/newsfirstlive-kannada/media/media_files/2026/01/18/gilli-nata-1-2026-01-18-23-31-18.jpg)
ಬಿಗ್​ ಬಾಸ್ ಸೀಸನ್​​ 12ರ ವಿನ್ನರ್ (Bigg Boss winner) ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮಾತುಗಾರ, ಹಳ್ಳಿ ಹೈದ ಗಿಲ್ಲಿ ನಟ (ನಟರಾಜ್) ಬಿಗ್​​ ಬಾಸ್​ ಟ್ರೋಫಿಯನ್ನ ಎತ್ತಿ ಹಿಡಿದಿದ್ದಾರೆ. ಮಾತಿನ ಮಲ್ಲಿ ರಕ್ಷಿತಾ ಶೆಟ್ಟಿ ರನ್ನರ್ ಅಪ್​ ಆಗಿ ಹೊರ ಹೊಮ್ಮಿದ್ದಾರೆ. ಆ ಮೂಲಕ 112 ದಿನಗಳ ಬಿಗ್ ಶೋಗೆ ಇವತ್ತು ತೆರೆ ಬಿದ್ದಿದೆ.
ಬಿಗ್​ ಬಾಸ್ ಅಂದ್ರೆ ವ್ಯಕ್ತಿತ್ವದ ಆಟ. ಪ್ರತಿಭೆಯನ್ನು ಶೋಧಿಸುತ್ತ ವ್ಯಕ್ತಿತ್ವವನ್ನು ಅನಾವರಣ ಮಾಡುವ ಕಲೆಗಾರಿಕೆಯೇ ಬಿಗ್​ ಬಾಸ್​ನ ತಾಖತ್ತು. ವ್ಯಕ್ತಿತ್ವದ ಆಟದಲ್ಲಿ ಈ ವರ್ಷ ಒಟ್ಟು 25 ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡಿದ್ದರು. ಆಟ, ವ್ಯಕ್ತಿತ್ವ ಮತ್ತು ಭಾವನೆ ತುಂಬಿದ್ದ ಬಿಗ್ ಮನೆಯು ಯುದ್ಧ ಭೂಮಿಯಾಗಿ ಅನಾವರಣಗೊಂಡಿತ್ತು. 112 ದಿನಗಳ ಕಾಲ ನಡೆದ ಮಸ್ತ್ ಮನರಂಜನೆಯ ಧಮಾಕಾದಲ್ಲಿ ಯಾರು ಗೆಲ್ಲಬೇಕು ಅನ್ನೋದನ್ನು ವೀಕ್ಷಕರು ನಿರ್ಧರಿಸಿ, ಗಿಲ್ಲಿ ಕೈಗೆ ಟ್ರೋಫಿ ಕೊಟ್ಟಿದ್ದಾರೆ.
ಇದನ್ನೂ ಓದಿ: ಹೆಂಡ್ತಿಯನ್ನೇ ಅಕ್ಕ ಎಂದು ಪರಿಚಯಿಸಿ ಯುವತಿಗೆ ಭಾರೀ ವಂಚನೆ.. ಕೋಟಿ ಕೋಟಿ ಹಣ ನುಂಗಿದ ಆರೋಪ
/filters:format(webp)/newsfirstlive-kannada/media/media_files/2025/12/29/gilli-nata-16-2025-12-29-12-32-39.jpg)
ಕಿಚ್ಚ ಸುದೀಪ್ ಅವರು ಗಿಲ್ಲಿ ನಟ ‘ಬಿಗ್​ ಬಾಸ್ ವಿನ್ನರ್’ ಎಂದು ಘೋಷಣೆ ಮಾಡಿದ್ದಾರೆ. ಸುದೀಪ್ ಘೋಷಣೆ ಬೆನ್ನಲ್ಲೇ ಗಿಲ್ಲಿ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಪಟಾಕಿ ಸಿಡಿಸಿ ರಾಜ್ಯದ ಮೂಲೆ ಮೂಲೆಯಲ್ಲಿರುವ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಗೆಲ್ಲಿ ಗೆಲುವಿಗಾಗಿ ವಿವಿಧ ಭಾಗಗಳಲ್ಲಿ ಪೂಜೆ, ಪುನಸ್ಕಾರ, ಅನ್ನದಾಸೋಹ ನಡೆದಿತ್ತು. ಜೊತೆಗೆ ದೊಡ್ಡ ದೊಡ್ಡ ಫ್ಲೆಕ್ಸ್, ಬ್ಯಾನರ್​ಗಳ ಮೂಲಕ ವೋಟಿಂಗ್ ಪ್ರಚಾರ ಕಾರ್ಯ ನಡೆದಿತ್ತು.
