/newsfirstlive-kannada/media/media_files/2026/01/18/gadaga-lakkundi-2-2026-01-18-11-06-52.jpg)
ಗದಗ: ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಎದುರು ಉತ್ಖನನ ನಡೆಯುತ್ತಿದ್ದು, ಇದೀಗ ಅದೇ ಜಾಗದಲ್ಲಿ ಹಾವು ಪ್ರತ್ಯಕ್ಷವಾಗಿದೆ. ಉತ್ಖನನದ ಹಿನ್ನೆಲೆ ಜನತಾ ಶಿಕ್ಷಣ ಸಮಿತಿ ಕಟ್ಟಡ ತೆರವು ಮಾಡುವಾಗ ಹಾವು ಪ್ರತ್ಯಕ್ಷವಾಗಿದೆ.
ಉತ್ಖನನದ ಹಿನ್ನೆಲೆ ಹಾವು ಪ್ರತ್ಯಕ್ಷ ಆಗಿರಬಹುದು ಎಂದು ಸ್ಥಳೀಯರ ಅಭಿಪ್ರಾಯಪಟ್ಟಿದ್ದಾರೆ. 45 ವರ್ಷಗಳ ಹಿಂದೆ ಜಾತ್ರೆ ಮಾಡುವಾಗ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿತ್ತು. ಈಗ ಉತ್ಖನನ ಮಾಡ್ತಿರೋ ವೇಳೆಯಲ್ಲಿ ಹಾವು ಪ್ರತ್ಯಕ್ಷ ಆಗಿದೆ. ನಿಧಿಯನ್ನ ರಕ್ಷಣೆ ಮಾಡುವ ಕಾವುಲಗಾರ ಎಂದ ಸ್ಥಳೀಯರು ಬಣ್ಣಿಸಿದ್ದಾರೆ.
ಇದನ್ನೂ ಓದಿ:Bigg Boss Finale: ಗಿಲ್ಲಿ ಗೆಲುವಿಗಾಗಿ ಅಭಿಮಾನಿಗಳಿಂದ ಅನ್ನದಾಸೋಹ
/filters:format(webp)/newsfirstlive-kannada/media/media_files/2026/01/18/gadaga-lakkundi-1-2026-01-18-11-07-21.jpg)
ಈ ದೇವಸ್ಥಾನದ ಬಳಿ ಬೃಹತ್ ನಿಧಿ ಇದೆ. ಆ ನಿಧಿಯನ್ನ ರಕ್ಷಣೆ ಮಾಡಲು ಹಾವು ಕಾವಲುಗಾರನಂತಿದೆ. ಹಾವು ಪ್ರತ್ಯಕ್ಷದಿಂದ ಹಲವಾರು ಅನುಮಾನಗಳು, ಆತಂಕಗಳು ಮನೆ ಮಾಡಿವೆ. ಹಾವು ನೋಡಿದ ತಕ್ಷಣ ಜೆಸಿಬಿ ಕೆಲಸ ಬಿಟ್ಟು ಕೆಲಸಗಾರರು ಓಡಿ ಹೋಗಿದ್ದಾರೆ. ತಡ ರಾತ್ರಿ 4 ಗಂಟೆ ಸುಮಾರಿಗೆ ಹಾವು ಪ್ರತ್ಯಕ್ಷವಾಗಿದ್ದರಿಂದ ಅಲ್ಲಿನ ಕಾರ್ಮಿಕರಲು ಕೆಲಹೊತ್ತು ಗಲಿಬಿಲಿಗೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಇವತ್ತು ರೋಹಿತ್-ಕೊಹ್ಲಿ ಫ್ಯಾನ್ಸ್​ಗೆ ಸ್ಪೆಷಲ್ ಡೇ.. ವರ್ಷದ FIRST HALF ಮುಗಿಸಿದ ದಿಗ್ಗಜರು..!
/filters:format(webp)/newsfirstlive-kannada/media/media_files/2026/01/18/gadaga-lakkundi-2026-01-18-11-07-36.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us