ಇವತ್ತು ರೋಹಿತ್-ಕೊಹ್ಲಿ ಫ್ಯಾನ್ಸ್​ಗೆ ಸ್ಪೆಷಲ್ ಡೇ.. ವರ್ಷದ FIRST HALF ಮುಗಿಸಿದ ದಿಗ್ಗಜರು..!

ನ್ಯೂಜಿಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯ ಟೀಮ್ ಇಂಡಿಯಾಗೆ ಅತ್ಯಂತ ಮಹತ್ವದ ಪಂದ್ಯ. ಅಷ್ಟೇ ಅಲ್ಲ, ತಂಡದ ಸೂಪರ್​ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೂ ಈ ಪಂದ್ಯ ಪ್ರತಿಷ್ಟೆಯ ಪಂದ್ಯವಾಗಲಿದೆ. ರೋ-ಕೊ ಮೇಲೆ ಎಲ್ಲರ ಕಣ್ಣು ಯಾಕೆ?

author-image
Ganesh Kerekuli
Rohit Kohli
Advertisment
  • ಇನ್ನು 5 ತಿಂಗಳು ಅಭಿಮಾನಿಗಳಿಗೆ ಕಾಣೋದಿಲ್ಲ ರೋ-ಕೊ
  • ವಿಶ್ವಕಪ್​ಗೂ ಮುನ್ನ ರೋ-ಕೊಗೆ ಹಲವು ಸವಾಲುಗಳು
  • 2026ರಲ್ಲಿ ರೋಹಿತ್-ಕೊಹ್ಲಿ ಯಾಮಾರೋ ಆಗಿಲ್ಲ..!

ನ್ಯೂಜಿಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯ ಟೀಮ್ ಇಂಡಿಯಾಗೆ ಅತ್ಯಂತ ಮಹತ್ವದ ಪಂದ್ಯ. ಅಷ್ಟೇ ಅಲ್ಲ, ತಂಡದ ಸೂಪರ್​ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೂ ಈ ಪಂದ್ಯ ಪ್ರತಿಷ್ಟೆಯ ಪಂದ್ಯವಾಗಲಿದೆ. ರೋ-ಕೊ ಮೇಲೆ ಎಲ್ಲರ ಕಣ್ಣು ಯಾಕೆ?

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ. ಇಬ್ಬರೂ ಮಾಡ್ರನ್ ಡೇ ಕ್ರಿಕೆಟ್​​ನ ಗ್ರೇಟ್ ಪ್ಲೇಯರ್ಸ್​. ಅದ್ರಲ್ಲೂ ವೈಟ್​​ಬಾಲ್ ಕ್ರಿಕೆಟ್​ನಲ್ಲಿ ರೋ-ಕೊ, ಮಾಡದ ಸಾಧನೆ ಇಲ್ಲ. ಬರೆಯದ ದಾಖಲೆ ಇಲ್ಲ. ಹಾಗಾಗೇ ರೋಹಿತ್-ಕೊಹ್ಲಿ ಮೇಲೆ, ಪ್ರತಿ ಪಂದ್ಯದಲ್ಲೂ ನಿರೀಕ್ಷೆಗಳು ಹೆಚ್ಚಾಗಿರೋದು. ಸದ್ಯ ಹಿಟ್​​​ಮ್ಯಾನ್ ರೋಹಿತ್ ಮತ್ತು ಕಿಂಗ್ ಕೊಹ್ಲಿ, ಕ್ರಿಕೆಟ್​​ ಜಗತ್ತಿನಲ್ಲಿ ಭಾರೀ ಸದ್ದು ಮಾಡ್ತಿದ್ದಾರೆ. ಇದಕ್ಕೆ ಕಾರಣ ಇಷ್ಟೇ.

