ಕೊಹ್ಲಿ ಏಕಾಂಗಿ ಹೋರಾಟ ವ್ಯರ್ಥ.. ಭಾರತದ ನೆಲದಲ್ಲಿ ಚೊಚ್ಚಲ ಏಕದಿನ ಸರಣಿ ಗೆದ್ದ ನ್ಯೂಜಿಲೆಂಡ್..!

ಬಿಗ್​​​ ಟಾರ್ಗೆಟ್​ ಚೇಸಿಂಗ್​ಗಿಳಿದ ಟೀಮ್​ ಇಂಡಿಯಾ ಆರಂಭದಲ್ಲೇ ಎದುರಿಸಿದ್ದು ಆಘಾತವನ್ನ. ಆದ್ರೆ ಕಿಂಗ್​ ಕೊಹ್ಲಿ ರನ್​ಭೂಮಿಯಲ್ಲಿ ವೀರ ಸೇನಾನಿಯಂತೆ ಹೋರಾಡಿದ್ರು. ಕೊಹ್ಲಿಯ ಹೋರಾಟ ಅಂತ್ಯದಲ್ಲಿ ವ್ಯರ್ಥವಾಯ್ತು. ಹಾಗಾದ್ರೆ ಟೀಮ್​ ಇಂಡಿಯಾ ಎಡವಿದ್ದೆಲ್ಲಿ?

author-image
Ganesh Kerekuli
Virat kohli (8)
Advertisment
  • ಉತ್ತಮ ಆರಂಭ ನೀಡಿದ ರೋಹಿತ್, ಶುಭ್​ಮನ್​
  • ಸೈಲೆಂಟಾಗಿ ಪೆವಿಲಿಯನ್​ ಸೇರಿದ ರಾಹುಲ್, ಶ್ರೇಯಸ್​
  • 54ನೇ ಏಕದಿನ ಶತಕ ಸಿಡಿಸಿ ಆಸರೆಯಾದ ವಿರಾಟ್​ ಕೊಹ್ಲಿ

ಬಿಗ್​​​ ಟಾರ್ಗೆಟ್​ ಚೇಸಿಂಗ್​ಗಿಳಿದ ಟೀಮ್​ ಇಂಡಿಯಾ ಆರಂಭದಲ್ಲೇ ಎದುರಿಸಿದ್ದು ಆಘಾತವನ್ನ. ಸ್ಟಾರ್​​ ಬ್ಯಾಟರ್​​ಗಳೆಲ್ಲಾ ಸೈಲೆಂಟಾಗಿ ಪೆವಿಲಿಯನ್​ ಸೇರಿದ್ರು. ಆದ್ರೆ ಕಿಂಗ್​ ಕೊಹ್ಲಿ ರನ್​ಭೂಮಿಯಲ್ಲಿ ವೀರ ಸೇನಾನಿಯಂತೆ ಹೋರಾಡಿದ್ರು. ಕೊಹ್ಲಿಯ ಹೋರಾಟ ಅಂತ್ಯದಲ್ಲಿ ವ್ಯರ್ಥವಾಯ್ತು. ಹಾಗಾದ್ರೆ ಟೀಮ್​ ಇಂಡಿಯಾ ಎಡವಿದ್ದೆಲ್ಲಿ?

338 ರನ್​​ಗಳ ಬಿಗ್​ ಟಾರ್ಗೆಟ್​ ಚೇಸಿಂಗ್​ಗಿಳಿದ ಟೀಮ್​ ಇಂಡಿಯಾಗೆ ಓಪನರ್ಸ್​ ಕೈ ಕೊಟ್ರು. ರೋಹಿತ್​​ ಶರ್ಮಾ 11 ರನ್​ಗಳಿಸಿ ಆಟ ಅಂತ್ಯಗೊಳಿಸಿದ್ರೆ,  ಕ್ಯಾಪ್ಟನ್​ ಶುಭ್​ಮನ್​ ಗಿಲ್​ ಮತ್ತೊಂದು ಫ್ಲಾಪ್​ ಶೋ ನೀಡಿದ್ರು. 23 ರನ್​​ಗೆ ಶುಭ್​​ಮನ್​ ಸೈಲೆಂಟ್​ ಆಗಿ ಪೆವಿಲಿಯನ್​ ಸೇರಿದ್ರು. 

ಇದನ್ನೂ ಓದಿ: ರನ್ನರ್‌ ಅಪ್‌ ರಕ್ಷಿತಾ ಶೆಟ್ಟಿ.. ಕೋಟ್ಯಾಂತರ ಮನಸ್ಸುಗಳನ್ನು ಗೆದ್ದ ಪಟಾಕಿ‌ ಪೋರಿ..!

