದರ್ಬಾರ್​ ಜೋರಾಗಿದೆ. ಶ್ರೇಯಾಂಕಾ ಪಾಟೀಲ್​ ಶೈನಿಂಗ್​ ಪರ್ಫಾಮೆನ್ಸ್​ಗೆ ಬ್ಯಾಟರ್ಸ್​ ದಂಗಾಗಿದ್ದಾರೆ. ಟಾರ್ಗೆಟ್​ ಟಿ20 ವಿಶ್ವಕಪ್​ ಎಂದು ಅಖಾಡಕ್ಕೆ ಕಮ್​ಬ್ಯಾಕ್​ ಮಾಡಿರೋ ಶ್ರೇಯಾಂಕಾ, ಸೆಲೆಕ್ಟರ್ಸ್​ಗೆ ಆಟದಿಂದಲೇ ಸಂದೇಶ ರವಾನೆ ಮಾಡ್ತಿದ್ದಾರೆ.

author-image
Ganesh Kerekuli
Shreyanka Patil (3)
Advertisment
  • ಗುಜರಾತ್​ ವಿರುದ್ಧ ‘ಫೈವ್​​ಸ್ಟಾರ್’​ ಪರ್ಫಾಮೆನ್ಸ್​
  • ಕಮ್​ಬ್ಯಾಕ್​ ಸೀಸನ್​ನಲ್ಲಿ ಕನ್ನಡತಿಯ ಕಮಾಲ್​
  • ಟಿ20 ವಿಶ್ವಕಪ್​ ಆಡಲು ಶ್ರೇಯಾಂಕಾ ಶಪಥ​

ಮಹಿಳಾ ಪ್ರೀಮಿಯರ್​ ಲೀಗ್​ ಸೀಸನ್​ 4ರಲ್ಲಿ ಕನ್ನಡತಿಯ ದರ್ಬಾರ್​ ಜೋರಾಗಿದೆ. ಶ್ರೇಯಾಂಕಾ ಪಾಟೀಲ್​ ಶೈನಿಂಗ್​ ಪರ್ಫಾಮೆನ್ಸ್​ಗೆ ಬ್ಯಾಟರ್ಸ್​ ದಂಗಾಗಿದ್ದಾರೆ. ಟಾರ್ಗೆಟ್​ ಟಿ20 ವಿಶ್ವಕಪ್​ ಎಂದು ಅಖಾಡಕ್ಕೆ ಕಮ್​ಬ್ಯಾಕ್​ ಮಾಡಿರೋ ಶ್ರೇಯಾಂಕಾ, ಸೆಲೆಕ್ಟರ್ಸ್​ಗೆ ಆಟದಿಂದಲೇ ಸಂದೇಶ ರವಾನೆ ಮಾಡ್ತಿದ್ದಾರೆ. 

ಮಹಿಳಾ ಪ್ರೀಮಿಯರ್​​ ಲೀಗ್​ ಸೀಸನ್​ 4ರಲ್ಲಿ ಆರ್​​​ಸಿಬಿ ಜಬರ್ದಸ್ತ್​ ಪರ್ಫಾಮೆನ್ಸ್​ ನೀಡ್ತಿದೆ. ರನ್​ಭೂಮಿಯಲ್ಲಿ ಸ್ಮೃತಿ ಮಂದಾನ ಸೈನ್ಯ ರಣಕೇಕೆ ಹಾಕ್ತಿದೆ. ಆರಂಭಿಕ ಹಂತದಲ್ಲೇ ಮೇಲುಗೈ ಸಾಧಿಸಿ 2ನೇ ಟ್ರೋಫಿಯತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಆರ್​​​ಸಿಬಿ ಈ ಸಕ್ಸಸ್​​ಗೆ ಕನ್ನಡತಿಯ ಕೊಡುಗೆ ಮಹತ್ವದ್ದು. ಈ ಸೀಸನ್​ನಲ್ಲಿ ಕರ್ನಾಟಕದ ಶ್ರೇಯಾಂಕಾ ಪಾಟೀಲ್​ ಆರ್​​​ಸಿಬಿಯ ಗೇಮ್​ ಚೇಂಜರ್​ ಆಗಿದ್ದಾರೆ. 

