/newsfirstlive-kannada/media/media_files/2026/01/18/teacher-love-2026-01-18-12-29-02.jpg)
23 ವರ್ಷದ ಶಿಕ್ಷಕಿ 13 ವರ್ಷದ ವಿದ್ಯಾರ್ಥಿಯನ್ನ ಓಡಿಸಿಕೊಂಡು ಹೋದ ಪ್ರಕರಣ ಗುಜರಾತ್​ನ ಸೂರತ್​ನಲ್ಲಿ ದಾಖಲಾಗಿದೆ. ಇನ್ನೊಂದು ಆಘಾತಕಾರಿ ವಿಚಾರ ಅಂದ್ರೆ ಇದೀಗ ಆ ಶಿಕ್ಷಕಿ ಗರ್ಭಿಣಿ ಆಗಿದ್ದಾಳೆ.
ಏನಿದು ಸ್ಟೋರಿ..?
ಮಾನ್ಸಿ ಎಂಬ ಮಹಿಳೆ ಗುಜರಾತ್‌ನ ಸೂರತ್‌ನಲ್ಲಿ ಶಿಕ್ಷಕಿ. ಆಕೆಗೆ 23 ವರ್ಷ. ಅವಳು ತನ್ನ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ 13 ವರ್ಷದ ಹುಡುಗನನ್ನು ಪ್ರೀತಿಸುತ್ತಿದ್ದಳು. ಆತನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಆಕೆ, ಆತನನ್ನು ಪುಸಲಾಯಿಸಿ ಓಡಿಸಿಕೊಂಡು ಹೋಗಿದ್ದಾಳೆ.
ಮಗ ನಾಪತ್ತೆ ಸಂಬಂಧ ಹುಡುಗನ ಅಪ್ಪ ಪೊಲೀಸರಿಗೆ ದೂರು ನೀಡಿದ್ದರು. ಪೋಷಕರ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆಗೆ ಇಳಿದಿದ್ದರು. ನಾಪತ್ತೆಯಾದ ಐದು ದಿನಗಳ ನಂತರ ರಾಜಸ್ಥಾನದ ಗಡಿಯಲ್ಲಿ ಈ ಜೋಡಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ.
ಬಂಧನ ಬೆನ್ನಲ್ಲೇ ತಾನು 20 ವಾರಗಳ ಗರ್ಭಿಣಿ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೇ ನನ್ನ ಮಗುವಿಗೆ ಆ ಬಾಲಕ ತಂದೆ ಆಗುತ್ತಿದ್ದಾನೆ ಎಂದು ಹೇಳಿದ್ದಾಳೆ. ತನಿಖಾಧಿಕಾರಿಗಳು ಪಿತೃತ್ವ ಪರೀಕ್ಷೆ ನಡೆಸಲು ಮುಂದಾಗಿದ್ದು, ಆಕೆ ಗರ್ಭಪಾತಕ್ಕೆ ವಿನಂತಿಸಿದ್ದಾಳೆ ಎಂದು ವರದಿಯಾಗಿದೆ.
ಇದನ್ನೂ ಓದಿ: ನಾರ್ವೆಯಲ್ಲಿ ಹುಟ್ಟಿದ ಪ್ರೀತಿ ವಿಶಾಖಪಟ್ಟಣದಲ್ಲಿ ಒಂದಾಯಿತು..!
/filters:format(webp)/newsfirstlive-kannada/media/media_files/2026/01/18/teacher-love-2-2026-01-18-12-29-58.jpg)
ತನಿಖೆ ವೇಳೆ ಅಪ್ರಾಪ್ತನೊಂದಿಗೆ ಶಿಕ್ಷಕಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದಾಗಿ ಒಪ್ಪಿಕೊಂಡಿದ್ದಾಳೆ. ಇನ್ನು ವೈದ್ಯರು ಆ ಅಪ್ರಾಪ್ತ ಮಗುವಿಗೆ ತಂದೆಯಾಗುವ ದೈಹಿಕ ಸಾಮರ್ಥ್ಯ ಹೊಂದಿದ್ದಾನೆ ಎಂದು ದೃಢಪಡಿಸಿದ್ದಾರೆ. ಹಾಗಿದ್ದೂ ಅವನು, ಆ ಭ್ರೂಣದ ತಂದೆಯೇ ಎಂದು ನಿರ್ಧರಿಸಲು ಡಿಎನ್ಎ ಮಾದರಿ ಸಂಗ್ರಹಿಸಿ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಅದರ ರಿಪೋರ್ಟ್ ಬರಬೇಕಿದೆ.
ಇನ್ನು, ಡಿಎನ್ಎ ರಿಪೋರ್ಟ್ ಬರುವ ಮುನ್ನವೇ ಶಿಕ್ಷಕಿ ಗರ್ಭಪಾತಕ್ಕೆ ಅನುಮತಿ ನೀಡಿ ಕೋರ್ಟ್​​ ಮೆಟ್ಟಿಲೇರಿದ್ದಾಳೆ. ಬ್ರೂಣ ಹೊಟ್ಟೆಯಲ್ಲೇ ಮುಂದುವರಿದ್ರೆ ಆಕೆಗೆ ಮಾನಸಿಕ ಹಿಂಸೆ ಆಗಬಹುದು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಬ್ರೂಣ ತೆಗೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ವೈದ್ಯರು ಆಕೆಗೆ 20 ವಾರ ತುಂಬಿ ಮೂರು ದಿನವಾಗಿದೆ ಎಂದು ತಿಳಿಸಿದ್ದಾರೆ.
/filters:format(webp)/newsfirstlive-kannada/media/media_files/2026/01/18/teacher-love-1-2026-01-18-12-30-10.jpg)
ಪ್ರಕರಣದ ತನಿಖೆ ತನಿಖೆ ಮುಂದುವರೆದಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿ ಮುಂದಿನ ಕ್ರಮವನ್ನು ನಿರ್ಧರಿಸುವಲ್ಲಿ ಡಿಎನ್‌ಎ ರಿಪೋರ್ಟ್ ಪ್ರಮುಖ ಪಾತ್ರ ವಹಿಸುತ್ತದೆ. ಅಪ್ರಾಪ್ತ ವಯಸ್ಕನನ್ನು ಅಪಹರಿಸಿದ ಆರೋಪದ ಮೇಲೆ ಶಿಕ್ಷಕಿ ವಿರುದ್ಧ ಈಗಾಗಲೇ ಬಿಎನ್‌ಎಸ್ ಸೆಕ್ಷನ್ 137 (2) ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us