4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್​ ಅಯ್ಯರ್​​, ಆಪತ್ಭಾಂದವ ಕೆ.ಎಲ್​ ರಾಹುಲ್​ ಕೂಡ ಸಂಕಷ್ಟದಲ್ಲಿದ್ದ ತಂಡದ ಕೈ ಹಿಡಿಯಲಿಲ್ಲ. 3 ರನ್​ಗೆ ಶ್ರೇಯಸ್​ ಅಯ್ಯರ್​ ಸುಸ್ತಾದ್ರೆ, ರಾಹುಲ್​ 1 ರನ್​ಗಳಿಸಿ ನಿರ್ಗಮಿಸಿದ್ರು. ತಂಡದ ಸೂಪರ್​ ಸ್ಟಾರ್​​ಗಳೆಲ್ಲಾ ಫ್ಲಾಪ್​ ಶೋ ನೀಡಿದ್ರೆ, ಕಿಂಗ್​ ವಿರಾಟ್​ ಕೊಹ್ಲಿ ಕ್ರಿಸ್​ ಕಚ್ಚಿ ನಿಂತ್ರು. ಇಂದೋರ್​ನ​ ಅಗ್ನಿಪರೀಕ್ಷೆಯ ಕಣದಲ್ಲಿ ಏಕಾಂಗಿ ಹೋರಾಟ ನಡೆಸಿದ್ರು. ಕ್ಲಾಸ್​ ಆಟವನ್ನಾಡಿದ ಕೊಹ್ಲಿ ಬ್ಲ್ಯಾಕ್​​ಕ್ಯಾಪ್ಸ್​ ಬೆವರಿಳಿಸಿದ್ರು. 

ಸೆಟ್​ ಆಗುವವರೆಗೆ ತಾಳ್ಮೆಯ ಆಟವಾಡಿದ ವಿರಾಟ್​ ಕೊಹ್ಲಿ, ಬಳಿಕ ಬೌಲರ್​ಗಳ ಬೆಂಡೆತ್ತಿದ್ರು. ಪ್ರಮುಖ ಬ್ಯಾಟರ್​​ಗಳು ಪೆವಿಲಿಯನ್​ ಸೇರಿದ ವೇಳೆ ಆಲ್​​ರೌಂಡರ್​ ನಿತೀಶ್​ ರೆಡ್ಡಿ ಜೊತೆಗೆ ಅದ್ಭುತ ಪಾರ್ಟ್​​ನರ್​​ಶಿಪ್​ ಕಟ್ಟಿದ್ರು. 5ನೇ ವಿಕೆಟ್​ಗೆ ವಿರಾಟ್​​ ಕೊಹ್ಲಿ - ನಿತೀಶ್​ ರೆಡ್ಡಿ 88 ರನ್​ಗಳ ಜೊತೆಯಾಟವಾಡಿದ್ರು. ಅದ್ಭುತ ಅರ್ಧಶತಕ ಸಿಡಿಸಿದ ನಿತೀಶ್ ರೆಡ್ಡಿ 53 ರನ್​​ಗಳಿಸಿ ಔಟಾದ್ರು. ಬಳಿಕ ಬ್ಯಾಟಿಂಗ್​ಗೆ ಬಂದ ರವೀಂದ್ರ ಜಡೇಜಾ ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದ್ರು. ಆದ್ರೆ, ಕೊಹ್ಲಿಯಲ್ಲಿ ಕಿಚ್ಚು ಮಾತ್ರ ಕಡಿಮೆಯಾಗಲಿಲ್ಲ. ಒಂದು ತುದಿಯಲ್ಲಿ ವಿಕೆಟ್​ ಬೀಳ್ತಿದ್ರೆ, ಇನ್ನೊಂದೆಡೆ ಕೊಹ್ಲಿ ಅದೇ ಬೌಲರ್​​ಗಳ ಮೇಲೆ ಸವಾರಿ ಮಾಡ್ತಾ ರನ್​ ಕೊಳ್ಳೆ ಹೊಡೆದ್ರು. 

ಇದನ್ನೂ ಓದಿ:ಬಿಗ್​ ಬಾಸ್​ ಟ್ರೋಫಿ ಗೆದ್ದು ಬೀಗಿದ ಗಿಲ್ಲಿ ನಟ.. ಸೀಸನ್ 12ಕ್ಕೆ ಅದ್ದೂರಿ ತೆರೆ..!