ಗಿಲ್ಲಿ ಯಾರು..?
ಗಿಲ್ಲಿ ನಟನ ನಿಜವಾದ ಹೆಸರು ʻನಟರಾಜ್ʼ. ಇವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರದ ಹಳ್ಳಿಯ ರೈತ ಕುಟುಂಬದಿಂದ ಬಂದವರು. ಗಿಲ್ಲಿ ನಟ ತಮ್ಮ 10ನೇ ತರಗತಿ ಪೂರ್ಣಗೊಳಿಸಿದ ನಂತರ 2 ವರ್ಷಗಳ ಐಟಿಐ ಕೋರ್ಸ್ ಮಾಡಿದರು. ಪಕ್ಕಾ ಹಳ್ಳಿ ಪ್ರತಿಭೆಯಾಗಿರುವ ಗಿಲ್ಲಿ, ಮಾತನಾಡುವ ಶೈಲಿಯನ್ನೇ ತನ್ನ ಕಾಮಿಡಿಯಲ್ಲಿ ಬಳಸಿ ಜನಪ್ರಿಯರಾಗಿದ್ದಾರೆ. ಹಳ್ಳಿಯಿಂದ ಬೆಂಗಳೂರಿಗೆ ಬಂದ ಬಳಿಕ ವಿವಿಧ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಗಿಲ್ಲಿಗೆ, ಬಿಗ್​ ಬಾಸ್ ಹೊಸ ಮೈಲಿಗಲ್ಲನ್ನೇ ತಂದುಕೊಟ್ಟಿದೆ.
/filters:format(webp)/newsfirstlive-kannada/media/media_files/2026/01/18/gilli-nata-2026-01-18-23-26-46.jpg)
ಟಿವಿ ವಾಹಿನಿಗಳ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್​ ಬಾಸ್​ಗೆ ಭಾರೀ ಜನಪ್ರಿಯತೆ ಇದೆ. ದೇಶದಲ್ಲಿ ಬಿಗ್ ಬಾಸ್ ಮೊದಲು ಆರಂಭವಾಗಿದ್ದು, ಹಿಂದಿಯಲ್ಲಿ. ಆ ಬಳಿಕ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಆರಂಭಿಸಲಾಯಿತು. ಕನ್ನಡದಲ್ಲಿ ಬಿಗ್ ಬಾಸ್ 12 ಸೀಸನ್​​ಗಳು ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಬಾರಿಯ ಸೀಸನ್​​ನಲ್ಲಿ ಆರು ಸ್ಪರ್ಧಿಗಳು ಫೈನಲಿಸ್ಟ್ ಆಗಿ ಹೊರ ಹೊಮ್ಮಿದ್ದರು. ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಧನುಷ್ ಗೌಡ, ಮ್ಯೂಟಂಟ್ ರಘು ಹಾಗೂ ಕಾವ್ಯ ಶೈವ ಅವರು ಫೈನಲಿಸ್ಟ್ ಆಗಿ ಹೊರ ಹೊಮ್ಮಿದ್ದರು. ಅವರಲ್ಲಿ ಗಿಲ್ಲಿ ನಟ ವಿನ್ನರ್ ಆಗಿದ್ದು, ಟ್ರೋಫಿ ಜೊತೆಗೆ 50 ಲಕ್ಷ ರೂಪಾಯಿ ಗಿಲ್ಲಿ ಕೈ ಸೇರಿದೆ.
ಇದನ್ನೂ ಓದಿ: 13 ವರ್ಷದ ಹುಡುಗನ 23 ವಯಸ್ಸಿನ ಶಿಕ್ಷಕಿ ಪರಾರಿ.. ಆಕೆ ಈಗ ಗರ್ಭಿಣಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us