/newsfirstlive-kannada/media/media_files/2026/01/18/love-story-2026-01-18-11-35-07.jpg)
ಪ್ರೀತಿಗೆ ವಯಸ್ಸು, ಧರ್ಮ, ಜಾತಿ ಇಲ್ಲ ಎಂದು ಹೇಳುತ್ತಾರೆ. ಪ್ರೀತಿ ಯಾರ ಮೇಲೂ, ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಆಗಬಹುದು. ಪ್ರೀತಿಗೆ ಯಾವುದೇ ಗಡಿಗಳಿಲ್ಲ. ಅಂತೆಯೇ ಏಳು ಸಮುದ್ರಗಳ ಆಚೆ ಜನಿಸಿದ ಯುವತಿಯೊಬ್ಬಳು ವಿಶಾಖಪಟ್ಟಣದ ಹುಡುಗನನ್ನು ಪ್ರೀತಿಸುತ್ತಿದ್ದರು. ಆ ಪ್ರೀತಿ ಅಂತಿಮವಾಗಿ ಮದುವೆಯ ಹಂತ ತಲುಪಿದೆ. ಶೀಘ್ರದಲ್ಲೇ, ಇಬ್ಬರೂ ಮದುವೆ ಮೂಲಕ ಒಂದಾಗುತ್ತಾರೆ. ಇತ್ತೀಚೆಗೆ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿದೆ.
ನಾರ್ವೆಯಲ್ಲಿ ಪ್ರೀತಿ
ಅನೇಕ ಭಾರತೀಯರು ಶಿಕ್ಷಣ ಮತ್ತು ಕೆಲಸಕ್ಕಾಗಿ ವಿದೇಶಗಳಿಗೆ ಹೋಗ್ತಾರೆ. ಕೆಲವರು ತಮ್ಮ ಕುಟುಂಬಗಳೊಂದಿಗೆ ಅಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ. ವಿದೇಶಗಳಿಗೆ ಹೋಗಿ, ಇಷ್ಟವಾದ ಜನರ ಪ್ರೀತಿಸಿ ಅಲ್ಲಿಯೇ ಮದುವೆಯಾಗುವ ಘಟನೆಗಳನ್ನು ನೋಡುತ್ತೇವೆ. ಈ ಪ್ರಕರಣ ಕೂಡ ಅದೇ ರೀತಿಯದ್ದು.
ಇದನ್ನೂ ಓದಿ:ಇವತ್ತು ರೋಹಿತ್-ಕೊಹ್ಲಿ ಫ್ಯಾನ್ಸ್​ಗೆ ಸ್ಪೆಷಲ್ ಡೇ.. ವರ್ಷದ FIRST HALF ಮುಗಿಸಿದ ದಿಗ್ಗಜರು..!
ವಿಶಾಖಪಟ್ಟಣದ ಸೈಮನ್​, 2016ರಿಂದ ನಾರ್ವೆಯಲ್ಲಿ ಬ್ಯಾಂಕ್​ನಲ್ಲಿ ಕೆಲಸ ಮಾಡ್ತಿದ್ದಾರೆ. ಎರಡು ವರ್ಷಗಳ ಹಿಂದೆ ತಾವು ಕೆಲಸ ಮಾಡುವ ಏರಿಯಾದಲ್ಲಿ ತುರಾ ಎಂಬ ಯುವತಿಯನ್ನು ಭೇಟಿಯಾದರು. ಅವರು ಸ್ಪೀಚ್ ಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಭೇಟಿಯಾದರು. ಈ ಪರಿಚಯ ಸ್ವಲ್ಪ ಪ್ರೀತಿಯಾಗಿ ಬದಲಾಯಿತು. ಪರಸ್ಪರ ಆಳವಾಗಿ ಪ್ರೀತಿಸುತ್ತಿದ್ದರು. ಡೇಟಿಂಗ್ ಬಳಿಕ ಇದೀಗ ಮದುವೆಯಾಗಲು ನಿರ್ಧರಿಸಿದರು.
ಅದ್ಧೂರಿ ನಿಶ್ಚಿತಾರ್ಥ ಸಮಾರಂಭ
ಹಿರಿಯರ ಮನವೊಲಿಸಿದ ನಂತರ ದಂಪತಿ ಮದುವೆಯಾಗಲು ನಿರ್ಧರಿಸಿದರು. ಇದರೊಂದಿಗೆ ಅವರು ತಮ್ಮ ಪ್ರೀತಿಯನ್ನು ಹಿರಿಯರ ಗಮನಕ್ಕೆ ತಂದರು. ಎರಡೂ ಕುಟುಂಬಗಳು ಸಹ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರಿಂದ, ನಿಶ್ಚಿತಾರ್ಥವು ನಿಶ್ಚಯವಾಯಿತು. ವಧುವಿನ ಪೋಷಕರು ನಾರ್ವೆಯಿಂದ ವಿಶಾಖಪಟ್ಟಣಕ್ಕೆ ಬಂದರು. ವಧುವಿನ ಕುಟುಂಬ ಸದಸ್ಯರು ಭಾರತೀಯರಲ್ಲಿ ಕಂಡುಬರುವ ಪ್ರೀತಿ ಮತ್ತು ವಾತ್ಸಲ್ಯದಿಂದ ತುಂಬಿ ತುಳುಕುತ್ತಿದ್ದರು. ಅವರ ನಿಶ್ಚಿತಾರ್ಥ ಸಮಾರಂಭವನ್ನು ವಿಶಾಖಪಟ್ಟಣದಲ್ಲಿ ಬಹಳ ವೈಭವದಿಂದ ನಡೆಸಲಾಗಿದೆ.
ಇದನ್ನೂ ಓದಿ:ಲಕ್ಕುಂಡಿ ಉತ್ಖನನ ಜಾಗದಲ್ಲಿ ಬಹೃತ್ ಹಾವು, ಶಿವಲಿಂಗ ಪ್ರತ್ಯಕ್ಷ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us