7ನೇ ವಿಕೆಟ್​​ಗೆ ವೇಗಿ ಹರ್ಷಿತ್​​​ ರಾಣಾ ಜೊತೆಗೂಡಿ ವಿರಾಟ್​ ಕೊಹ್ಲಿ ಸಾಲಿಡ್​ ಜೊತೆಯಾಟವಾಡಿದ್ರು. 40ನೇ ಓವರ್​​ನ ಕೊನೆಯ ಎಸೆತದಲ್ಲಿ 1 ರನ್​ಗಳಿಸಿದ ಕೊಹ್ಲಿ ಏಕದಿನ ಕ್ರಿಕೆಟ್​ನ 54ನೇ ಶತಕ ಸಿಡಿಸಿ ಸಂಭ್ರಮಿಸಿದ್ರು. 91 ಎಸೆತಗಳಲ್ಲಿ ಶತಕ ಪೂರೈಸಿದ ಬಳಿಕ ಕೊಹ್ಲಿ ಮತ್ತಷ್ಟು ಅಗ್ರೆಸ್ಸಿವ್​ ಆಟ ಶುರುವಿಟ್ಟುಕೊಂಡ್ರು. ಹರ್ಷಿತ್​ ರಾಣಾ ಕೂಡ ಕೊಹ್ಲಿಗೆ ಸಾಥ್​ ನೀಡಿದ್ರು. ಕಿವೀಸ್​ ಬೌಲರ್​​ಗಳನ್ನ ಮನಬಂದಂತೆ ದಂಡಿಸಿದ ಡೆಲ್ಲಿ ಬಾಯ್ಸ್​ 69 ಎಸೆತಕ್ಕೆ 99 ರನ್​ಗಳ ಜೊತೆಯಾಟವಾಡಿದ್ರು. 

ಏಕದಿನ ಮಾದರಿಯಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ ಹರ್ಷಿತ್​ ರಾಣಾ ಕ್ರೂಶಿಯಲ್​ ಟೈಮ್​ನಲ್ಲಿ ವಿಕೆಟ್​​ ಕೈ ಚೆಲ್ಲಿದ್ರು. 52 ರನ್​ಗಳಿಸಿ ಹರ್ಷಿತ್​ ರಾಣಾ ಔಟಾಗ್ತಿದ್ದಂತೆ ಪಂದ್ಯದ ಗತಿಯೇ ಬದಲಾಯ್ತು. ಬಳಿಕ ಬ್ಯಾಟಿಂಗ್​ಗೆ ಬಂದ ಸಿರಾಜ್​ ಕೂಡ ಮೊದಲ ಎಸೆತಕ್ಕೆ ಔಟಾದ್ರು. ವಿರಾಟ್​ ಕೊಹ್ಲಿಯ ಏಕಾಂಗಿ ಹೋರಾಟ ಕೂಡ 45.4ನೇ ಓವರ್​​ನಲ್ಲಿ ಅಂತ್ಯವಾಯ್ತು. 10 ಬೌಂಡರಿ, 3 ಸಿಕ್ಸರ್​ ಸಿಡಿಸಿದ ಕೊಹ್ಲಿ 108 ಎಸೆತಗಳಲ್ಲಿ 124 ರನ್​ಗಳಿಸಿ ನಿರ್ಗಮಿಸಿದ್ರು. ಅದೇ ಓವರ್​ನ ಕೊನೆಯ ಎಸೆತದಲ್ಲಿ ಕುಲ್​ದೀಪ್​ ಯಾದವ್​​ ರನೌಟ್​ ಆಗೋದ್ರೊಂದಿಗೆ ಟೀಮ್​ ಇಂಡಿಯಾ ಆಲೌಟ್​ ಆಯ್ತು. 

296 ರನ್​ಗಳಿಗೆ ಟೀಮ್​ ಇಂಡಿಯಾ ಆಲೌಟ್​ ಆಯ್ತು. 41 ರನ್​ಗಳ ಭರ್ಜರಿ ಗೆಲುವು ದಾಖಲಿಸಿದ ನ್ಯೂಜಿಲೆಂಡ್​​ 2-1 ಅಂತರದಲ್ಲಿ ಸರಣಿ ಜಯಿಸಿತು. ಜೊತೆಗೆ ಭಾರತದ ನೆಲದಲ್ಲಿ ಚೊಚ್ಚಲ ಏಕದಿನ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಿತು.

ಇದನ್ನೂ ಓದಿ:Bigg Boss Finale: ಅಶ್ವಿನಿ ಗೌಡಗೆ ಬಿಗ್‌ ಶಾಕ್..‌ ಮೂರನೇ ಸ್ಥಾನಕ್ಕೆ‌ ಬಿಗ್‌ ಬಾಸ್ ಜರ್ನಿ ಎಂಡ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

India vs NewZealand IND vs NZ
Advertisment