ಇದನ್ನೂ ಓದಿ: ಗಿಲ್ಲಿ ನಟನಿಗೆ ಶುಭ ಹಾರೈಸಿದ ಕುಮಾರಸ್ವಾಮಿ.. ಏನು ಹೇಳಿದ್ದಾರೆ ಗೊತ್ತಾ..?

Shreyanka patil (1)

WPL-4ರಲ್ಲಿ ಶ್ರೇಯಾಂಕಾ ಪಾಟೀಲ್​ ಶೈನಿಂಗ್​

ಈ ಸೀಸನ್​ನಲ್ಲಿ ಶ್ರೇಯಾಂಕಾ ಫುಲ್​ ಶೈನಿಂಗ್​ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಕನ್ನಡತಿಯ ಸ್ಪಿನ್​ ಮ್ಯಾಜಿಕ್​ ಮುಂದೆ ಕಂಗಾಲಾಗಿ ಬ್ಯಾಟರ್​​ಗಳು ಮಂಡಿಯೂರ್ತಿದ್ದಾರೆ. ದಿಗ್ಗಜ ಆಟಗಾರ್ತಿಯರಿಗೆ 23 ವರ್ಷದ ಶ್ರೇಯಾಂಕಾ ವಿಕೆಟ್​​ ಬೇಟೆಯಲ್ಲಿ ಟಫ್ ಪೈಪೋಟಿ ಕೊಡ್ತಿದ್ದಾರೆ. ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ಮೂಲಕ  ಹರಿಸ್ತಾ ಇರೋ ಕರುನಾಡ ಬೆಡಗಿ ಸೀಸನ್​ 4ರಲ್ಲಿ ಹೊಸ ಹವಾ ಸೃಷ್ಟಿಸಿದ್ದಾರೆ. 

ಇದನ್ನೂ ಓದಿ:

ಗುಜರಾತ್​ ವಿರುದ್ಧ ಫೈವ್​​ಸ್ಟಾರ್​ ಪರ್ಫಾಮೆನ್ಸ್​

ಗುಜರಾತ್​ ಜೈಂಟ್ಸ್​ ವಿರುದ್ಧದ ಪಂದ್ಯದಲ್ಲಂತೂ ಶ್ರೇಯಾಂಕಾ ಅವಿಸ್ಮರಣೀಯ ಪರ್ಫಾಮೆನ್ಸ್​ ನೀಡಿದ್ರು. ಗುಜರಾತ್​​ ಬ್ಯಾಟರ್ಸ್​​ಗೆ ಸಖತ್​ ಕಾಟ ಕೊಟ್ಟ ಶ್ರೇಯಾಂಕಾ 5 ವಿಕೆಟ್ ಬೇಟೆಯಾಡಿದ್ರು. ಈ ಮೂಲಕ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಚಿಕ್ಕ ವಯಸ್ಸಿಗೆ 5 ವಿಕೆಟ್​ ಬೇಟೆಯಾಡಿದ ಬೌಲರ್​ ಎಂಬ ದಾಖಲೆ ಬರೆದ್ರು. ಪಂದ್ಯದಲ್ಲಿ 3.5 ಓವರ್​​ ಬೌಲಿಂಗ್​ ಮಾಡಿದ ಶ್ರೇಯಾಂಕಾ ಬಿಟ್ಟು ಕೊಟ್ಟಿದ್ದು ಕೇವಲ 23 ರನ್​.

ಇದನ್ನೂ ಓದಿ: ‘ಸುದೀಪಣ್ಣ ಕೈ ಎತ್ತಿದಾಗ ಎದೆ ಧಸಕ್ ಆಗ್ಬಿಡ್ತು..’ ಗಿಲ್ಲಿ ನಟನ ಫಸ್ಟ್ ರಿಯಾಕ್ಷನ್ ಏನು..?