ಇಂದೋರ್​​​ನಲ್ಲಿ ರೋಹಿತ್-ಕೊಹ್ಲಿ ಹಬ್ಬ

ಮಧ್ಯಪ್ರದೇಶದ ರಾಜಧಾನಿ ಇಂದೋರ್​ನಲ್ಲಿ ನಡೆಯಲಿರೋ ಏಕದಿನ ಪಂದ್ಯ, ರೋಹಿತ್, ಕೊಹ್ಲಿಗೆ ಬಿಗ್ ಮ್ಯಾಚ್ ಆಗಲಿದೆ. ರೋ-ಕೊ ಆಟ ಕಣ್ತುಂಬಿಸಿಕೊಳ್ಳಲು ಇಡೀ ದೇಶವೇ ಕಾತರದಿಂದ ಕಾಯ್ತಿದೆ. ಹಾಗಾಗಿ ಇಂದು ಇಂದೋರ್​ನಲ್ಲಿ ರೋಹಿತ್-ಕೊಹ್ಲಿ ಹಬ್ಬ ನಡೆಯಲಿದೆ. ಈ ಪಂದ್ಯವನ್ನ ಮಿಸ್ ಮಾಡ್ಕೊಂಡ್ರೆ, ಅಭಿಮಾನಿಗಳು ಭಾರೀ ನಿರಾಸೆ ಅನುಭವಿಸಲಿದ್ದಾರೆ.

ಇದನ್ನೂ ಓದಿ: Bigg Boss Finale: ಗಿಲ್ಲಿ ಗೆಲುವಿಗಾಗಿ ಅಭಿಮಾನಿಗಳಿಂದ ಅನ್ನದಾಸೋಹ

Rohit sharma (1)

ರೋ-ಕೊಗೆ ವರ್ಷದ FIRST HALF ಮುಗೀತು..!

2026ರಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ಏಕದಿನ ಸರಣಿಯನ್ನ ಆಡಿ ಮುಗಿಸಲಿದೆ. ಆದ್ರೆ ಶುಭ್ಮನ್ ಗಿಲ್ ಪಡೆ, ಮುಂದಿನ ಏಕದಿನ ಸರಣಿ ಆಡೋದು ತಿಂಗಳುಗಳ ಬಳಿಕವೇ. ಸದ್ಯ ರೋಹಿತ್, ಕೊಹ್ಲಿ ವರ್ಷದ ಫಸ್ಟ್ ಹಾಫ್​​​ ಮುಗಿಸಿದ್ದಾರೆ. ಇನ್ನೇನಿದ್ರೂ ರೋ-ಕೊ ಏಕದಿನ ಸರಣಿ ಆಡೋದು, ಸೆಕೆಂಡ್ ಹಾಫ್​ನಲ್ಲಿ. ಅದು ಜುಲೈ ತಿಂಗಳಲ್ಲಿ, ಇಂಗ್ಲೆಂಡ್​​​ನಲ್ಲಿ ಇಂಗ್ಲೆಂಡ್ ವಿರುದ್ಧ.

5 ತಿಂಗಳು ರೋಹಿತ್, ಕೊಹ್ಲಿ ಫ್ಯಾನ್ಸ್​ಗೆ ಕಾಣೋದಿಲ್ಲ

ನ್ಯೂಜಿಲೆಂಡ್​​​​​ ಏಕದಿನ ಸರಣಿಯ ಬಳಿಕ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯನ್ನ ಆನ್​ಫೀಲ್ಡ್​ನಲ್ಲಿ ನೋಡಲು ಸಾಧ್ಯವಿಲ್ಲ. ರೋಹಿತ್​​ ಭಾರತದಲ್ಲಿ ಇರ್ತಾರೆ. ಹಾಗೋ ಹೀಗೋ ಅವರನ್ನ ನೋಡಬಹುದು.! ಆದ್ರೆ ಕೊಹ್ಲಿ, ಲಂಡನ್​​ನಲ್ಲಿ ಸೆಟಲ್ ಆಗಿರೋದ್ರಿಂದ, ಅವರನ್ನ ನೋಡೋದು ಕಷ್ಟ ಮತ್ತು ತೀರ ಅಪರೂಪ. 5 ತಿಂಗಳು ಟೀಮ್​ ಇಂಡಿಯಾ ಜರ್ಸಿಯಲ್ಲಿ ಇಬ್ಬರೂ ಕಾಣಿಸಲ್ಲ. ಇಬ್ಬರೂ ಲೆಜೆಂಡ್​​ಗಳನ್ನ ಫ್ಯಾನ್ಸ್ ಪಕ್ಕಾ ಮಿಸ್ ಮಾಡಿಕೊಳ್ತಾರೆ.