Shreyanka patil (2)

ಕಮ್​ಬ್ಯಾಕ್​ ಸೀಸನ್​ನಲ್ಲಿ ಕನ್ನಡತಿಯ ಕಮಾಲ್

2025ರ ಮಹಿಳಾ ಪ್ರೀಮಿಯರ್​​ ಲೀಗ್​ ವೇಳೆ ದುರಾದೃಷ್ಠ ಶ್ರೇಯಾಂಕಾಗೆ ಕಾಡಿತ್ತು. ಇಂಜುರಿಗೆ ತುತ್ತಾದ ಶ್ರೇಯಾಂಕಾ ಸೀಸನ್​ ಆರಂಭದಲ್ಲೇ ಟೂರ್ನಿಯಿಂದ ಹೊರಬಿದ್ರು. ಗಾಯದಿಂದ ಕಂಪ್ಲೀಟ್​ ಫಿಟ್​ ಆಗೋ ಪ್ರಕ್ರಿಯೆಯಲ್ಲಿ ತಿಂಗಳುಗಳೇ ಉರುಳಿ ಹೋದ್ವು. 11 ತಿಂಗಳ ಬಳಿಕ ಕೆರಬಿಯನ್​ ಪ್ರೀಮಿಯರ್​​ ಲೀಗ್​ನಲ್ಲಿ ಮೈದಾನಕ್ಕೆ ಮರಳಿದ್ರೂ ಕೂಡ ನೀಡಿದ್ದು ಸಾಧಾರಣ ಪರ್ಫಾಮೆನ್ಸ್​.! ಆದ್ರೇ, ಈಗ WPLನಲ್ಲಿ ಅಸಲಿ ಕಮ್​ಬ್ಯಾಕ್ ಮಾಡಿದ್ದಾರೆ. ಈ ಸೀಸನ್​ನಲ್ಲಿ ಆಡಿದ ಪಂದ್ಯಗಳಲ್ಲೇ ವಿಕೆಟ್​ ಬೇಟೆಯಾಡಿ ಎಲ್ಲರ ಗಮನ ಸೆಳೆದಿದ್ದಾರೆ. 

ಟಿ20 ವಿಶ್ವಕಪ್​ ಆಡಲು ಶ್ರೇಯಾಂಕಾ ಶಪಥ

ದುರಾದೃಷ್ಟವಶಾತ್​ 2025ರ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶ್ರೇಯಾಂಕಾಗೇ ಆಡೋಕೆ ಆಗಲಿಲ್ಲ. ಆದ್ರೆ, 2024ರಲ್ಲಿ ಕೊನೆಯ ಬಾರಿ ಬ್ಲ್ಯೂ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದ ಶ್ರೇಯಾಂಕಾ, ಈ ವರ್ಷ ನಡೆಯೋ ಟಿ20 ವಿಶ್ವಕಪ್ ಆಡೋ ಮಹಾದಾಸೆ ಹೊಂದಿದ್ದಾರೆ. ಕಮ್​ಬ್ಯಾಕ್​ಗೆ WPL ವೇದಿಕೆಯನ್ನ ಅಸ್ತ್ರವಾಗಿ ಬಳಸಿಕೊಂಡು 11 ತಿಂಗಳ ಬಳಿಕ ಟೀಮ್​ ಇಂಡಿಯಾಗೆ ಮರಳಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಸೆಲೆಕ್ಟ್​ ಆಗಿರೋ ಕನ್ನಡತಿ, ಇದೀಗ ಪ್ಲೇಯಿಂಗ್​ ಇಲೆವೆನ್​​​ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳೋ ಯತ್ನದಲ್ಲಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಏಕಾಂಗಿ ಹೋರಾಟ ವ್ಯರ್ಥ.. ಭಾರತದ ನೆಲದಲ್ಲಿ ಚೊಚ್ಚಲ ಏಕದಿನ ಸರಣಿ ಗೆದ್ದ ನ್ಯೂಜಿಲೆಂಡ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Shreyanka Patil WPL 2026
Advertisment