ಇದನ್ನೂ ಓದಿ: ಈ ಸ್ಪರ್ಧಿ ಬಿಗ್ ಬಾಸ್ ಗೆದ್ದೇ ಗೆಲ್ಲುತ್ತಾನೆ -ಭವಿಷ್ಯ ನುಡಿದ ಅರುಣ್ ಸಾಗರ್​..! video

Kohli

ಆಫ್ರಿಕಾದಲ್ಲಿ ನಡೆಯಲಿರೋ 2027ರ ಏಕದಿನ ವಿಶ್ವಕಪ್​ಗೂ ಮುನ್ನ ರೋಹಿತ್ ಮತ್ತು ಕೊಹ್ಲಿ, ಸಾಲು ಸಾಲು ಸವಾಲುಗಳನ್ನ ಎದುರಿಸಲಿದ್ದಾರೆ. ಮೊದಲಿಗೆ ರೋ-ಕೊ ನಿರಂತರವಾಗಿ ಕ್ರಿಕೆಟ್ ಅಭ್ಯಾಸ ನಡೆಸಬೇಕು. ಫಿಟ್ನೆಸ್ ಕಾಯ್ದುಕೊಳ್ಳಬೇಕು. ಕ್ರಿಕೆಟ್​ನಿಂದ ಬ್ರೇಕ್​ ತೆಗೆದುಕೊಂಡ ಬಳಿಕ, ಇಂಜುರಿ ಕಾಟ ಇರಲಿದೆ. ಆದ್ರೆ ರೋ-ಕೊ ಅದ್ರಿಂದ ತಪ್ಪಿಸಿಕೊಳ್ಳಬೇಕು. 24*7 ಯಾವಾಗ ಕರೆದ್ರೂ, ಕ್ರಿಕೆಟ್​ ಆಡೋಕೆ ರೆಡಿಯಾಗಿರಬೇಕು. ಇವೆಲ್ಲ ಚಾಲೆಂಜಸ್​ ಅನ್ನ ಲೆಜೆಂಡ್ಸ್ ಮೆಟ್ಟಿನಿಲ್ಲಬೇಕು. 

ಟೀಮ್ ಇಂಡಿಯಾ ದಿಗ್ಗಜರಿಗೆ 2026 ಅತ್ಯಂತ ಮಹತ್ವದ ವರ್ಷ. 2026ರಲ್ಲಿ ರೋ-ಕೋ ಯಾಮಾರೋ ಹಾಗಿಲ್ಲ. ಇಬ್ಬರೂ ಸ್ವಲ್ಪ ಯಾಮಾರಿದ್ರೂ, ಕರಿಯರ್ ಎಂಡ್ ಆಗೋ ಎಲ್ಲಾ ಸಾಧ್ಯಗಳಿವೆ. ಆನ್​ಫೀಲ್ಡ್ ಮತ್ತು ಆಫ್ ದ ಫೀಲ್ಡ್​ ಎರಡರಲ್ಲೂ, ಈ ಹಿಂದಿನಂತೆ ಮೆಚ್ಯರಿಟಿ ತೋರಿಸಬೇಕು. 2026, ನಮ್ಮ ಅದೃಷ್ಟದ ವರ್ಷ ಅಂತ ಭಾವಿಸಬೇಕು. ಸಮಸ್ಯೆಗಳನ್ನ ಮೆಟ್ಟಿನಿಲ್ಲಬೇಕು. ಅಂದುಕೊಂಡಿದ್ದನ್ನ ಸಾಧಿಸಬೇಕು.  

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ಕ್ರಿಕೆಟ್​ನಲ್ಲಿ ಅಪಾರ ಅನುಭವ ಹೊಂದಿರುವವರು. ಹಾಗಾಗಿ ಇಬ್ಬರೂ ತಮ್ಮ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಯಾವುದೇ ಕಾರಣಕ್ಕೆ ಅಭಿಮಾನಿಗಳಿಗೆ ನಿರಾಸೆ ಮಾಡೋದಿಲ್ಲ.

ಇದನ್ನೂ ಓದಿ: ಇವತ್ತು IND vs NZ ಫೈನಲ್​ ಫೈಟ್.. ಗೆಲ್ಲೋದ್ಯಾರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rohith Sharma Virat Kohli Rohit Sharma India vs NewZealand IND vs NZ
Advertisment